ಸಂಗೀತ ಭಾರತೀಯ ಸಂಸ್ಕೃತಿ ಪ್ರತೀಕ: ಶಿವಲಿಂಗಾನಂದ ಶ್ರೀ
Team Udayavani, Dec 6, 2021, 1:11 PM IST
ಚಿತ್ರದುರ್ಗ: ಸಂಗೀತವೆಂದರೆ ಕೇವಲಮನರಂಜನೆಯಲ್ಲ, ಅದು ಸಂಸ್ಕಾರನೀಡಿ ಭಾರತೀಯ ಸಂಸ್ಕೃತಿಯನ್ನುಪ್ರತಿನಿ ಧಿಸುತ್ತದೆ ಎಂದು ಕಬೀರಾನಂದಮಠದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಹೇಳಿದರು.
ನಗರದ ಎಂ.ಕೆ. ಹಟ್ಟಿ ಬಸವೇಶ್ವರವಿದ್ಯಾಸಂಸ್ಥೆಯಲ್ಲಿ ಭಾನುವಾರ ನಡೆದಅಖೀಲ ಕರ್ನಾಟಕ ಗಾನಯೋಗಿಸಂಗೀತ ಪರಿಷತ್ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಸಂಗೀತ ಮನಸ್ಸಿಗೆ ಮುದನೀಡುವುದರ ಜತೆಗೆ ಮಾನಸಿಕನೆಮ್ಮದಿಯನ್ನೂ ನೀಡುತ್ತದೆ. ಈ ನಿಟ್ಟಿನಲ್ಲಿಅಖೀಲ ಕರ್ನಾಟಕ ಗಾನಯೋಗಿ ಸಂಗೀತಪರಿಷತ್ ಸಂಗೀತ ಕಲೆ ಹಾಗೂ ಗುರುಪರಂಪರೆಯನ್ನು ಮುಂದುವರೆಸಿಕೊಂಡುಹೋಗುತ್ತಿರುವುದು ಸಂತೋಷದ ವಿಚಾರ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಗೀತಪರಿಷತ್ತಿನ ರಾಜ್ಯಾಧ್ಯಕ್ಷ ಚನ್ನವೀರ ಶಾಸ್ತ್ರಿಹಿರೇಮಠ ಕಡಣಿ ಮಾತನಾಡಿ, ಗಾನಯೋಗಿಪಂಡಿತ್ ಪಂಚಾಕ್ಷರಿ ಗವಾಯಿಗಳು ಮತ್ತುಪಂಡಿತ್ ಪುಟ್ಟರಾಜ ಕವಿ ಗವಾಯಿಗಳಪ್ರೇರಣೆಯಿಂದ ಪ್ರಾರಂಭವಾದಸಂಗೀತ ಪರಿಷತ್ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಂಘಟನೆಯಾಗುತ್ತಿದೆ.
ಈ ಮೂಲಕ ಸಂಗೀತಗಾರರ, ಕಲಾವಿದರಸಮಸ್ಯೆಗಳನ್ನು ಸಂಘಟನೆಯ ಮೂಲಕಬಗೆಹರಿಸಲಾಗುವುದು. ಸರ್ಕಾರದಮಟ್ಟದಲ್ಲಿ ಎಲ್ಲಾ ಪ್ರಕಾರದ ಕಲಾವಿದರಿಗೆನ್ಯಾಯ ಕೊಡಿಸಬೇಕಿದೆ ಎಂದು ತಿಳಿಸಿದರು.
ಪ್ರತಿ ವರ್ಷ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಸಂಗೀತ ಸಮ್ಮೇಳನಗಳನ್ನುಮಾಡುವುದಕ್ಕೆ ಸರ್ಕಾರ ಅನುದಾನನೀಡಬೇಕು ಎಂದು ಒತ್ತಾಯಿಸಲು ನಮ್ಮಲ್ಲಿಸಂಘಟನೆಯ ಕೊರತೆಯಿದೆ. ನಾವುಕೇವಲ ಸಮಾರಂಭದಲ್ಲಿ ಹಾಡಿ ಬಂದುಬಿಡುತ್ತೇವೆ. ಸಂಘಟನೆಯ ಗೋಜಿಗೆಹೋಗದಿರುವುದು ಹಿನ್ನಡೆಗೆ ಕಾರಣ.
ಸರ್ಕಾರ ಎಲ್ಲ ಶಾಲಾ-ಕಾಲೇಜುಗಳಲ್ಲಿಸಂಗೀತ ಶಿಕ್ಷಕರು ಸೇರಿದಂತೆ ರಂಗಶಿಕ್ಷಕರು, ಚಿತ್ರಕಲಾ ಶಿಕ್ಷಕರನ್ನು ನೇಮಕಾತಿಮಾಡಿಕೊಳ್ಳಬೇಕು. ಲಲಿತ ಕಲೆ, ಸಂಗೀತಪರಂಪರೆಯನ್ನು ಪ್ರೋತ್ಸಾಹಿಸಬೇಕೆಂದುಒತ್ತಾಯಿಸಿದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ ಮಾತನಾಡಿ,ಸಂಗೀತ ಕಲೆ ಒತ್ತಡದಿಂದ ಬದುಕುವಮನುಷ್ಯನಿಗೆ ಮಾನಸಿಕ ನೆಮ್ಮದಿ ಮತ್ತುಆರೋಗ್ಯ ನೀಡುತ್ತದೆ.
ಆ ನಿಟ್ಟಿನಲ್ಲಿಮಕ್ಕಳಿಗೆ ಕಲೆಯ ಅಭಿರುಚಿ ಬೆಳೆಯುವಂತೆಪ್ರೋತ್ಸಾಹಿಸಬೇಕು. ಕಸಾಪ, ಶಸಾಪ ಮತ್ತುಗಾನಯೋಗಿ ಸಂಗೀತ ಪರಿಷತ್ ಮೂರುಸಂಘಟನೆಗಳು ಒಟ್ಟಾಗಿ ನಾಡು, ನುಡಿಗಾಗಿಬರುವ ದಿನಗಳಲ್ಲಿ ಅರ್ಥಪೂರ್ಣಕಾರ್ಯಕ್ರಮ ಆಯೋಜಿಸೋಣ ಎಂದುಸಲಹೆ ನೀಡಿದರು.
ಅಖೀಲ ಭಾರತ ವೀರಶೆ„ವ ಮಹಾಸಭಾದಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಸಂಗೀತಪರಿಷತ್ತಿನ ಜಿಲ್ಲಾಧ್ಯಕ್ಷ ತೋಟಪ್ಪ ಉತ್ತಂಗಿಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಸ್.ವಿ. ಗುರುಮೂರ್ತಿ, ಯೋಗಾಚಾರ್ಯಎಲ್.ಎಸ್. ಚಿನ್ಮಯಾನಂದ, ಜಾನಪದಪರಿಷತ್ ಜಿಲ್ಲಾ ಕಾರ್ಯದರ್ಶಿ ನಿರಂಜನದೇವರಮನೆ, ಬಸವೇಶ್ವರ ವಿದ್ಯಾಸಂಸ್ಥೆಯಕಾರ್ಯದರ್ಶಿ ವಿ.ಕೆ. ಶಂಕರಪ್ಪ, ಗೌರವಸಲಹೆಗಾರ ಕಾಲ್ಕೆರೆ ಚಂದ್ರಪ್ಪ, ಕಲಾವಿದಹರೀಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಡಿ.ಒ. ಮುರಾರ್ಜಿ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.