ಹೆದ್ದಾರಿ ಬದಿ ರಾಶಿ ರಾಶಿ ಕಸ, ಪ್ರಯಾಣಿಕರಿಗೆ ಕಿರಿಕಿರಿ
Team Udayavani, Dec 5, 2021, 1:01 PM IST
ಎಚ್.ಡಿ.ಕೋಟೆ: ರಾಜ್ಯ ಹೆದ್ದಾರಿ ಬದಿ ರಾಶಿ ರಾಶಿ ಕಸ ಸುರಿದಿದ್ದು, ದುರ್ವಾಸನೆ ಬೀರುತ್ತಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಪ್ರಯಾಣಿಕರು ಕಿರಿಕಿರಿ ಉಂಟಾಗಿದ್ದರೆ, ಸ್ಥಳೀಯರಿಗೆ ಅಸಹ್ಯ ಹುಟ್ಟಿಸುತ್ತಿದೆ.
ಇದು ತಾಲೂ ಕಿನ ಹಂಪಾಪುರ ರಸ್ತೆ ಬಳಿ ಕಂಡು ಬರುವ ದೃಶ್ಯ. ಹಂಪಾಪುರದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾ ಲಯ ಕಾರ್ಯನಿರ್ವಹಿಸುತ್ತಿದೆ. ಗ್ರಾಪಂ ನಿಂದ ಕೆಲವೇ ಮೀಟರ್‌ಗಳ ದೂರದ ಮೈಸೂರು- ಮಾನಂದವಾಡಿ ಮಾರ್ಗದ ರಾಜ್ಯ ಹೆದ್ದಾರಿ ಬದಿ ಮೂಟೆಗಳಲ್ಲಿ ಕಸದ ರಾಶಿ ಸುರಿಯಲಾಗಿದೆ. ಪ್ರತಿದಿನ ಕೇರಳದಿಂದ ಮತ್ತು ಎಚ್.ಡಿ.ಕೋಟೆ ತಾಲೂಕಿನಿಂದ ಸಾವಿರಾರು ವಾಹನಗಳು ಹೆದ್ದಾರಿ ಮಾರ್ಗವಾಗಿ ಮೈಸೂರು ತಲುಪುತ್ತಿವೆ.
ಈ ರಸ್ತೆ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಹಾಗೂ ಪ್ರಯಾಣಿಕರು ಈ ಕಸದ ರಾಶಿ ನೋಡಿ ಅಸಹ್ಯಪಡುವಂತಿದೆ. ಪಾದಚಾರಿಗಳು ಮೂಗು ಮುಚ್ಚಿಕೊಂಡು ಸಂಚರಿಸುತ್ತಿದ್ದಾರೆ. ಈ ಅವ್ಯವಸ್ಥೆಯಿಂದ ರೋಸಿ ಹೋಗಿರುವ ಸಾರ್ವಜನಿಕರು ಇಲ್ಲಿನ ಗ್ರಾಪಂ ಆಡಳಿತಕ್ಕೆ ಹಿಡಿಶಾಪ ಹಾಕುವುದು ಸಾಮಾನ್ಯವಾಗಿದೆ.
ಕಸದ ರಾಶಿ ಕೊಳೆತು ನಾರುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಕೂಡ ಎದುರಾಗಿದೆ. ಶುಚಿತ್ವ ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡಲು ಸರ್ಕಾರ ಹಲವಾರು ಯೋಜನೆ ರೂಪಿಸಿದ್ದರೂ ಇಲ್ಲಿನ ಗ್ರಾಮ ಪಂಚಾಯ್ತಿ ಮಾತ್ರ ಸ್ವತ್ಛತೆಗೆ ಕಳಜಿವಹಿ ಸುತ್ತಿಲ್ಲ. ಕಸದ ರಾಶಿಯನ್ನು ಕಂಡು ಕಾಣದಂತೆ ಗ್ರಾಪಂ ವರ್ತಿಸುತ್ತಿದೆ.
ಇದನ್ನೂ ಓದಿ;- ನಟಿ ಜಾಕ್ವೆಲಿನ್ ಗೆ 10 ಕೋಟಿ ರೂ ಮೌಲ್ಯದ ಉಡುಗೊರೆ ನೀಡಿದ ಸುಕೇಶ್: ವರದಿ
ಇಲ್ಲಿ ಬಿದ್ದಿರುವ ತ್ಯಾಜ್ಯವನ್ನು ತೆರವುಗೊಳಿಸಿ ಈ ಜಾಗದಲ್ಲಿ ಕಸ ಹಾಕು ವವರ ವಿರುದ್ಧ ದಂಡ ವಿಧಿಸುವುದು, ಮತ್ತಿತರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಶುಚಿತ್ವ ಕಾಪಾಡಿಕೊಳ್ಳ ಬಹುದು. ಆದರೆ, ಗ್ರಾಮ ಪಂಚಾಯ್ತಿ ಇದ್ಯಾವುದನ್ನೂ ಮಾಡದೇ ಮೌನಕ್ಕೆ ಶರಣಾಗಿದೆ.
ಇನ್ನಾದರೂ ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳು ಕಸದ ರಾಶಿಯನ್ನು ತೆರವುಗೊಳಿಸಿ, ಮತ್ತೆ ತ್ಯಾಜ್ಯ ಸುರಿಯದಂತೆ ಕ್ರಮವಹಿಸಬೇಕು ಎಂದು ಸಾರ್ವನಿಕರು ಆಗ್ರಹಿಸಿದ್ದಾರೆ.
“ ರಸ್ತೆ ಮಾರ್ಗದಲ್ಲಿ ಕಸದ ರಾಶಿ ಬಿದ್ದಿರುವ ವಿಚಾರವಾಗಿ ಸಂಬಂಧಪಟ್ಟ ಹಂಪಾಪುರ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡು ಕಸ ತೆರವುಗೊಳಿಸಿ ಶುಚಿತ್ವಕ್ಕೆ ಆದ್ಯತೆ ನೀಡಲಾಗುವುದು.” – ಜೆರಾಲ್ಡ್ ರಾಜೇಶ್, ತಾಪಂ ಇಒ
“ ಹಂಪಾಪುರ ರಸ್ತೆ ಬದಿ ಕಸ ಬಿಸಾಡಿರುವುದು ತಿಳಿದಿಲ್ಲ. ಈ ಹಿಂದೆ ಕೇರಳದಿಂದದ ಕಸ ತಂದು ಹಂಪಾಪುರದಲ್ಲಿ ಎಸೆಯುವಾಗ ಅವರಿಗೆ ಎಚ್ಚರಿಕೆ ನೀಡಲಾಗಿತ್ತು. ರಾತ್ರಿ ವೇಳೆ ಯಾರಾದರೂ ಹೊರಗಿನಿಂದ ಕಸ ತಂದು ಎಸೆದಿರುವ ಸಾಧ್ಯತೆ ಇದೆ. ಕೂಡಲೇ ಸ್ಥಳ ಪರಿಶೀಲಿಸಿ ಕಸ ತೆರವುಗೊಳಿಸಲಾಗುವುದು.” – ಸೌಮ್ಯ, ಪಿಡಿಒ ಹಂಪಾಪುರ ಗ್ರಾಪಂ
– ಎಚ್.ಬಿ.ಬಸವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
HDK ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಜನ ಕೊಟ್ಟ ತೀರ್ಪು: ಡಿಕೆಶಿ ಟಾಂಗ್
Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.