ಎಡಿಯೂರಿನಲ್ಲಿ ಸಿದ್ದು ಚುನಾವಣಾ ಪ್ರಚಾರ ಸಭೆ : ಬಿಜೆಪಿ, ಜೆಡಿಎಸ್ ವಿರುದ್ದ ವಾಗ್ದಾಳಿ
Team Udayavani, Dec 4, 2021, 8:31 PM IST
ಕುಣಿಗಲ್ : ಬಿಜೆಪಿ ಅವರು ಧರ್ಮ, ಜಾತಿ ಆಧಾರದ ಮೇಲೆ ರಾಜಕಾರಣ ಮಾಡಿ ವಾಮ ಮಾರ್ಗದಲ್ಲಿ ಅಧಿಕಾರಕ್ಕೆ ಬಂದರೇ, ಜೆಡಿಎಸ್‌ಗೆ ಯಾವುದೇ ಸಿದ್ದಾಂತಗಳು ಇಲ್ಲ, ದೇವೇಗೌಡರ ಕುಟುಂಬಕ್ಕೆ ಯಾವ ರೀತಿ ಅನುಕೂಲವಾಗುತ್ತದೆಯೋ ಆ ಕಡೆಗೆ ಹೋಗುತ್ತಾರೆ ಆ ಪಕ್ಷ ಅವಕಾಶವಾದಿ ರಾಜಕಾರಣ ಮಾಡಿತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ, ಜೆಡಿಎಸ್ ವಿರುದ್ದ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು,
ಶನಿವಾರ ಎಡಿಯೂರು ಗಂಗಾಧರ ಕಲ್ಯಾಣ ಮಂಟಪದಲ್ಲಿ ವಿಧಾನ ಪರಿಷತ್ ಅಭ್ಯರ್ಥಿ ರಾಜೇಂದ್ರ ರಾಜಣ್ಣ ಪರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬಿಜೆಪಿ ಧರ್ಮ ಜಾತಿ ಆಧಾರದಲ್ಲಿ ರಾಜಕಾರಣ : ಬಿಜೆಪಿ ಅವರು ಧರ್ಮ, ಜಾತಿ ಆಧಾರದ ಮೇಲೆ ರಾಜಕಾರಣ ಮಾಡುತ್ತಾರೆ, ಅವರಿಗೆ ಯಾವುದೇ ಸಿದ್ದಾಂತ, ಕಾರ್ಯಕ್ರಮಗಳು ಇಲ್ಲ, ಸಂವಿಧಾನದ ಮೇಲೆ ನಂಬಿಕೆ ಇಲ್ಲ, ಅಂಬೇಡ್ಕರ್ ಅವರು ಕೊಟ್ಟಿರುವಂತ ಸಂವಿಧಾನ ಅಡಿಯಲ್ಲಿ ಕರ್ತವ್ಯ ನಿರ್ವಹಿಸುವುದ್ದು ಎಲ್ಲಾ ಪಕ್ಷದವ ಜವಾಬ್ದಾರಿ, ಆದರೇ ಬಿಜೆಪಿಯವರು ಸಂವಿಧಾನಕ್ಕೆ ವಿರುದ್ದವಾಗಿದ್ದರೇ, ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹಲವು ಭಾರಿ ಹೇಳಿದ್ದಾರೆ, ಅವರಿಗೆ ಸಮಾನತೆ ಕಲ್ಪಿಸುವಂತ ಬದ್ದತೆ ಇಲ್ಲ, ಹಾಗಾಗಿ ಅವರಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ ಎಂದು ಆರೋಪಿಸಿದರು ಅವರು ಎಲ್ಲಾ ವರ್ಗದ ಜನರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಪಕ್ಷವೆಂದರೇ ಅದು ಕಾಂಗ್ರೆಸ್ ಪಕ್ಷ ಮಾತ್ರ ಎಂದರು ಕಾಂಗ್ರೆಸ್ ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ ಸಂವಿಧಾನದಡಿ ಎಲ್ಲಾ ವರ್ಗ ಜನರಿಗೂ ಸಾಮಾಜಿಕ ನ್ಯಾಯ ಸಮಾನತೆಯ ಹಕ್ಕು, ಸಮಾನತೆಯ ಅಧಿಕಾರದ ಅವಕಾಶ ನೀಡಿದೆ ಎಂದರು.
ಸಿಂಪತಿಗೆ ಹೆಚ್‌ಡಿಕೆ ಅಳುವುದು : ಬಿಜೆಪಿಯು ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದವರು ಜನರ ಆರ್ಶೀವಾದ ಪಡೆದು ಅಧಿಕಾರಕ್ಕೆ ಬಂದವರಲ್ಲ, ಕಳೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದ ಕಾರಣ, ಕೋಮುವಾದಿ ಬಿಜೆಪಿಯನ್ನು ಹೊರಗಿಡುವ ದಿಸೆಯಲ್ಲಿ ಜೆಡಿಎಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದೆವು, ಆದರೆ ಕುಮಾರಸ್ವಾಮಿ ಶಾಸಕರನ್ನು, ಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದೊಳ್ಳದ ಕಾರಣ, ಯಡಿಯೂರಪ್ಪ ಅವರ ಆಸೆ, ಆಮಿಷಗಳು ತೋರಿಸಿ, ಅಪರೇಷನ್ ಕಮಲ ಮಾಡಿದ್ದರಿಂದ ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡರು, ಆದರೆ ಈಗ ಸಿದ್ದರಾಮಯ್ಯನಿಂದ ಅಧಿಕಾರ ಕಳೆದುಕೊಂಡೆ ಎಂದು ಸುಳ್ಳು ಹೇಳುತ್ತಿದ್ದಾರೆ, ಸುಳ್ಳು ಹೇಳುವುದರಲ್ಲಿ ಕುಮಾರಸ್ವಾಮಿ ಅವರು ಬಹಳ ನಿಸ್ಸಿಮ್ಮರು, ಜನರ ಸಿಂಪತಿ ಗಳಿಸಲು ಸಭೆ ಸಮಾರಂಭಗಳಲ್ಲಿ ಅಳುತ್ತಿದ್ದಾರೆ, ಯಾವೋಬ್ಬ ವ್ಯಕ್ತಿ ಸತ್ತರೇ, ಮನೆಯಲ್ಲಿ ಕಷ್ಟಬಂದಾಗ ಹಳವುದನ್ನು ನೋಡಿದ್ದೇನೆ ಆದರೆ ಕುಮಾರಸ್ವಾಮಿ ಅಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಲೇವಡಿ ಮಾಡಿದರು, ಜನ ಆರ್ಶೀವಾದ ಮಾಡಿದರೆ ಅಧಿಕಾರ ಖುರ್ಚಿಯಲ್ಲಿ ಕೂರಬೇಕು, ಜನ ಆರ್ಶೀವಾದ ಮಾಡದಿದ್ದರೇ ಮನೆಯಲ್ಲಿ ಕೂರಬೇಕು, ರಾಜಕಾರಣ ಸಾರ್ವಜನಕ ಸೇವೆ ಮಾಡುವಂತಹ ಕ್ಷೇತ್ರ ಅದು ಪಿತ್ರಾರ್ಜಿತ ಆಸ್ತಿಯಲ್ಲ, ರಾಜಕಾರಣ ಎಂದರೇ ಇವರ ಮನೆಯವರಿಗೇ ಸೇರಿದ್ದು ಕರ್ನಾಟಕ ಎಂದು ತಿಳಿಸಿದುಕೊಂಡಿದ್ದಾರೆ ಅವರಿಗೆ ಯಾವುದೇ ಪಕ್ಷ ಸ್ಪಷ್ಟ ಬಹುಮತ ಬರಬಾರದು, ನಮ್ಮ ಪಕ್ಷ 20-30 ಕ್ಷೇತ್ರಗಳ ಜಯಗಳಿಸಿ ಅಧಿಕಾರಕ್ಕೆ ಬರಬೇಕೆಂಬ ಲೆಕ್ಕಚಾರ ರಾಜಕಾರಣದಲ್ಲಿ ಕುಮಾರಸ್ವಾಮಿ ತೊಡಗಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ : 3 ವರ್ಷದ ಹಿಂದೆ ಜೀವಾವಧಿ ಶಿಕ್ಷೆಗೆ ಗುರಿಯಾಗಿ ತಪ್ಪಿಸಿಕೊಂಡಿದ್ದ ಅಪರಾಧಿ ಸೆರೆ
ಮೀಸಲಾತಿ ಕಾಂಗ್ರೆಸ್ ಕೊಡುಗೆ : ದಿ.ರಾಜೀವ್‌ಗಾಂಧಿ ಅವರ ಅಧಿಕಾರ ಅವಧಿಯಲ್ಲಿ ಸಂವಿಧಾನಕ್ಕೆ 73, 74ನೇ ತಿದ್ದಪಡಿ ಮಾಡಿ ಆ ಮೂಲಕ ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ಪ.ಜಾತಿ, ಪ.ವರ್ಗದ ಜನರಿಗೆ ಮೀಸಲಾತಿ ಕಲ್ಪಿಸಿದರು ಇದರಿಂದ ಶೇ 50 ರಷ್ಟು ಮಹಿಳೆಯರಿಗೆ, ಶೇ. 33 ರಷ್ಟು ಹಿಂದುಳಿದ ವರ್ಗ, ಅಲ್ಪಸಂಖ್ಯಾತರಿಗೆ ಹಾಗೂ ಪ.ಜಾತಿ, ಪ.ಪಂಗಡದವರ ಗ್ರಾ.ಪಂ ಸದಸ್ಯರಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ ಇದರ ವಿರುದ್ದ ಬಿಜೆಪಿಯ ಉಪಾಧ್ಯಕ್ಷ ರಾಮಜೋಹಿಷ್ ಅವರು ಸುಪ್ರೀಂ ಕೋರ್ಟ್ಗೆ ಹೋಗಿದ್ದರು ಅಲ್ಲಿ ಅವರ ದಾವೆ ವಜಾಗೊಂಡಿತ್ತು, ಮೀಸಲಾತಿ ಕಲ್ಪಿಸಿದ್ದು ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲ ಹಾಗಾಗಿ , ಸಾಮಾಜಿಕ ನ್ಯಾಯದಲ್ಲಿ ಬದ್ದತೆ ಇರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಅಧಿಕಾರ ರಾಜೇಂದ್ರ ರಾಜಣ್ಣ ಅವರನ್ನು ಗೆಲ್ಲಿಸಬೇಕೆಂದರು,
ನೈತಿಕತೆ ಇಲ್ಲ : ಉದ್ಯೋಗ ಖಾತ್ರಿ ಯೋಜನೆ, ಆಹಾರ ಭದ್ರತೆ ಖಾಯ್ದೆ ಜಾರಿಗೆ ತಂದವರು, ಡಾ.ಮನಮೋಹನ್ ಸಿಂಗ್ ಅವರು ವಾಜಪೇಯಿ, ನರೇಂದ್ರಮೋದಿ ಅಲ್ಲ, ಎನ್‌ಆರ್‌ಐಜಿ ಇಲ್ಲದಿದ್ದರೇ ಪಂಚಾಯ್ತಿಗೆ ಒಂದು ರೂ ಹಣ ಬರುತ್ತಿರಲಿಲ್ಲ ಎಂದ ಅವರು ನನ್ನ ಅಧಿಕಾರ ಅವಧಿಯಲ್ಲಿ ಉಚಿತವಾಗಿ ಏಳು ಕೆ.ಜಿ ಅಕ್ಕಿಯನ್ನು ನೀಡಿ ಬಡವರ ಹೊಟ್ಟೆ ತುಂಬಿಸುವಂತ ಕೆಲಸ ಮಾಡಿದ್ದೇ, ಆದರೆ ಬಿಜೆಪಿ ಸರ್ಕಾರ ಈಗ ಐದು ಕೆ.ಜಿ ಮಾತ್ರ ನೀಡುತ್ತಿದೆ, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ಏನೇನು ಇಲ್ಲ, ಆದರೆ ಸಾಧನೆ ಮಾಡಿದ್ದೇವೆ ಎಂದು ಹೇಳುತ್ತಿರುವ ಬಿಜೆಪಿಯ ನಾಯಕರಿಗೆ ಮಾನ ಮಾರ್ಯದೆ ಇದೆಯಾ ಎಂದು ಪ್ರಶ್ನಿಸಿದರು, ಮಹಾತ್ಮಗಾಂಧೀಜಿ ಅವರು ಗ್ರಾಮ ಸ್ವರಾಜ್ಯ ಆಗಬೇಕು, ಗ್ರಾಮಗಳ ಹೊಂದದ ಹೊರತು, ದೇಶ ಅಭಿವೃದ್ದಿ ಆಗುವುದಿಲ್ಲ ಎಂದಿದ್ದರು, ಆದರೆ ಆ ಕಲ್ಪನೆಯೇ ಇಲ್ಲ ಹಾಗೂ ಕೇಂದ್ರೀಕೃತ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲದವರು, ಗ್ರಾಮ ಸ್ವರಾಜ್ಯ ಯಾತ್ರೆ ಬಗ್ಗೆ ಮಾತನಾಡುವುದು ಅವರಿಗೆ ನೈತಿಕತೆ ಇದೆಯೇ ಎಂದು ಕಿಡಿಕಾರಿದರು,
ಬಿಜೆಪಿ ಶೇ 40 ಪರಸೆಂಟ್ ಸರ್ಕಾರ : ಬಿಜೆಪಿ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ, ಕೋವಿಂಡ್ ಸಂದರ್ಭದಲ್ಲಿ ಮೆಡಿಷನ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಹೆಣದ ಮೇಲೆ ಲಂಚ ಪಡೆದಿದ್ದಾರೆ, ವಿಧಾನ ಸೌದದಲ್ಲಿ ಭ್ರಷ್ಟಾಚಾರ ಗಬ್ಬೆದು ನಾರುತ್ತಿದೆ, ಯಾವುದೇ ಅಭಿವೃದ್ದಿ ಕೆಲಸ ಕಾರ್ಯಗಳು ಆಗಬೇಕಾದರೇ ಶೇ.40 ರಷ್ಟು ಕಮಿಷನ್ ನೀಡದಿದ್ದರೇ ಯಾವುದೇ ಕೆಲಸಗಳು ಆಗುವುದಿಲ್ಲ ಇದು ನನ್ನ ಆರೋಪವಲ್ಲ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪೇಗೌಡ ಪ್ರಧಾನ ಮಂತ್ರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ, ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ಕಾಂಗ್ರೆಸ್ ದೂರು ನೀಡಿದೆ ಎಂದರು,
ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಗ್ಯಾರಂಟಿ : 20 ಎಂಎಲ್‌ಸಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಿದ್ದರಾಮಯ್ಯ ಬಿಜೆಪಿ ದುರಾಡಳಿತದ ವಿರುದ್ದ ಜನ ಬೇಸತ್ತಿದ್ದಾರೆ ಬದಲಾವಣೆ ಭಯಸಿದ್ದಾರೆ ಹೀಗಾಗಿ 2023 ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತಗಳಿಸಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ರಂಗನಾಥ್ ಅಭ್ಯರ್ಥಿ : ಸಂಸದ ಡಿ.ಕೆ.ಸುರೇಶ್ ಮಾತನಾಡಿ ನಾನು ಇರುವವರೆಗೂ ಕ್ಷೇತ್ರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ, ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಲು ಕೆಲ ವ್ಯಕ್ತಿಗಳು ವಿನಾಕಾರಣ ಗೊಂದಲ ಸೃಷ್ಟಿ ಮಾಡುವುದು ಒಳ್ಳೆ ಬೆಳವಣಿಗೆ ಅಲ್ಲ, ಮುಂದಿನ ಚುನಾವಣೆಯಲ್ಲಿ ಡಾ.ಹೆಚ್.ಡಿ.ರಂಗನಾಥ್ ಅವರೇ ಅಭ್ಯರ್ಥಿ ಆಗಲಿದ್ದಾರೆ ಈ ಸಂಬಂಧ ಕಾರ್ಯಕರ್ತರಲ್ಲಿ ಆತಂಕ ಬ್ಯಾಡ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಡಾ.ಹೆಚ್.ಡಿ.ರಂಗನಾಥ್, ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕ ಷಡಾಕ್ಷರಿ, ಡಿಸಿಸಿ ಅಧ್ಯಕ್ಷ ರಾಮಕೃಷ್ಣಯ್ಯ ಮಾತನಾಡಿದರು, ಅಭ್ಯರ್ಥಿ ರಾಜೇಂದ್ರರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ವೆಂಕಟರಾಮು ಇದ್ದರು,
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.