ಪಾಂಡೇಶ್ವರ ಶಿವನಗರದಿಂದ ಅತ್ತಾವರಕ್ಕೆ ರೈಲ್ವೇ ಅಂಡರ್‌ಪಾಸ್‌ ರಸ್ತೆ

ಸ್ಥಳೀಯರಿಂದ ವ್ಯಕ್ತವಾದ ಬೇಡಿಕೆ

Team Udayavani, Dec 7, 2021, 5:32 PM IST

ಪಾಂಡೇಶ್ವರ ಶಿವನಗರದಿಂದ ಅತ್ತಾವರಕ್ಕೆ ರೈಲ್ವೇ ಅಂಡರ್‌ಪಾಸ್‌ ರಸ್ತೆ

ಮಹಾನಗರ: ಪಾಂಡೇಶ್ವರ ಶಿವನಗರದಿಂದ ಅತ್ತಾವರ ಕೆಎಂಸಿ ಆಸ್ಪತ್ರೆಯ ಸಮೀಪಕ್ಕೆ ಸಂಪರ್ಕ ಕಲ್ಪಿಸಲು ರೈಲ್ವೇ ಅಂಡರ್‌ಪಾಸ್‌ ರಸ್ತೆ ನಿರ್ಮಾಣಕ್ಕೆ ಸ್ಥಳೀಯರಿಂದ ಬೇಡಿಕೆ ವ್ಯಕ್ತವಾಗಿದೆ. ಇದು ಸಾಧ್ಯವಾದರೆ, ಸ್ಥಳೀಯವಾಗಿ ಅತ್ತಿಂದಿತ್ತ ತೆರಳುವ ಲಘು ವಾಹನದವರಿಗೆ ನಿತ್ಯ ಬಹು ಉಪಯೋಗವಾಗಲಿದೆ. ಜತೆಗೆ, ಪಾಂಡೇಶ್ವರ ರೈಲ್ವೇ ಗೇಟ್‌ನಿಂದಾಗಿ ಸಮಸ್ಯೆ ಅನುಭವಿಸುವ ಕೆಲವು ವಾಹನದವರಿಗೂ ಉಪಯೋಗವಾಗಲಿದೆ. ಈ ಮೂಲಕ ಮೂರು ಕಿ.ಮೀ. ಉಳಿತಾಯವಾಗಲಿದೆ!

ಅತ್ತಾವರ, ಮಂಗಳಾದೇವಿ ವಾರ್ಡ್‌ಗೆ ಸಂಬಂಧಪಟ್ಟ ಪ್ರದೇಶ ಇದಾಗಿದ್ದು, ಶಿವನಗರ, ಪಾಂಡೇಶ್ವರ, ಮಂಕಿ ಸ್ಟ್ಯಾಂಡ್ , ಮಂಗಳಾ ನಗರ, ಸುಭಾಶ್‌ನಗರ, ಮಂಗಳಾದೇವಿ ಭಾಗದ ಸ್ಥಳೀಯರು ಇದರ ಬಗ್ಗೆ ಬೇಡಿಕೆ ಪತ್ರಕ್ಕೆ ಸಹಿ ಹಾಕಿದ್ದಾರೆ. ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ವೇದವ್ಯಾಸ ಕಾಮತ್‌, ಮೇಯರ್‌ ಪ್ರೇಮಾನಂದ ಶೆಟ್ಟಿ ಸಹಿತ ಸ್ಥಳೀಯ ಕಾರ್ಪೋರೆಟರ್‌ಗಳಿಗೆ ಮನವಿ ಸಲ್ಲಿಸಲಾಗಿದೆ.

ಗೋಳು ಕೇಳುವವರಿಲ್ಲ
ಪಾಂಡೇಶ್ವರ ರೈಲ್ವೇಗೇಟ್‌ನಲ್ಲಿ ದಿನನಿತ್ಯ ಗೂಡ್ಸ್‌ ರೈಲು ಹಾಗೂ ರೈಲ್ವೇ ಎಂಜಿನ್‌ಗಳ ಓಡಾಟದಲ್ಲಿ ಹೃದಯ ಭಾಗವಾದ ಮಂಗಳೂರು ನಗರ ಸಂಪರ್ಕಕ್ಕೆ ಪದೇ ಪದೇ ರಸ್ತೆ ಬಂದ್‌ ಆಗುತ್ತದೆ. ಈ ಭಾಗದ ಜನರಿಗೆ ಆಸ್ಪತ್ರೆಗೆ ತೆರಳಲು ಕಷ್ಟವಾಗುತ್ತಿದೆ. ಹೀಗಾಗಿ ತುರ್ತಾಗಿ ತೆರಳುವವರ ಗೋಳು ಕೇಳುವವರಿಲ್ಲ ಎಂಬಂತಾಗಿದೆ. ಆದ್ದರಿಂದ ಈ ಸಮಸ್ಯೆಯನ್ನು ತಪ್ಪಿಸಲು ಶಿವನಗರದಿಂದ ಕೆಎಂಸಿ ಅತ್ತಾವರ ಭಾಗಕ್ಕೆ ಹೋಗಲು ಈಗಾಗಲೇ ಇರುವ ತೋಡಿಗೆ ಕಾಂಕ್ರೀಟ್‌ ಸ್ಲಾ$Âಬ್‌ ಹಾಕಿ ಅತ್ತಿಂದಿತ್ತ ತೆರಳಲು ಅವಕಾಶ ನೀಡಬಹುದು. ಈ ಮೂಲಕ ದ್ವಿಚಕ್ರ ವಾಹನ ಅಥವಾ ರಿಕ್ಷಾ ಸಂಚಾರಕ್ಕಾದರೂ ಅವಕಾಶ ನೀಡಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.

ಸುಮಾರು 20 ವರ್ಷಗಳ ಹಿಂದೆ ಇದೇ ಜಾಗದಿಂದ ದ್ವಿಚಕ್ರ ವಾಹನ ಓಡಾಟಕ್ಕೆ ಅವಕಾಶವಿತ್ತು. ಆಗ ಹಲವು ಮಂದಿ ಇದೇ ದಾರಿಯನ್ನು ಉಪಯೋಗಿಸಿ ಅತ್ತಿಂದಿತ್ತ ತೆರಳುತ್ತಿದ್ದರು. ಆದರೆ ಕೆಲವು ಸಮಯ ದಿಂದ ಇಲ್ಲಿಗೆ ಮಣ್ಣು ಹಾಕಿದ ಪರಿಣಾಮ ದ್ವಿಚಕ್ರ ವಾಹನ ಸಂಚಾರಕ್ಕೂ ಈಗ ಇಲ್ಲಿ ಅವಕಾಶವಿಲ್ಲ. ಸದ್ಯ ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ನಡೆಯುತ್ತಿರುವ ಹಿನ್ನೆಲೆ ಯಲ್ಲಿ ಪಾಂಡೇಶ್ವರ ಶಿವನಗರದಿಂದ ಅತ್ತಾ ವರ ಕೆಎಂಸಿ ಭಾಗದ ಸಂಪರ್ಕಕ್ಕೆ ರಸ್ತೆ ಸಂಪರ್ಕ ಮಾಡಬಹುದಾಗಿದೆ. ಈ ಬಗ್ಗೆ ರೈಲ್ವೇ ಅಧಿ ಕಾರಿಗಳನ್ನು ಸ್ಥಳಕ್ಕೆ ಕರೆತಂದು ವಿಷಯ ಪ್ರಸ್ತಾ ವಿಸಲಾಗಿದೆ. ಸದ್ಯ ಇರುವ ತೋಡಿನ ಮೇಲೆ ಕಾಂಕ್ರೀಟ್‌ ಸ್ಲ್ಯಾಬ್ ಹಾಕಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.

ರೈಲ್ವೇ ಗೇಟ್‌; ಸಂಚಾರ ಅಸ್ತವ್ಯಸ್ಥ
ಪಾಂಡೇಶ್ವರದಲ್ಲಿ ಆಗಾಗ್ಗೆ ಗೂಡ್ಸ್‌ ರೈಲುಗಳು/ಎಂಜಿನ್‌ಗಳು ಈ ಹಳಿಯಲ್ಲಿ ಬಂದರ್‌ನ ಗೂಡ್ಸ್‌ಶೆಡ್‌ಗೆ ಓಡಾಡುತ್ತಿವೆ. ದಿನದಲ್ಲಿ ಕನಿಷ್ಠವೆಂದರೂ ಮೂರು- ನಾಲ್ಕು ಬಾರಿ ಗೂಡ್ಸ್‌ ರೈಲುಗಳು ಸಂಚ ರಿಸುತ್ತವೆ. ರೈಲು ಸಂಚರಿಸುವ ವೇಳೆ ರಸ್ತೆ ಸಂಚಾರ ನಿಲ್ಲಿಸಲು ಕಬ್ಬಿಣದ ಗೇಟ್‌ ಇಲ್ಲಿ ಮುಚ್ಚಲಾಗುತ್ತದೆ. ಕೆಲವೊಂದು ಬಾರಿ ಗೂಡ್ಸ್‌ರೈಲು ಆಗಮಿಸಿದಾಗ ರೈಲ್ವೇ ಗೇಟ್‌ ಹಾಕುವ ಕಾರಣದಿಂದ ಕನಿಷ್ಠ 15ರಿಂದ 20 ನಿಮಿಷ ರಸ್ತೆ ಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ.

ಸ್ಥಳೀಯರಿಂದ ಮನವಿ ಸಲ್ಲಿಕೆ
ಪಾಂಡೇಶ್ವರ ಶಿವನಗರದಿಂದ ಅತ್ತಾವರ ಕೆಎಂಸಿ ಆಸ್ಪತ್ರೆಯ ಸಮೀಪಕ್ಕೆ ಸಂಪರ್ಕ ಕಲ್ಪಿಸಲು ರೈಲ್ವೇ ಅಂಡರ್‌ ಪಾಸ್‌ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ ಈಗಾಗಲೇ ಸ್ಥಳೀಯರ ಬೇಡಿಕೆಯನ್ನು ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಲಘುವಾಹನಗಳಿಗೆ ಈ ರಸ್ತೆಯಲ್ಲಿ ಅವಕಾಶ ನೀಡಿದರೆ ಬಹಳಷ್ಟು ಮಂದಿಗೆ ಉಪಯೋಗವಾಗಲಿದೆ. ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಇದನ್ನು ಜಾರಿಗೊಳಿಸಬಹುದಾಗಿದೆ.
– ಕೃಷ್ಣಪ್ಪ ಪೂಜಾರಿ, ಮಂಗಳಾದೇವಿ

ಟಾಪ್ ನ್ಯೂಸ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

drowned

Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.