ಬೈಲಹೊಂಗಲ: ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಬಂಧನ
Team Udayavani, Dec 4, 2021, 9:23 PM IST
ಬೈಲಹೊಂಗಲ: ಸೋಯಾಬಿನ್ ಚೀಲಗಳ ಕಳ್ಳತನ ಸೇರಿದಂತೆ ವಿವಿಧ ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ ತಾಲೂಕಿನ ನೇಸರಗಿ ಪೋಲಿಸರು ಟ್ರ್ಯಾಕ್ಟರ್ ಸಮೇತ ನಾಲ್ವರು ಆರೋಪಿಗಳನ್ನು ಬಂಧಿಸಿ ಅವರಿಂದ ಒಟ್ಟು 7 ಲಕ್ಷ 70 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ನೇಸರಗಿ ಗ್ರಾಮದ ರೈತರಾದ ದೊಡ್ಡಗೌಡ ಬಾಬಾಗೌಡ ಪಾಟೀಲ ಇವರ ಮದನಭಾಂವಿ ಗ್ರಾಮದ ಜಮೀನಿನಲ್ಲಿರುವ ಶೆಡ್ಡಿನಲ್ಲಿ ರೂ.1 ಲಕ್ಷ 25 ಸಾವಿರ ಮೌಲ್ಯದ ಸೋಯಾಬಿನ ಹುರುಳಿ ತುಂಬಿದ 22 ಚೀಲಗಳನ್ನು ನವ್ಹೆಂಬರ 25 ರಂದು ರಾತ್ರಿ ಕಳ್ಳರು ಶೆಡ್ಡಿನ ಕೀಲಿ ಮುರಿದು ದೋಚಿದ್ದರು. ಈ ಕುರಿತು ಜಮೀನಿನ ಮಾಲೀಕ ನ.26 ರಂದು ನೇಸರಗಿ ಪೊಲೀಸ ಠಾಣೆಗೆ ಕಳ್ಳತನವಾದ ಬಗ್ಗೆ ದೂರು ನೀಡಿದ್ದರು. ದೂರು ಆದರಿಸಿದ ತನಿಖೆ ನಡೆಸಿದ ಪೋಲಿಸರು ಆರೋಪಿತರಾದ ನೇಸರಗಿ ಗ್ರಾಮದ ತುಕಾರಾಮ ಫಕೀರಪ್ಪ ಹಂಚಿನಮನಿ, ರಾಮಚಂದ್ರ ಅಪ್ಪಣ್ಣ ವಡ್ಡಯಲ್ಲಪ್ಪಗೋಳ, ಫಕೀರಪ್ಪ ಗಂಗಪ್ಪ ಹಂಚಿನಮನಿ, ಶಂಕರ ಹನುಮಂತಪ್ಪ ಹಂಚಿನಮನಿ ಇವರನ್ನು ಪೋಲಿಸರು ಬಂದಿಸಿದ್ದಾರೆ. ಆರೋಪಿತರು ಸೋಯಾಬಿನ್ ಚೀಲಗಳನ್ನು ನ.25 ರಂದು ಕಳ್ಳತನ ಮಾಡಿ ಮಾರಾಟ ಮಾಡಿದ್ದರು. ಈ ಕುರಿತು ಪೊಲೀಸರ ಚಾಣಾಕ್ಷತೆಯಿಂದ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿತರಿಂದ 1 ಲಕ್ಷ 25 ಸಾವಿರ ರೂ.ಮೌಲ್ಯದ 22 ಚೀಲ, 5 ಲಕ್ಷ ರೂ. ಮೌಲ್ಯದ ಟ್ರ್ಯಾಕ್ಟರ್, ಇನ್ನೊಂದು ಪ್ರಕರಣದಲ್ಲಿ 45 ಸಾವಿರ ರೂ. ಮೌಲ್ಯದ 10 ಗ್ರಾಮ ತೂಕದ ಬಂಗಾರ ಚೈನ್, ಮತ್ತೊಂದು ಪ್ರಕರಣದಲ್ಲಿ 50 ಸಾವಿರ ಮೌಲ್ಯದ 6 ಕ್ವಿಂಟಲ್ 50 ಕೆಜಿ ಸೋಯಾಬಿನ್ ಚೀಲಗಳು, ಮತ್ತೊಂದು ಪ್ರಕರಣದಲ್ಲಿ 50 ಸಾವಿರ ಮೌಲ್ಯದ 15 ಸೋಯಾಬಿನ್ ಚೀಲಗಳನ್ನು ವಶಕ್ಕೆ ಪಡೆದು ಆರೋಪಿತರ ವಿರುದ್ದ ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಪ್ರಕರಣ ಭೇದಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಅಮರನಾಥ ರೆಡ್ಡಿ, ಡಿವೈಎಸ್‌ಪಿ ಶಿವಾನಂದ ಕಟಗಿ, ಸಿಪಿಐ ಉಳವಪ್ಪ ಸಾತೇನಹಳ್ಳಿ ಇವರ ಮಾರ್ಗದರ್ಶನದಲ್ಲಿ ತಂಡ ರಚಿಸಿ ನೇಸರಗಿ ಪಿಎಸ್‌ಐ ವಾಯ್.ಎಲ್.ಶೀಗಿಹಳ್ಳಿ, ಎಎಸ್‌ಐಗಳಾದ ಎಸ್.ಎಂ.ಯರಗಟ್ಟಿಮಠ, ಎಸ್.ವ್ಹಿ.ಪತ್ತಾರ, ಪೇದೆಗಳಾದ ವ್ಹಿ.ಎಸ್.ಯರಗಟ್ಟಿಮಠ, ಆರ್.ಕೆ.ಉದಪುಡಿ, ಎಸ್.ಆರ್.ದೇಸಾಯಿ, ಎ.ಎಸ.ಬಡಿಗೇರ, ಎಸ್.ಐ.ಅಮರಾಪುರ, ಐ.ಬಿ.ನಡುವಿನಹಳ್ಳಿ, ಬಿ.ಐ.ಅರಳೀಕಟ್ಟಿ, ಎಸ್.ಬಿ.ಮುರಗೋಡ, ಬಿ.ಬಿ.ಪಾಟೀಲ ಜಾಲ ಬೀಸಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.
ತನಿಖಾ ತಂಡವನ್ನು ಮೇಲಾಧಿಕಾರಿಗಳು ಅಭಿನಂದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.