ಮಂಗಳವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ
Team Udayavani, Dec 7, 2021, 8:10 AM IST
ಮೇಷ: ಅನಿರೀಕ್ಷಿತ ಧನ ಸಂಪತ್ತು ವೃದ್ಧಿ. ಉದ್ಯೋಗ ವ್ಯವಹಾರದಲ್ಲಿ ಪರರಿಂದ ಸಂದರ್ಭಕ್ಕೆ ಸರಿಯಾಗಿ ಸಹಾಯ ಒದಗಿ ಬರುವುದು. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಉತ್ತಮ ಜವಾಬ್ದಾರಿಯುತ ವಾಕ್ಚತುರತೆ.
ವೃಷಭ: ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಗುರಿ ಸಾಧನೆಯಿಂದ ನೆಮ್ಮದಿ. ಉತ್ತಮ ಧನಾರ್ಜನೆ. ಬಂಧುಮಿತ್ರರ ಸಹಕಾರ. ದಾಂಪತ್ಯದಲ್ಲಿ ಪ್ರೀತಿ ಅನುರಾಗ ವೃದ್ಧಿ. ಆಸ್ತಿ ವಿಚಾರಗಳಲ್ಲಿ ಪರಿಶ್ರಮದಿಂದ ಮುನ್ನಡೆ.
ಮಿಥುನ: ಆರೋಗ್ಯ ಗಮನಿಸಿ. ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ಸ್ಪಷ್ಟತೆಗೆ ಆದ್ಯತೆ ನೀಡಿ. ದೂರದ ವ್ಯವಹಾರಗಳಲ್ಲಿ ಪಾಲುದಾರಿಕಾ ವೃತ್ತಿಯಲ್ಲಿ ಪ್ರಗತಿ. ನಿರೀಕ್ಷಿತ ಧನಾಗಮನ. ಮಕ್ಕಳ ನಿಮಿತ್ತ ಶ್ರಮ.
ಕರ್ಕ: ಸಣ್ಣ ಪ್ರಯಾಣ ಸಂಭವ. ನಿರೀಕೆY ಮೀರಿದ ಧನಾಗಮನ. ಮನಃಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಸ್ಥಾನ ಗೌರವ ವೃದ್ಧಿ. ಅಧಿಕಾರಯುತ ನಡೆಯಿಂದ ಸಫಲತೆ. ಬಂಧುಮಿತ್ರರ ಸಹಾಯ ಸಹಕಾರ ಲಭ್ಯ.
ಸಿಂಹ: ಆರೋಗ್ಯ ಸುಧಾರಣೆ. ಆಲೋಚಿಸಿದ ರೀತಿಯಲ್ಲಿ ಕಾರ್ಯ ವೃದ್ಧಿಯಾಗುವುದರಿಂದ ಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಜನಮನ್ನಣೆ. ಗೌರವ ಪ್ರಾಪ್ತಿ. ಮಾತಿನಲ್ಲಿ ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ನಷ್ಟ ಸಂಭವ.
ಕನ್ಯಾ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ನೇತೃತ್ವ. ಗುರುಹಿರಿಯರ ಸಲಹೆ ಸಹಕಾರ ಆಶೀರ್ವಾದ ಪ್ರಾಪ್ತಿ. ಧನಾರ್ಜನೆಗೆ ಸರಿಸಮವಾಗಿ ಧನವ್ಯಯ ತೋರೀತು. ಮಕ್ಕಳಿಂದ ತೃಪ್ತಿ. ಆಸ್ತಿ ವಿಚಾರಗಳಲ್ಲಿ ಉತ್ತಮ ಬದಲಾವಣೆ ಸಂಭವ.
ತುಲಾ: ಸುಖ ಸಂತೋಷದಿಂದ ಕೂಡಿದ ಸಮಯ. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ನೂತನ ಮಿತ್ರರ ಸಮಾಗಮ. ಅಧಿಕ ಧನಾರ್ಜನೆ ಇದ್ದರೂ ಲಾಭಾಂಶ ಕಡಿಮೆ ತೋರೀತು. ವಿದ್ಯಾರ್ತಿಗಳಿಗೆ ಅತ್ಯುತ್ತಮ ಸಮಯ.
ವೃಶ್ಚಿಕ: ಧೈರ್ಯ ಪ್ರೋತ್ಸಾಹದಿಂದ ಕೂಡಿದ ಕಾರ್ಯ ಚಟುವಟಿಕೆಗಳು. ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ಸಹೋದರಾದಿ ವರ್ಗದವರಿಂದಲೂ ಸಹೋದ್ಯೋಗಿ ಗಳಿಂದಲೂ ಉತ್ತಮ ಪ್ರೋತ್ಸಾಹ ಪ್ರಾಪ್ತಿ. ಉದ್ಯೋಗದಲ್ಲಿ ಹೆಚ್ಚಿನ ಗೌರವ.
ಧನು: ಆರೋಗ್ಯ ಮಧ್ಯಮ. ಸಣ್ಣ ಪ್ರಯಾಣ ಸಂಭವ. ಮನೆಯಲ್ಲಿ ದೇವತಾ ಕಾರ್ಯಗಳ ಸಂಭ್ರಮ. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯದ ನಡೆಯಿಂದ ತೊಂದರೆ ಆಗುವ ಸಾಧ್ಯತೆ. ಸಾಂಸಾರಿಕ ಸುಖ ತೃಪ್ತಿದಾಯಕ.
ಮಕರ: ಉತ್ತಮ ಸ್ಥಿರ ಆರೋಗ್ಯ. ವಿವೇಕದಿಂದ ಕೂಡಿದ ಕೆಲಸ ಕಾರ್ಯಗಳು. ಜನಮನ್ನಣೆ. ಉತ್ತಮ ವಾಕ್ಚತುರತೆಯಿಂದ ಹೆಚ್ಚಿದ ಧನಾರ್ಜನೆ. ಕುಟುಂಬ ಸುಖ ವೃದ್ಧಿ. ನೂತನ ಮಿತ್ರರ ಸಮಾಗಮ. ದೀರ್ಘ ಪ್ರಯಾಣ ಯೋಗ.
ಕುಂಭ: ಆರೋಗ್ಯ ವೃದ್ಧಿ. ಉತ್ತಮ ಕಾರ್ಯ ಚಟುವಟಿಕೆ ಗಳಿಂದ ಕೂಡಿದ ದಿನ. ಗೃಹೋಪವಸ್ತುಗಳ ಸಂಗ್ರಹ. ಧಾರ್ಮಿಕ ಕಾರ್ಯಗಳ ನೇತೃತ್ವ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮ.
ಮೀನ: ದೀರ್ಘ ಪ್ರಯಾಣದಿಂದ ದೇಹಾಯಾಸ ಸಂಭವ. ಉತ್ತಮ ಧನಾರ್ಜನೆ ಹಾಗೂ ಅಧಿಕ ಉಳಿತಾಯ. ತಾಳ್ಮೆ ಸಹನೆಯಿಂದ ಕಾರ್ಯ ಪ್ರವೃತ್ತರಾಗಿ. ಗುರುಹಿರಿಯರ ಆರೋಗ್ಯ ಸುಧಾರಣೆ. ದಾಂಪತ್ಯ ಸುಖ ವೃದ್ಧಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ
Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Daily Horoscope: ಉದ್ಯೋಗದಲ್ಲಿ ಯಶಸ್ಸಿನ ಭರವಸೆ, ಆಪ್ತರ ನೈತಿಕ ಬೆಂಬಲದಿಂದ ಧೈರ್ಯ ವರ್ಧನೆ
Daily Horoscope; ಮನೋಬಲ ಕುಗ್ಗಿಸುವವರ ಸಹವಾಸ ಬಿಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.