“ದೊಂಬರಾಟ’ ಪದ ಬಳಸಿ ಸಮುದಾಯಕ್ಕೆ ಅಪಮಾನ
Team Udayavani, Dec 7, 2021, 6:25 PM IST
ಕನಕಪುರ: ದೊಂಬರಾಟ ಎಂಬ ಪದವನ್ನು ಬಳಸಿ ನಮ್ಮ ಸಮುದಾಯಕ್ಕೆ ಅವಮಾನ ಮಾಡಬೇಡಿ ಎಂದು ದೊಂಬರ ಸಮುದಾಯದ ಮುಖಂಡ ಮುತ್ತುರಾಜು ಮನವಿ ಮಾಡಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಹಲವಾರು ರಾಜಕಾರಣಿ ಗಳು ದೊಂಬರಾಟ ಎಂಬ ಪದ ಬಳಕೆ ಮಾಡುತ್ತಿದ್ದಾರೆ.
ದೊಂಬರಾಟ ಎಂಬುದನ್ನು ಬಳಸಬಾರದು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಈ ಹಿಂದೆ ಅಸೆಂಬ್ಲಿಯಲ್ಲಿ ಸೂಚನೆ ನೀಡಿದ್ದರು. ಆದರೂ, ಕೆಲ ರಾಜಕಾರಣಿಗಳು ದೊಂಬರಾಟ ಎಂಬ ಪದವನ್ನು ಪುನರುಚ್ಚಾರ ಮಾಡಿ ನಮ್ಮ ಸಮುದಾಯಕ್ಕೆ ಮುಜುಗರ ಹಾಗೂ ಅವಮಾನ ಮಾಡುತ್ತಿ¨ದ್ದಾರೆಂದು ವಿಷಾದಿಸಿದರು.
ಆಕ್ಷೇಪ: ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಹಲವಾರು ರಾಜಕಾರಣಿಗಳು ಈ ಪದ ಬಳಸಿ ಮುಂದೆ ಬಳಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಇತ್ತೀಚಿಗೆ ಚಿಕ್ಕಮಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ದೊಂಬರಾಟ ಎಂಬ ಪದ ಬಳಸಿದ್ದಾರೆ. ಹೀಗಾಗಿ ನಮ್ಮ ಸಮುದಾಯದ ಮುಖಂಡರು ಆಕ್ಷೇಪ ವ್ಯಕ್ತಪಡಿ ಸಿದರು. ಈ ಹಿನ್ನೆಲೆ ಡಿ.ಕೆ.ಶಿವಕುಮಾರ್ ಪುನರುಚ್ಚಾರ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದರು.
ಎಚ್ಚರಿಕೆ ವಹಿಸಿ: ದೊಂಬರಾಟ ಎಂಬುದು ಹಾಡು ಭಾಷೆಯಾದರೂ ನಮ್ಮ ಸಮುದಾಯಕ್ಕೆ ಅಗೌರವ ತೋರಿಸಿದಂತೆ ಕೆಲವು ಮಾಧ್ಯಮಗಳೂ ಇಂತಹ ಪದ ಬಳಸಿಕೊಳ್ಳುತ್ತಿದ್ದಾರೆ. ದೊಂಬರಾಟ ಎಂಬುದು ಒಂದು ಸಾಹಸ ಮತ್ತು ಕಲೆ ಹಾಗೂ ಮನರಂಜನೆಗೆ ಹೆಸರು ವಾಸಿಯಾದ ಪದ. ಇಂದಿನ ಚಲನಚಿತ್ರಗಳಲ್ಲಿ ಗ್ರಾಫಿಕ್ಸ್ ಮತ್ತು ಡ್ನೂಪ್ ಹಾಕಿ ಸಾಹಸ ದೃಶ್ಯ ಚಿತ್ರೀಕರಿಸುತ್ತಾರೆ.
ಆದರೆ ನಮ್ಮ ಸಮುದಾಯ ಪ್ರಾಣ ಪಣಕ್ಕಿಟ್ಟು ಸಾಹಸ ಮಾಡಿ ಜನರಿಗೆ ಮನರಂಜನೆ ನೀಡುತ್ತಿದ್ದರು. ಅಂತಹ ಸಮುದಾಯವನ್ನು ನಾನಾ ಕಾರಣಗಳಿಗೆ ದೊಂಬರಾಟ ಎಂಬ ಪದ ಬಳಸಿ ಅವಮಾನ ಮಾಡಬೇಡಿ. ನಮ್ಮ ಸಮುದಾಯದ ರಾಜ್ಯ ಮುಖಂಡರು ಹಿಂದೆಯೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೂ ಅದಕ್ಕೆ ಕಡಿಮೆಯಾಗಿಲ್ಲ. ಹಾಗಾಗಿ ಮತ್ತೂಮ್ಮೆ ಪ್ರಸ್ತುತ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ.
ಸರ್ಕಾರವೂ ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಸಂವಿಧಾನದಲ್ಲಿ ಅವಕಾಶವಿದ್ದರೆ ನಮಗೆ ಸಾಹಸಿ ಜನಾಂಗ ಎಂದು ನಮ್ಮ ಜನಾಂಗಕ್ಕೆ ಮರು ನಾಮಕರಣ ಮಾಡಿ ಎಂದು ಆಗ್ರಹ ಮಾಡಿದರು. ಈ ಸಂದರ್ಭದಲ್ಲಿ ದೊಂಬರ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್, ಖಜಾಂಚಿ ಕುಮಾರ್, ಸಂಘಟನಾ ಕಾರ್ಯದರ್ಶಿ ಸರೋಜಮ್ಮ, ರಾಜೇಶ್, ಮಂಜುನಾಥ್, ಎಸ್ಸಿ, ಎಸ್ಟಿ ಮತ್ತು ಅಲೆಮಾರಿ ಆಯ್ಕೆ ಸಮಿತಿ ಸದಸ್ಯೆ ರಾಣಿ, ಮುಖಂಡರಾದ ಶ್ರೀನಿವಾಸ್, ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.