ಗ್ರಾಮೀಣ ಭಾಗದಲ್ಲೇ ಎಫ್ಎಂಸಿಜಿ ವ್ಯವಹಾರ ಹೆಚ್ಚಳ
Team Udayavani, Dec 4, 2021, 9:00 PM IST
ಹೊಸದಿಲ್ಲಿ: ದೇಶದ ಗ್ರಾಮೀಣ ಭಾಗದಲ್ಲಿ ವ್ಯಾಪಾರ- ವ್ಯವಹಾರ ನಿಧಾನ ಎಂಬ ಕಲ್ಪನೆ ಸುಳ್ಳಾಗಿದ್ದು, ವೇಗವಾಗಿ ಬಿಕರಿಯಾಗುವ ಗ್ರಾಹಕೋತ್ಪನ್ನ (ಎಫ್ಎಂಸಿಜಿ)ಗಳ ಮಾರಾಟ ನವೆಂಬರ್ನಲ್ಲಿ ನಗರ ಪ್ರದೇಶದಲ್ಲಿ ಕಳೆಗುಂದಿದ್ದರೆ ಗ್ರಾಮೀಣ ಭಾಗದಲ್ಲಿ ಚೇತೋಹಾರಿಯಾಗಿತ್ತು ಎಂದು ಮಾರುಕಟ್ಟೆ ಸಮೀಕ್ಷೆಯೊಂದು ತಿಳಿಸಿದೆ.
ದೇಶದ ನಗರ ಪ್ರದೇಶದಲ್ಲಿ 2020ರ ನವೆಂಬರ್ಗೆ ಹೋಲಿಸಿದರೆ ಎಫ್ಎಂಸಿಜಿಗಳ ಮಾರಾಟ ಈ ವರ್ಷದ ನವೆಂಬರ್ನಲ್ಲಿ ಕಡಿಮೆಯಾಗಿತ್ತು. ವಲಸೆ ಕಾರ್ಮಿಕರು, ಸಣ್ಣಪುಟ್ಟ ಅಂಗಡಿ ಮಾಲಕರು ಹಬ್ಬದ ಋತುವಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ಮನೆಗೆ ಮರಳಿದ್ದೇ ಇದಕ್ಕೆ ಕಾರಣ ಎಂದು ಬಿಝೋಮ್ ಎಂಬ ಚಿಲ್ಲರೆ ವಹಿವಾಟು ಸಮೀಕ್ಷಾ ಸಂಸ್ಥೆಯ ಸರ್ವೇ ವರದಿ ಹೇಳಿದೆ. ನಗರ ಪ್ರದೇಶದಲ್ಲಿ ನವೆಂಬರ್ನಲ್ಲಿ ಎಫ್ಎಂಸಿಜಿ ವ್ಯವಹಾರ ಕಳೆದ ವರ್ಷದ ಇದೇ ಅವಧಿಗಿಂತ ಶೇ. 6.3 ಕುಸಿತ ಕಂಡಿದೆ. ಆದರೆ ಗ್ರಾಮೀಣ ಭಾಗದಲ್ಲಿ ಅದು ಕಳೆದ ವರ್ಷದ ಇದೇ ಅವಧಿಗಿಂತ ಶೇ. 17.9 ಹೆಚ್ಚಳವಾಗಿದೆ ಎಂದು ಈ ಸರ್ವೇ ತಿಳಿಸಿದೆ. ದೇಶದ ಒಟ್ಟು ಎಫ್ಎಂಸಿಜಿ ವ್ಯವಹಾರ ವರ್ಷದಿಂದ ವರ್ಷದ ಲೆಕ್ಕಾಚಾರದಲ್ಲಿ ಶೇ. 10.2ರಷ್ಟು ಪ್ರಗತಿ ಕಂಡಿದೆ ಎಂದು ಅದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.