ಯುಎಇ: ಇನ್ನು ಶನಿವಾರ- ರವಿವಾರ ವಾರಾಂತ್ಯ ರಜೆ!
Team Udayavani, Dec 8, 2021, 7:25 AM IST
ದುಬಾೖ: ಸಂಯುಕ್ತ ಅರಬ್ ಅಮೀರ್‌ಶಾಹಿ (ಯುಎಇ)ಯಲ್ಲಿ ಇನ್ನು ಮುಂದೆ ಶುಕ್ರವಾರದ ಬದಲು ಶನಿವಾರ- ರವಿವಾರವೇ ವಾರಾಂತ್ಯದ ರಜೆ ಇರಲಿದೆ. ಅಲ್ಲದೆ ಅಧಿಕೃತ ಕೆಲಸದ ದಿನಗಳನ್ನು ವಾರಕ್ಕೆ ನಾಲ್ಕೂವರೆ ದಿನಗಳಿಗೆ ಇಳಿಕೆ ಮಾಡಲಾಗಿದೆ.
ಪ್ರಮುಖ ಹಣಕಾಸು ಸಂಸ್ಥೆಗಳತವರಾಗಿರುವ ಇಸ್ಲಾಮಿಕ್ ರಾಷ್ಟ್ರವು ಈಗ ಪಾಶ್ಚಾತ್ಯ ವೇಳಾಪಟ್ಟಿಯನ್ನು ಅನು ಸರಿಸಲು ನಿರ್ಧರಿಸಿದೆ. ಅದರಂತೆ ಜ. 1ರಿಂದಲೇ ಇಲ್ಲಿ ಕೆಲಸದ ವಾರವು ಸೋಮ ವಾರದಿಂದ ಶುಕ್ರವಾರದ ವರೆಗೆ ಇರಲಿದ್ದು, ಶನಿವಾರ ಮತ್ತು ರವಿವಾರ ರಜಾ ದಿನವಾಗಿರಲಿದೆ. ಸರಕಾರಿ ಉದ್ಯೋಗಿಗಳಿಗೆ ಶುಕ್ರ ವಾರ (ಮುಸ್ಲಿಮರ ಸಾಂಪ್ರದಾಯಿಕ ರಜಾ ದಿನ) ಅರ್ಧ ದಿನ ಕೆಲಸವಿರುತ್ತದೆ.
ಇದನ್ನೂ ಓದಿ:ಒಮಿಕ್ರಾನ್ ರೂಪಾಂತರಿ ಹಿನ್ನೆಲೆ: ಬಡ್ಡಿದರ ಯಥಾ ಸ್ಥಿತಿ ಸಾಧ್ಯತೆ
ಏಕೆ ಈ ಬದಲಾವಣೆ?
ಬಹುತೇಕ ದೇಶಗಳು ಶನಿವಾರ, ರವಿವಾರವನ್ನು ವಾರಾಂತ್ಯದ ರಜಾ ದಿನ ಎಂದು ಪರಿಗಣಿಸುತ್ತಿವೆ. ಈ ದೇಶ ಗಳೊಂದಿಗೆ ಹಣಕಾಸು, ವ್ಯಾಪಾರ, ಆರ್ಥಿಕ ವಹಿವಾಟನ್ನು ಸರಾಗವಾಗಿ ನಡೆಸಲು, ಅಂತಾ ರಾಷ್ಟ್ರೀಯ ಉದ್ದಿಮೆ ನಂಟನ್ನು ಬಲಿಷ್ಠ ಗೊಳಿಸಲು, ಯುಎಇ ಮೂಲದ ಮತ್ತು ಇತರ ಸಾವಿರಾರು ಬಹು ರಾಷ್ಟ್ರೀಯ ಕಂಪೆನಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಶಾಲೆಯಲ್ಲೂ ಬದಲಾವಣೆ?
ಮುಂದಿನ ದಿನ ಗಳಲ್ಲಿ ಖಾಸಗಿ ಸಂಸ್ಥೆ ಗಳು ಮತ್ತು ಶಾಲೆಗಳು ಕೂಡ ಇದೇ ಮಾದರಿ ಅನುಸರಿಸುವ ಸಾಧ್ಯತೆ ಯಿದೆ. ಜಾಗತಿಕ ಕೆಲಸದ ವಾರ (ವಾರದಲ್ಲಿ 5 ದಿನ)ಕ್ಕಿಂತಲೂ ಕಡಿಮೆ ಅವಧಿಯ ರಾಷ್ಟ್ರೀಯ ಕೆಲಸದ ವಾರವನ್ನು ಪರಿಚಯಿಸು ತ್ತಿರುವ ಮೊದಲ ರಾಷ್ಟ್ರ ನಮ್ಮದು ಎಂದು ಯುಎಇ ಸರಕಾರ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bangladesh: ಹಿಂದೂಗಳ ರಕ್ಷಣೆಗೆ ಮುಂದಾಗಿ: ಬಾಂಗ್ಲಾಕ್ಕೆ ಕೇಂದ್ರ ಸರ್ಕಾರ ಮನವಿ
Editorial: ಪುಂಡ ವಿದ್ಯಾರ್ಥಿಗಳಿಗೆ ಶಿಕ್ಷೆ: ಸ್ಪಷ್ಟ ಮಾರ್ಗಸೂಚಿ ಅಗತ್ಯ
Mangaluru: ನ್ಯಾಯಾಂಗ ನಿಂದನೆ ಪ್ರಕರಣ: ಹನುಮಂತ ಕಾಮತ್‌ಗೆ ಕಾರಾಗೃಹ ಶಿಕ್ಷೆ
Parliament: ಎರಡೂ ಸದನಗಳಲ್ಲಿ ಸಂವಿಧಾನದ ಬಗ್ಗೆ ಚರ್ಚೆಗೆ ವಿಪಕ್ಷ ನಾಯಕರ ಪತ್ರ
Congress Politics: ಡಿಸಿಎಂ ಡಿ.ಕೆ.ಶಿವಕುಮಾರ್ ದಿಲ್ಲಿಗೆ ಭೇಟಿ: ಹೈಕಮಾಂಡ್ ಜತೆ ಚರ್ಚೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.