ಹೆದ್ದಾರಿ ಪಕ್ಕದಲ್ಲಿ ಅಕ್ರಮವಾಗಿ ತೆರೆದಿದ್ದ ಅಂಗಡಿಗಳ ತೆರವು
Team Udayavani, Dec 6, 2021, 1:48 PM IST
ಮುಳಬಾಗಿಲು: ರಾಷ್ಟ್ರೀಯ ಹೆದ್ದಾರಿ-75ರ ಇಕ್ಕೆಲಗಳಲ್ಲಿ ಅಕ್ರಮವಾಗಿ ತೆರೆದಿದ್ದ ಅಂಗಡಿ ಗಳನ್ನು ಜಿಲ್ಲಾಧಿಕಾರಿಗಳ ಸೂಚನೆಯಂತೆ ಜೆ.ಎಸ್.ಆರ್.ಟೋಲ್ ಸಿಬ್ಬಂದಿ ಪೊಲೀಸರ ಸಹಕಾರದೊಂದಿಗೆ ತೆರವುಗೊಳಿಸಿದರು.
ಹಲವು ಮಂದಿ ಅಲ್ಲಲ್ಲಿ ತಗಡು ಕಟ್ಟಿಕೊಂಡು ಅಕ್ರಮವಾಗಿ ಅಂಗಡಿ ಹಾಕಿಕೊಂಡಿದ್ದರು. ಇದರಿಂದ ಜನ ಸಂದಣಿ ಹೆಚ್ಚಾಗಿ, ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಟ್ರಾಫಿಕ್ ಜಾಂ ಆಗುತ್ತಿತ್ತು.ಇದನ್ನು ಈಚೆಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳುಖುದ್ದಾಗಿ ಗಮನಿಸಿದ್ದರು. ಅಲ್ಲದೇ, ತೆರವುಗೊಳಿಸುವಂತೆ ಜೆಎಸ್‌ಆರ್ ಟೋಲ್ ಸಿಬ್ಬಂದಿ ಮೂಲಕ ನೋಟಿಸ್ ಜಾರಿ ಮಾಡಿ, ಜಿಲ್ಲಾಧಿಕಾರಿಗಳು ತಿಳಿಸಿದ್ದರು.
ನೋಟಿಸ್ ನೀಡಿದರೂ ಬಹುತೇಕ ಅಂಗಡಿಗಳ ಮಾಲಿಕರು ತೆರವುಗೊಳಿಸದ ಕಾರಣ, ಅಧಿಕಾರಿಗಳು ಜೆಸಿಬಿ ಯಂತ್ರಗಳನ್ನು ತರುತ್ತಿದ್ದಂತೆಯೇ ಕೆಲವು ಅಂಗಡಿಗಳವರು ತಮ್ಮ ಜೀವನಕ್ಕೆ ಈ ಅಂಗಡಿಗಳೇ ಆಧಾರ ವಾಗಿದ್ದು, ಯಾವುದೇ ಕಾರಣಕ್ಕೂ ತೆರವು ಮಾಡುವುದಿಲ್ಲ ಎಂದು ಹಠ ಹಿಡಿದರು.
ಕೊನೆಗೆ ಪೊಲೀಸ್‌ಸಿಬ್ಬಂದಿ ಅಂಗಡಿಗಳವರ ಮನ ವೊಲಿಸಿ ತೆರವು ಗೊಳಿಸುವಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ನಂಗಲಿ ಪಿಎಸ್‌ಐ ವಿ.ವರಲಕ್ಷ್ಮಮ್ಮ,ಎಎಸ್‌ಐ ಶ್ರೀಧರ್, ಶ್ರೀನಿವಾಸ್, ಪ್ರಕಾಶ್,ಶಂಕರಪ್ಪ, ಶಿವಕುಮಾರ್, ಜೆಎಸ್‌ಆರ್ ವ್ಯವಸ್ಥಾಪಕ ಅಜಿತ್, ಹರೀಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.