![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 6, 2021, 1:34 PM IST
ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜಕೀಯವಾಗಿ ಸೊರಗಿದ್ದಾರೆ. ಅವರದೇ ಸಂಪುಟದ ಸಚಿವ ಮುರುಗೇಶ್ ನಿರಾಣಿ ಸಿಎಂ ಆಗುತ್ತಾರೆ ಎನ್ನುತ್ತಾರೆ. ಆದರೆ ಇನ್ನೂ ಯಾಕೆ ಅವರನ್ನು ಮಂತ್ರಿ ಮಂಡಲದಲ್ಲಿ ಇಟ್ಟುಕೊಂಡಿದ್ದಾರೆ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟೀಕೆ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾಕೆ ವೇದಿಕೆಯಲ್ಲಿ ನಾನು -ಬೊಮ್ಮಾಯಿ ಅವರ ಜತೆಗೆ ಕೆಲಸ ಮಾಡುತ್ತೀದ್ದೇನೆಂದು ನಿರಾಣಿ ಹೇಳಬೇಕಿತ್ತು. ಸರ್ಕಾರದಲ್ಲಿ ಸ್ಥಿರತೆ ಎಲ್ಲಿದೆ? ಮುಖ್ಯಮಂತ್ರಿಗಳು ವೀಕ್ ಆಗಿದ್ದಾರೋ ಇಲ್ಲವೋ ಎಂದು ನೀವೇ ಅವಲೋಕನ ಮಾಡಿಕೊಳ್ಳಿ ಎಂದರು.
ಅಧಿವೇಶನ ಬೆಳಗಾವಿಯಲ್ಲಿ ಮಾಡುವಂತೆ ನಾನೇ ಒತ್ತಡ ಹಾಕಿದ್ದೆ. ಈಗ ಒತ್ತಡದಲ್ಲಿ ಅಧಿವೇಶನ ಮಾಡುತ್ತಿದ್ದಾರೆ. ಅದನ್ನು ಎನಾದರೂ ಮಾಡಿ ಮುಂದೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಅಧಿವೇಶನ ಮುಂದೂಡದಂತೆ ಸ್ಪೀಕರ್ ಅವರಿಗೆ ಹೇಳಿದ್ದೇನೆ. ನಾವು ಸಾಮೂಹಿಕವಾಗಿ ದೊಡ್ಡ ಪ್ರತಿಭಟನೆ ಮಾಡುತ್ತೇವೆ ಎಂದರು.
ನೆರೆ ಸಂತ್ರಸ್ತರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಅಂತ ಅರ್ಜಿ ಕೊಟ್ಟಿದ್ದಾರೆ. ಸರ್ಕಾರ ಅವರಿಗೆ ಮನೆಗಳನ್ನು ಕಟ್ಟಿಕೊಟ್ಟಿಲ್ಲ. ಅಧಿವೇಶನದಲ್ಲಿ ಜನರ ಧ್ವನಿ ಎತ್ತಲಿಲ್ಲ ಅಂದರೆ ನಮ್ಮ ಕರ್ತವ್ಯಕ್ಕೆ ನಾವು ಮೋಸ ಮಾಡಿದ ಹಾಗೆ. ಹೀಗಾಗಿ ಉತ್ತರ ಕರ್ನಾಟಕದ ಶಾಸಕರೆಲ್ಲರೂ ಸೇರಿ ಚರ್ಚೆ ಮಾಡಿ ನೆರೆ ಪರಿಹಾರ ನೀಡುವಲ್ಲಿ ಸರ್ಕಾರದ ವೈಫಲ್ಯದ ಬಗ್ಗೆ ದೊಡ್ಡ ವಿಚಾರವನ್ನು ಪ್ರಸ್ತಾವನೆ ಮಾಡುತ್ತೇವೆ ಎಂದರು.
Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!
Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು
Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ
Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್
Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
You seem to have an Ad Blocker on.
To continue reading, please turn it off or whitelist Udayavani.