ಭಿಕ್ಷೆ ಬೇಡುವ ಕೈಗಳಿಗೆ ಕೃಷಿ ಕಾರ್ಯ
Team Udayavani, Dec 5, 2021, 8:00 AM IST
ದಾವಣಗೆರೆ: ಭಿಕ್ಷೆಗಾಗಿ ಅಂಗಲಾಚುತ್ತಿದ್ದ ಕೈಗಳು ಈಗ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿವೆ! ಇಂಥದ್ದೊಂದು ಮಾದರಿ ಬದಲಾವಣೆ ಮೂಲಕ ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿರುವವರು ದಾವಣಗೆರೆ ಸಮೀಪದ ತುರ್ಚಘಟ್ಟ ಗ್ರಾಮದ ನಿರಾಶ್ರಿತರ ಕೇಂದ್ರದ ನಿವಾಸಿಗಳು. ಇಲ್ಲಿರುವ ಬಹುತೇಕರು ಕೇಂದ್ರಕ್ಕೆ ಬರುವ ಮೊದಲು ಭಿಕ್ಷೆ ಬೇಡುತ್ತಿದ್ದರು. ಕೇಂದ್ರದಲ್ಲಿ ಆಶ್ರಯ ಪಡೆದ ಬಳಿಕ ಅವರೆಲ್ಲರೂ ಕೃಷಿಯಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಪಾಠ ಕಲಿಯುತ್ತಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ ತುರ್ಚ ಘಟ್ಟದ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಪ್ರಸ್ತುತ ಮಹಿಳೆಯರಿ ಸಹಿತ 226 ಮಂದಿಯಿದ್ದಾರೆ. ರಾಜ್ಯದವರಲ್ಲದೆ ತಮಿಳುನಾಡು, ಆಂಧ್ರ, ಕೇರಳ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಲ, ಪಂಜಾಬ್ ಸಹಿತ ವಿವಿಧ ಭಾಗಗಳಿಂದ ಆಗಮಿಸಿದ ನಿರಾಶ್ರಿತರೂ ಇದ್ದಾರೆ. ಭಿಕ್ಷಾಟನೆ ನಿರ್ಮೂಲ ಹಾಗೂ ನಿರ್ಗತಿಕರಿಗೆ ಆಶ್ರಯ ನೀಡುವ ಉದ್ದೇಶದಿಂದ ತೆರೆಯಲಾಗಿರುವ ಈ ಕೇಂದ್ರ ಅನಾಥರ ಪಾಲಿಗೆ ಅನ್ನಾರೋಗ್ಯ ಧಾಮವಾಗಿದೆ.
ಕೃಷಿ ಕೈಂಕರ್ಯ :
ಈ ಕೇಂದ್ರಕ್ಕೆ ಸೇರಿ ವಾಪಸ್ ಹೋಗುವಾಗ ಸ್ವಾವಲಂಬಿ ಬದುಕಿಗೆ ಇವರನ್ನು ಸಿದ್ಧಪಡಿಸಲಾಗುತ್ತದೆ. ಇವರನ್ನು ಕೇಂದ್ರದ 10 ಎಕರೆ ಪ್ರದೇಶದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಕೃಷಿ- ಹೈನುಗಾರಿಕೆ ಕೆಲಸ ಮಾಡಲು ದೈಹಿಕವಾಗಿ ಸಮರ್ಥರಿದ್ದವರು ಹಾಗೂ ಆಸಕ್ತರನ್ನು ಗುರುತಿಸಿ ಅವರನ್ನು ಮಾತ್ರ ಇದರಲ್ಲಿ ತೊಡ ಗಿಸಿಕೊಳ್ಳಲಾಗುತ್ತಿದೆ. ಕೇಂದ್ರದ 50ಕ್ಕೂ ಹೆಚ್ಚು ನಿರಾಶ್ರಿತರು ಕೃಷಿ- ಹೈನುಗಾರಿಕೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಪರಿಣಾಮವಾಗಿ ಕೇಂದ್ರದ ಸುತ್ತ ಇರುವ ಕೃಷಿ ಭೂಮಿಯಲ್ಲಿ ಟೊಮೆಟೋ, ಮೂಲಂಗಿ, ಹುರುಳಿ, ಸೌತೆಕಾಯಿ, ಬೆಂಡೆಕಾಯಿಯಂಥ ವಿವಿಧ ತರಕಾರಿ ಜತೆಗೆ ಬಾಳೆ, ಸೀತಾಫಲ, ಮಾವು, ಅಡಿಕೆ, ಗುಲಾಬಿ, ಮಾವು, ತೊಗರಿ, ಮೆಣಸು ಬೆಳೆಯಲಾಗುತ್ತಿದೆ. ಇಲ್ಲಿ ಬೆಳೆದ ತರಕಾರಿ, ಹಣ್ಣುಗಳನ್ನೇ ಕೇಂದ್ರದ ಆಶ್ರಿತರ ಊಟಕ್ಕೆ ನೀಡಲಾಗುತ್ತಿದೆ. ಕೇಂದ್ರದಲ್ಲಿ ಏಳೆಂಟು ಹಸುಗಳನ್ನು ಸಾಕಲಾಗುತ್ತಿದೆ.
ಕೇಂದ್ರದ ಕೆಲವು ಸಶಕ್ತರನ್ನು ಮಾತ್ರ ಕೃಷಿಯಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಆಶ್ರಯ ಪಡೆದವರಲ್ಲಿ ಹಲವರು ಕೃಷಿ ಕೆಲಸದಲ್ಲಿ ತಮಗೆ ಎಷ್ಟು ಸಾಧ್ಯವೋ ಅಷ್ಟು ತೊಡಗಿಸಿಕೊಳ್ಳುತ್ತಾರೆ. ಭಿಕ್ಷುಕರೇ ಹೆಚ್ಚಾಗಿ ಕೇಂದ್ರದಲ್ಲಿ ಆಶ್ರಯ ಪಡೆಯುವುದರಿಂದ ಅವರಲ್ಲಿ ಸ್ವಾವಲಂಬಿ ಜೀವನ ನಡೆಸಲು ಇದು ಪ್ರೇರಣೆಯೂ ಆಗಿದೆ. ಕೇಂದ್ರದಲ್ಲಿ ಅಗರಬತ್ತಿ ತಯಾರಿ ಘಟಕ ಸ್ಥಾಪಿಸುವ ಯೋಚನೆಯೂ ಇದೆ.–ನಳಿನಿ ಬಿ., ಪ್ರಭಾರಿ ಅಧೀಕ್ಷಕರು, ನಿರಾಶ್ರಿತರ ಪರಿಹಾರ ಕೇಂದ್ರ, ತುರ್ಚಘಟ್ಟ, ದಾವಣಗೆರೆ
–ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್
MUST WATCH
ಹೊಸ ಸೇರ್ಪಡೆ
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.