ಡೇವಿಸ್ ಕಪ್ ಟೆನಿಸ್: ರಶ್ಯಕ್ಕೆ 15 ವರ್ಷ ಬಳಿಕ ಪ್ರಶಸ್ತಿ
Team Udayavani, Dec 7, 2021, 5:10 AM IST
ಮ್ಯಾಡ್ರಿಡ್ (ಸ್ಪೇನ್): ಡ್ಯಾನಿಲ್ ಮೆಡ್ವೆಡೇವ್ ಸಾಹಸದಿಂದ ರಶ್ಯ 15 ವರ್ಷಗಳ ಬಳಿಕ ಡೇವಿಸ್ ಕಪ್ ಟೆನಿಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಕ್ರೊವೇಶಿಯಾ ವಿರುದ್ಧ ಸಾಧಿಸಿದ 2-0 ಮುನ್ನಡೆಯಿಂದ ರಶ್ಯ ಕಿರೀಟ ಏರಿಸಿಕೊಂಡಿತು.
ಮರಿನ್ ಸಿಲಿಕ್ ಎದುರಿನ ದ್ವಿತೀಯ ಪಂದ್ಯವನ್ನು ಡ್ಯಾನಿಲ್ ಮೆಡ್ವೆಡೇವ್ 7-6 (7), 6-2 ಅಂತರದಿಂದ ಗೆದ್ದು ರಶ್ಯವನ್ನು ಚಾಂಪಿಯನ್ ಪಟ್ಟಕ್ಕೆ ಏರಿಸಿದರು. ಮೊದಲ ಪಂದ್ಯದಲ್ಲಿ ಆ್ಯಂಡ್ರೆ ರುಬ್ಲೇವ್ 6-4, 7-6 (5) ಅಂತರದಿಂದ ಬೋರ್ನ ಗೋಜೊ ಅವರನ್ನು ಮಣಿಸಿದ್ದರು.
ಇದು ರಶ್ಯಕ್ಕೆ ಒಲಿದ 3ನೇ ಡೇವಿಸ್ ಕಪ್ ಪ್ರಶಸ್ತಿ. 2002 ಹಾಗೂ 2006ರಲ್ಲಿ ಅದು ಚಾಂಪಿಯನ್ ಆಗಿತ್ತು. ಕ್ರೊವೇಶಿಯಾ 2005 ಮತ್ತು 2018ರಲ್ಲಿ ಕಪ್ ಎತ್ತಿತ್ತು.
ಕಳೆದ ತಿಂಗಳು ರಶ್ಯದ ವನಿತೆಯರು ಸ್ವಿಜರ್ಲೆಂಡ್‌ಗೆ 2-0 ಅಂತರದ ಸೋಲುಣಿಸಿ “ಬಿಲ್ಲಿ ಜೀನ್ ಕಿಂಗ್ ಕಪ್’ ಜಯಿಸಿದ್ದರು.
ಭಾರತದಲ್ಲಿ ಡೆನ್ಮಾರ್ಕ್ ಪಂದ್ಯ
ಭಾರತ 2019ರ ಫೆಬ್ರವರಿ ಬಳಿಕ ಡೇವಿಸ್ ಕಪ್ ಟೆನಿಸ್ ಕೂಟದ ಆತಿಥ್ಯ ವಹಿಸಲಿದೆ. ಮುಂದಿನ ಮಾರ್ಚ್ 4-5ರಂದು ಡೆನ್ಮಾರ್ಕ್ ಎದುರಿನ ವಿಶ್ವ ಗ್ರೂಪ್-1 ಸ್ಪರ್ಧೆ ನಡೆಯಲಿದೆ.
2019ರಲ್ಲಿ ಇಟಲಿ ಎದುರಿನ ಮುಖಾಮುಖಿ ಭಾರತದಲ್ಲಿ ನಡೆದಿತ್ತು. ಇದನ್ನು ಭಾರತ 1-3ರಿಂದ ಕಳೆದುಕೊಂಡಿತ್ತು. ಭಾರತ ತನ್ನ ಕಳೆದ 3 ಟೂರ್ನಿಗಳನ್ನು ವಿದೇಶದಲ್ಲಿ ಆಡಿತ್ತು. 2019ರಲ್ಲಿ ಪಾಕಿಸ್ಥಾನ ವಿರುದ್ಧ ಆಡಲು ಕಜಾಕ್‌ಸ್ಥಾನಕ್ಕೆ ತೆರಳಿದರೆ, ಅನಂತರ ಕ್ರೊವೇಶಿಯಾ (2020) ಮತ್ತು ಫಿನ್‌ಲ್ಯಾಂಡ್ (2021) ವಿರುದ್ಧ ಅವರದೇ ನೆಲದಲ್ಲಿ ಸೆಣಸಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.