ಪುತ್ರಿ ಪ್ರಿಯಕರನ ಕೊಲೆ ಆರೋಪಿ ಬಂಧನ
Team Udayavani, Dec 5, 2021, 10:39 AM IST
Representative Image used
ಬೆಂಗಳೂರು: ಪುತ್ರಿಯೊಂದಿಗೆ ಸರಸದಲ್ಲಿ ತೊಡಗಿದ್ದ ಆಕೆಯ ಪ್ರಿಯಕರನನ್ನು ಹತ್ಯೆಗೈದಿ ದ್ದ ಆರೋಪಿಯನ್ನು ವಿಶ್ವೇಶ್ವರಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿನೋಬಾನಗರ ಆಟೋ ಚಾಲಕ ನಾರಾ ಯಣ್ (46) ಬಂಧಿತ. ಆರೋಪಿ ನ.28 ರಂದು ಮನೆಯಲ್ಲಿ ಪುತ್ರಿ ಜತೆ ಸರಸದಲ್ಲಿ ತೊಡಗಿದ್ದ ಆಕೆ ಪ್ರಿಯಕರ ನಿವೇಶ್ ಕುಮಾರ್ (19) ನನ್ನು ಕಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ನಾರಾಯಣ್ ಪುತ್ರಿ ನೆರ ಮನೆ ನಿವಾಸಿ ನಿವೇಶ್ ಕುಮಾರ್‌ನನ್ನು ಪ್ರೀತಿಸು ತ್ತಿದ್ದಳು. ಅವರ ಪ್ರೇಮಕ್ಕೆ ಯುವತಿ ತಂದೆ ನಾರಾಯಣ್ ವಿರೋಧವಿತ್ತು. ನ.28ರಂದು ಮುಂಜಾನೆ ನಾರಾಯಣ್ ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಈ ವೇಳೆ ನಿವೇಶ್ ನಾರಾಯಣ್ ಮನೆಗೆ ಬಂದಿದ್ದು, ಪ್ರೇಯಸಿ ಜತೆಗೆ ಸರಸದಲ್ಲಿ ತೊಡಗಿದ್ದ.
ಇದನ್ನೂ ಓದಿ:- ಸರಕಾರಿ ನೌಕರರಿಗೆ ಸೂಕ್ತ ರಕ್ಷಣೆ ಕಲ್ಪಿಸಲು ಮನವಿ
ವಾಪಸ್ ಬಂದ ನಾರಾಯಣ್ ನಿವೇಶ್ ನೋಡಿ ಆಕ್ರೋಶಗೊಂಡಿದ್ದಾನೆ. ಅಲ್ಲದೆ, ಆತನೊಂದಿಗೆ ಜಗಳ ನಡೆದು ಅಲ್ಲೇ ಇದ್ದ ಕಟ್ಟಿಗೆಯಿಂದ ನಿವೇಶ್ ಕುಮಾರ್ ತಲೆಗೆ ಹೊಡೆದಿದ್ದಾನೆ. ಪರಿಣಾಮ ಆತ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದ ಎಂದು ಪೊಲೀಸರು ಹೇಳಿದರು.
ದೊಡ್ಡಪ್ಪನಿಂದ ಹುಟುಕಾಟ
ಹತ್ಯೆಯಾದ ನಿವೇಶ್ ವಿನೋಬಾನಗರದ ದೊಡ್ಡಪ್ಪನ ಮನೆಯಲ್ಲಿ ನೆಲೆಸಿದ್ದ. ನ.13ರಂದು ಸಂಬಂಧಿ ಮೃತಪಟ್ಟಿದ್ದರಿಂದ ದೊಡ್ಡಪ್ಪ ಲೋಕನಾಥನ್ ಕುಟುಂಬದ ಸಮೇತ ತಮಿಳುನಾಡಿಗೆ ತೆರಳಿದ್ದರು. ಹೀಗಾಗಿ ನಿವೇಶ್ ಮನೆಯಲ್ಲಿ ಒಬ್ಬನೇ ಇದ್ದ. ನ.29ರಂದು ಲೋಕನಾಥನ್ ಕುಟುಂಬ ಮನೆಗೆ ವಾಪಸಾದಾಗ ನಿವೇಶ್ ಮನೆಯಲ್ಲಿ ಇರಲಿಲ್ಲ. ಮೊಬೈಲ್‌ಗೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ.
ಹೀಗಾಗಿ ಆತನ ಫೋಟೋ ಹಿಡಿದುಕೊಂಡು ನಗರದ ಹಲವೆಡೆ ಹುಡುಕಾಟ ನಡೆಸಿದ್ದರು. ಬಳಿಕ ಡಿ.2ರಂದು ವಿಶ್ವೇಶ್ವರಪುರ ಠಾಣೆಗೆ ಬಂದು ನಾಪತ್ತೆ ಬಗ್ಗೆ ಮಾಹಿತಿ ನೀಡಿದ್ದರು. ಈ ವೇಳೆ ಪೊಲೀಸರು ಲೋಕನಾಥನ್‌ಗೆ ಮೃತದೇಹ ತೋರಿಸಿದಾಗ ಅದು ನಿವೇಶ್‌ನ ಗುರುತು ಪತ್ತೆಯಾಗಿತ್ತು. ಬಳಿಕ ನಿವೇಶ್ ಮೊಬೈಲ್ ನಂಬರ್ ಮೂಲಕ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.