ಹಲ್ಲೆ ಪ್ರಕರಣ: ಪಿಎಸ್‌ಐ ಅಮಾನತು
Team Udayavani, Dec 7, 2021, 10:01 AM IST
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕ ನೊಬ್ಬನ ಮೇಲೆ ಹಲ್ಲೆ ನಡೆಸಿ, ಅಮಾನವೀ ಯವಾಗಿ ನಡೆದುಕೊಂಡಿದ್ದ ಬ್ಯಾಟರಾಯನಪುರ ಪೊಲೀಸ್ ಠಾಣೆ ಪಿಎಸ್‌ಐ ಹರೀಶ್ ಅವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನಗೊಳಿಸಲಾಗಿದೆ.
ಪ್ರಕರಣ ಸಂಬಂಧ ಕೆಂಗೇರಿ ಉಪವಿಭಾಗ ಎಸಿಪಿ ಕೋದಂಡರಾಮಯ್ಯ ಅವರು ಪಿಎಸ್‌ಐ ವಿರುದ್ಧ ತನಿಖೆ ನಡೆಸಿ ಮಧ್ಯಂತರ ವರದಿ ನೀಡಿದ್ದಾರೆ. ಈ ವರದಿಯ ನ್ನಾಧರಿಸಿ ಹರೀಶ್ ಅವರನ್ನು ಕರ್ತವ್ಯಲೋಪ, ಬೇಜಬ್ದಾರಿ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ;- ಶತಮಾನಗಳಷ್ಟು ಹಳೆಯ ಬ್ರಿಟಿಷ್ ರಸ್ತೆ ಬಂದ್ : ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ, ಪ್ರತಿಭಟನೆ
ತನಿಖೆ ಮುಂದುವರಿದಿದ್ದು, ಪೂರ್ಣ ವರದಿ ಬಂದ ಬಳಿಕ ಮುಂದಿನ ಶಿಸ್ತು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಎಂ.ಪಾಟೀಲ್ ಹೇಳಿದರು. ಮಧ್ಯಂತರ ವರದಿಯಲ್ಲಿ ಪಿಎಸ್‌ಐ ಹರೀಶ್, ಯುವಕನ ಮೇಲೆ ದೌರ್ಜನ್ಯ ಎಸಗಿರುವುದು ಪತ್ತೆಯಾಗಿದೆ. ಮೂತ್ರ ಕುಡಿ ಎಂದು ಹೇಳಿರುವ ಬಗ್ಗೆ ಸಾಕ್ಷ್ಯಗಳಿಲ್ಲ. ಆದರೆ, ಹಲ್ಲೆ ನಡೆಸಿರುವುದು, ಮನಬಂದಂತೆ ಥಳಿಸಿರುವುದು ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಕೆಳ ಹಂತದ ಸಿಬ್ಬಂದಿ ದುರ್ಬಳಕೆ: ಪಿಎಸ್‌ಐ ಹರೀಶ್ ತನ್ನ ಕಿರಿಯ ಸಹೋದ್ಯೋಗಿಗಳಿಗೆ ಕಿರುಕುಳ ನೀಡುತ್ತಿದ್ದಲ್ಲದೆ, ಅವರ ಮೂಲಕ ಪ್ರಗ್ನೆನ್ಸಿ ಹಾಗೂ ಅಬಾಷನ್ ಕಿಟ್ ಹಾಗೂ ಇತರೆ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದರು ಎಂದು ಅಮಾನತುಗೊಂಡಿರುವ ಹೊಯ್ಸಳ ಬೀಟ್‌ನಲ್ಲಿದ್ದ ಹೆಡ್‌ಕಾನ್‌ಸ್ಟೇಬಲ್ ಮಂಜು ನಾಥ್ ಆರೋಪಿಸಿದ್ದಾರೆ.
ಕೆಲ ತಿಂಗಳ ಹಿಂದೆ ಮದ್ಯ ಸೇವಿಸಿ ಕರ್ತವ್ಯ ನಿರ್ವಹಿಸಿದ ಆರೋಪದ ಮೇಲೆ ಹೆಡ್‌ಕಾನ್‌ಸ್ಟೇಬಲ್ ಮಂಜುನಾಥ್ ಅವರನ್ನು ಹಿರಿಯ ಅಧಿಕಾರಿಗಳಿಗೆ ಹೇಳಿ ಪಿಎಸ್‌ಐ ಹರೀಶ್ ಅಮಾನತು ಮಾಡಿಸಿದ್ದರು. ಅದರಿಂದ ಖನ್ನತೆಗೊಳಗಾಗಿರುವ ಮಂಜುನಾಥ್, ಇದೀಗ ಪಿಎಸ್‌ಐ ಹರೀಶ್ ದೌರ್ಜನ್ಯವನ್ನು ಆಡಿಯೋ ಮೂಲಕ ವೈರಲ್ ಮಾಡಿದ್ದಾರೆ.
ಪಿಎಸ್‌ಐ ಹರೀಶ್ ತನ್ನ ಕೆಳ ಹಂತದ ಸಿಬ್ಬಂದಿಯಿಂದ ಪ್ರಗ್ನೆನ್ಸಿ ಹಾಗೂ ಅಬಾಷನ್ ಕಿಟ್ ಹಾಗೂ ಇತರೆ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದರು ಎಂದು ಆರೋಪಿಸಿರು ಮಂಜು ನಾಥ್, ಕೆಲ ಹಂತದ ಸಿಬ್ಬಂದಿಯನ್ನು ಬಳಸಿಕೊಳ್ಳಿ. ಆದರೆ, ಇಷ್ಟು ಕೀಳುಮಟ್ಟಕ್ಕೆ ಬಳಸಿಕೊಳ್ಳಬಾರದು. ಇದು ಅಸಹ್ಯ. ಇಲಾಖೆಗೆ ನಿನ್ನೊಬ್ಬ ಅನ್ಫಿಟ್.
ನೀನು ಕಾನ್‌ಸ್ಟೇಬಲ್ ಆಗಿ ಇದೇ ಠಾಣೆ ಯಲ್ಲಿ ಕೆಲಸ ಮಾಡುತ್ತಿದ್ದವನು. ಕಾನ್‌ಸ್ಟೇಬಲ್ ಸಮಸ್ಯೆ ಏನೆಂಬುದು ನಿನಗೆ ಗೊತ್ತಿತ್ತು. ಆದರೂ ಈ ರೀತಿ ಅನ್ಯಾಯ ಮಾಡಬಾರದಿತ್ತು. ಹಿರಿಯ ಅಧಿಕಾರಿಗಳ ಬಳಿ ನಿಮ್ಮ ಬಗ್ಗೆ ಹೇಳಿಕೊಂಡಿದಕ್ಕೆ, ಇಲ್ಲದ ವಿಚಾರಗಳನ್ನು ಹೇಳಿ ನಮ್ಮಂತವರ ಹೊಟ್ಟೆ ಮೇಲೆ ಹೊಡೆದರೆ, ಒಳ್ಳೆಯದ್ದು ಮಾಡಲ್ಲ. ಎಂಥ ಸ್ಥಿತಿ ಬರುತ್ತದೆ ನೋಡುತ್ತಿರಿ? ಟಾರ್ಚರ್ ಕೊಟ್ಟಿ ಕೆಲಸದಿಂದ ಅಮಾನತು ಮಾಡಿಸಿದ್ದಿಯಾ ಎಂದೆಲ್ಲ ನೋವು ಹೇಳಿಕೊಂಡಿದ್ದಾರೆ.
ಈ ಆಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಹರೀಶ್ ದೌರ್ಜನ್ಯದ ಬಗ್ಗೆ ಈಗ ಆಡಿಯೋ ಬಿಡುಗಡೆ ಮಾಡುವ ಬದಲು, ಈ ಹಿಂದೆಯೇ ತಮ್ಮ ಬಳಿ ದೂರು ನೀಡಿ ದ್ದರೆ, ಕಾನೂನು ಕ್ರಮಕೈಗೊಳ್ಳುತ್ತಿದ್ದೇವು. ಈಗ ಯಾವ ಕಾರಣಕ್ಕೆ ಆಡಿಯೋ ವೈರಲ್ ಮಾಡಿದ್ದಾರೆ ಎಂಬುದು ಗೊತ್ತಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.