ಒಮಿಕ್ರಾನ್ ಭೀತಿ: ವಿದೇಶದಿಂದ ಹಲವರ ಪ್ರಯಾಣ ರದ್ದು
Team Udayavani, Dec 5, 2021, 6:38 AM IST
ಮಂಗಳೂರು: ಒಮಿಕ್ರಾನ್ ಆತಂಕವು ವಿಮಾನ ಪ್ರಯಾಣಿಕರ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಅಂತಾರಾಷ್ಟ್ರೀಯ ವಿಮಾನ ಯಾನಿಗಳ ಸಂಖ್ಯೆಯನ್ನು ಕಡಿತ ಮಾಡಿದೆ.
ಮಂಗಳೂರಿಗೆ ಕೊಲ್ಲಿ ರಾಷ್ಟ್ರಗಳಿಂದ ಅಂತಾರಾಷ್ಟ್ರೀಯ ವೈಮಾನಿಕ ಸೇವೆ ಇದ್ದು, ಈಗ ಕೇಂದ್ರ ಸರಕಾರದ ವಂದೇ ಭಾರತ್ ಯೋಜನೆಯಡಿ ಮಾತ್ರ ದಿನಂಪ್ರತಿ 2 ಅಥವಾ 3 ವಿಮಾನಗಳು ಮಾತ್ರ ಆಗಮಿಸುತ್ತಿವೆ. ಅಂತಾರಾಷ್ಟ್ರೀಯ ವಿಮಾನ ಯಾನವನ್ನು ಒಮಿಕ್ರಾನ್ ಭೀತಿಯಿಂದಾಗಿ ಮುಂದೂಡಲಾಗಿದೆ.
ಕ್ರಿಸ್ಮಸ್ ಮತ್ತು ಇತರ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಲು ಮುಂಗಡ ಟಿಕೆಟ್ ಕಾದಿರಿಸಿದವರ ಪೈಕಿ ಕೆಲವರು ಯಾನವನ್ನು ರದ್ದುಪಡಿಸಿದರೆ ಕೆಲವರು ಮುಂದೂಡಿದ್ದಾರೆ. ಉಡುಪಿ ಜಿಲ್ಲಾಡಳಿತವು ವಿದೇಶಿ ಪ್ರಯಾಣಿಕರು ಬಂದರೆ ಕ್ವಾರಂಟೈನ್ ಆಗಬೇಕೆಂದು ಹೇಳಿರುವುದು ಕೂಡ ಅನಿವಾಸಿಗಳು ಪ್ರಯಾಣವನ್ನು ಮುಂದೂಡಲು ಕಾರಣ.
ಪ್ರಸ್ತುತ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ರ್‍ಯಾಂಡಮ್ ಆಗಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ. ಆದರೆ ಅವರು ವಿದೇಶದಿಂದ ವಿಮಾನ ಏರುವಾಗ ಆರ್‌ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರ ಹೊಂದಿರಬೇಕಾಗುತ್ತದೆ.
ಮಂಗಳೂರು ನಿಲ್ದಾಣದಲ್ಲಿ ರ್‍ಯಾಂಡಮ್ ಆಗಿ 100 ಮಂದಿಯಲ್ಲಿ ಇಬ್ಬರು ಅಥವಾ ನಾಲ್ವರಿಗೆ ತಪಾಸಣೆ ನಡೆಸಲಾಗುತ್ತಿದ್ದು, ಈ ತಪಾಸಣೆಯ ಖರ್ಚನ್ನು ತಪಾಸಣೆಗೆ ಒಳಗಾದವರೇ ಭರಿಸಬೇಕಾಗುತ್ತದೆ.
ಮಂಗಳೂರಿನಿಂದ ಯುಎಇಗೆ ಹೋಗುವವರು 48 ಗಂಟೆಗಳ ಆರ್‌ಟಿಪಿಸಿಆರ್ ಟೆಸ್ಟ್ ನೆಗೆಟಿವ್ ಪ್ರಮಾಣ ಪತ್ರ ಮಾತ್ರವಲ್ಲದೆ ವಿಮಾನ ನಿಲ್ದಾಣದಲ್ಲಿ ರ್ಯಾಟ್ ಟೆಸ್ಟ್‌ಗೆ ಒಳಪಡಬೇಕು, ನೆಗೆಟಿವ್ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ. ಆದರೆ ಕತಾರ್, ದೋಹಾ, ಕುವೈಟ್ ಪ್ರಯಾಣಿಕರಿಗೆ ರ್ಯಾಟ್ ಟೆಸ್ಟ್‌ನ ಅಗತ್ಯ ಇಲ್ಲ. 48 ಗಂಟೆಗಳ ಆರ್‌ಟಿಪಿಸಿಆರ್ ಟೆಸ್ಟ್ ನೆಗೆಟಿವ್ ಪ್ರಮಾಣ ಪತ್ರ ಮಾತ್ರ ಸಾಕು.
ಆಫ್ರಿಕಾ, ಲಂಡನ್, ಅಮೆರಿಕ ಮತ್ತಿತರ ದೇಶಗಳಿಂದ ಮಂಗಳೂರಿಗೆ ನೇರ ವಿಮಾನ ಯಾನ ಇಲ್ಲ. ಈ ದೇಶಗಳಿಂದ ಮಂಗಳೂರಿಗೆ ಬರುವವರು ದುಬಾೖ ಅಥವಾ ಮುಂಬಯಿ, ಬೆಂಗಳೂರು ಮೂಲಕ ಪ್ರಯಾಣಿಸಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.