ಎ ಮಂಜುಗೆ ಸೆಡ್ಡು : ಬಿಜೆಪಿಗೆ ಮರಳಿದ ಯೋಗ ರಮೇಶ್
Team Udayavani, Dec 4, 2021, 7:14 PM IST
ಬೆಂಗಳೂರು : ಮಾಜಿ ಶಾಸಕ ಎ ಮಂಜು ಪಕ್ಷದಿಂದ ದೂರ ಸರಿದ ಹಿನ್ನೆಲೆಯಲ್ಲಿ, ಅವರ ಎದುರಾಳಿಯಾಗಿದ್ದ ಯೋಗ ರಮೇಶ್ ಅವರನ್ನು ಬಿಜೆಪಿ ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ.
ಕಳೆದ ಲೋಕಸಭಾ ಚುನಾವಣೆ ವೇಳೆ ಎ ಮಂಜು ಬಿಜೆಪಿ ಸೇರಿದ್ದಾಗ, ಅಸಮಧಾನಗೊಂಡು ಯೋಗ ರಮೇಶ್ ಕಾಂಗ್ರೆಸ್ ಸೇರಿದ್ದರು.
ಯೋಗಾ ರಮೇಶ್ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅರಕಲಗೂಡು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಕಾಂಗ್ರೆಸ್ ಗೆ ಸೇರಿ ತಪ್ಪು ಮಾಡಿದೆ
ಹಾಸನದಲ್ಲಿ ಜೆಡಿಎಸ್ ಸಂಘಟನೆ ಮೀರಿ ಪಕ್ಷ ಬೆಳೆಸುವ ಕೆಲಸ ಮಾಡಿದ್ದೆವು. ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ಸ್ಪರ್ಧೆಗೆ ಪಕ್ಷ ನನಗೆ ಅವಕಾಶ ಮಾಡಿಕೊಟ್ಟಿತ್ತು. ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಜೊತೆ ಸಮಬಲ ಹೋರಾಟ ಮಾಡಿದ್ದೆವು. ಎಂಪಿ ಚುನಾವಣೆ ವೇಳೆ ಎ ಮಂಜು ಬಿಜೆಪಿ ಗೆ ಬಂದರು, ಅವಾಗ ನಾನು ಕಾಂಗ್ರೆಸ್ ಗೆ ಸೇರಿ ತಪ್ಪು ಮಾಡಿದೆ ಅನ್ನಿಸಿತ್ತು ಎಂದು ಯೋಗ ರಮೇಶ್ ಹೇಳಿದರು.
ಅವತ್ತು ನಾನು ಪಕ್ಷದಲ್ಲಿ ಉಳಿದಿದ್ದರೆ , ನೂರಕ್ಕೆ ನೂರು ಎಂಪಿ ಸ್ಥಾನ ಗೆಲ್ಲಬಹುದಿತ್ತು, ಇಷ್ಟು ದಿನ ಯಾವುದೇ ರಾಜೀ ಮಾಡಿಕೊಳ್ಳದೇ, ಕಾಂಗ್ರೆಸ್, ಜೆಡಿಎಸ್ ಎದುರಿಸಿದ್ದೇವೆ. ಕಾಂಗ್ರೆಸ್ ಸೇರಿದ್ದು ನನ್ನ ಜೀವನದ ಕಹಿ ಘಟನೆ,ನಂತರ ನನಗೆ ಅರಿವು ಆಗಿ ಮತ್ತೆ ಬಿಜೆಪಿ ಸೇರುವ ನಿರ್ಧಾರ ಮಾಡಿದೆ ಎಂದರು.
ಎಲ್ಲರ ಸಹಕಾರದಿಂದ ಪಕ್ಷ ಸೇರಿದ್ದೇನೆ, ಮುಂದೆ ಪಕ್ಷ ಬಲಪಡಿಸುವ ಕೆಲಸ ಮಾಡುತ್ತೇನೆ.ಮುಂದೆ ಎಂಎಲ್ಸಿ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗು ವಿಧಾನಸಭೆ ಚುನಾವಣೆ ಬರುತ್ತದೆ, ಹೀಗಾಗಿ ಅಧ್ಯಕ್ಷರು ಸೇರಿದಂತೆ ಎಲ್ಲರ ಮಾರ್ಗದರ್ಶನದಲ್ಲಿ ಪಕ್ಷದಲ್ಲಿ ಕೆಲಸ ಮಾಡುತ್ತೇನೆ, ಪಕ್ಷ ವಹಿಸಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ, ಅಭ್ಯರ್ಥಿ ಗೆಲ್ಲಿಸಲು ಕೆಲಸ ಮಾಡುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್ ಕೇರ್ ವಿಭಾಗ ಆರಂಭ
Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್
BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು
2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ
50 crores ಆಮಿಷ ಸುಳ್ಳಿನ ಕಂತೆ; ಸೂಕ್ತ ಸಾಕ್ಷಿ ನೀಡಿ ಇಲ್ಲವೇ ED ತನಿಖೆಗೊಪ್ಪಿಸಿ: ಬಿಜೆಪಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.