ಶಿರಸಿ: ಯಕ್ಷಗೆಜ್ಜೆ ವಾರ್ಷಿಕೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ
Team Udayavani, Dec 8, 2021, 4:21 PM IST
ಶಿರಸಿ: ಮಹಿಳೆಯರು, ಮಕ್ಕಳಿಗೆ ಸಂಪ್ರದಾಯಬದ್ಧ ಯಕ್ಷಗಾನ ನೃತ್ಯಾಭ್ಯಾಸಕ್ಕೆ ಪೂರಕ ಚಟುವಟಿಕೆ ನಡೆಸುತ್ತಿರುವ ಇಲ್ಲಿನ ಯಕ್ಷಗೆಜ್ಜೆ ಕೇಂದ್ರದ ವಾರ್ಷಿಕೋತ್ಸವ ಡಿ.11ರಂದು ಮಧ್ಯಾಹ್ನ 3:30 ಕ್ಕೆ ನಗರದ ಟಿಆರ್ಸಿ ಸಭಾಂಗಣದಲ್ಲಿ ನಡೆಯಲಿದೆ.
ಯಕ್ಷಗೆಜ್ಜೆ ಅಧ್ಯಕ್ಷೆ ನಿರ್ಮಲಾ ಹೆಗಡೆ ಗೋಳಿಕೊಪ್ಪ ವಿನಾಯಕ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿ ಆಯೋಜಿಸಿ ಮಾಹಿತಿ ನೀಡಿದರು.
ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರ ಆಶೀರ್ವಾದದೊಂದಿಗೆ 2017 ಜೂನ್ 25 ರಂದು ನಗರದ ಯೋಗಮಂದಿರದಲ್ಲಿ ಯಕ್ಷಗೆಜ್ಜೆ ಯಕ್ಷಗಾನ ತರಬೇತಿ ಕೇಂದ್ರಕ್ಕೆ ಚಾಲನೆ ಸಿಕ್ಕಿತ್ತು. ಈಗ ಮೂರು ವರ್ಷ ತುಂಬಿ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. 30ಕ್ಕೂ ಹೆಚ್ಚು ಮಕ್ಕಳು ಹಾಗೂ ಮಹಿಳೆಯರು ಇಲ್ಲಿ ಯಕ್ಷಗಾನ ನೃತ್ಯಾಭ್ಯಾಸ ಮಾಡುತ್ತಿದ್ದಾರೆ ಎಂದರು.
ಹೊಸ ಹೊಸ ಪ್ರಸಂಗಗಳನ್ನು ಕಲಿಯುತ್ತ ಪೌರಾಣಿಕ ಕಥೆಗಳನ್ನು ಕೂಡ ಈ ಮೂಲಕ ಅರಿಯುತ್ತಿದ್ದಾರೆ. ನೂರಕ್ಕೂ ಅಧಿಕ ಯಕ್ಷಗಾನ ಕಾರ್ಯಕ್ರಮ ನೀಡಲಾಗಿದೆ ಎಂದರು.
ಕಾರ್ಯಕ್ರಮವನ್ನು ಅಂದು ನಡೆಯುವ ಕಾರ್ಯಕ್ರಮವನ್ನು ಟಿ.ಆರ್.ಸಿ. ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಉದ್ಘಾಟಿಸುವರು. ಪತ್ರಕರ್ತ ಅಶೋಕ ಹಾಸ್ಯಗಾರ ಅಧ್ಯಕ್ಷತೆವಹಿಸುವರು. ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಉಪಸ್ಥಿತರಿರುವರು.
ಕಾರ್ಯಕ್ರಮದ ಅಂಗವಾಗಿ ರಂಗತಜ್ಞ ಎಂ.ಆರ್.ಹೆಗಡೆ ಕಾನಗೋಡ,ಮದ್ದಲೆ ವಾದಕ ಶ್ರೀಪಾದ ಭಟ್ಟ ಮೂಡಗಾರ ಅವರಿಗೆ ಯಕ್ಷಗೆಜ್ಜೆ ಸನ್ಮಾನ ನೆರವೇರಲಿದೆ. ಪ್ರಸಂಗಕರ್ತ ರಾದ ಪ್ರಭಾಕರ ಹೆಗಡೆ ಮಾಗಿನಬೈಲು ಹಾಗೂ ಎಚ್.ಬಿ.ನಾಯ್ಕ ಅವರನ್ನು ಗೌರವಿಸಲಾಗುತ್ತದೆ ಎಂದು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳಿಂದ ಶಿಬಿ ಚಕ್ರವರ್ತಿ, ಕೃಷ್ಣ ಲೀಲೆ ಕುರಿತ ಪೂರ್ವರಂಗ ಯಕ್ಷಗಾನ ರೂಪಕ, ರಾವಣಾವಸಾನ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ಗಜಾನನ ಭಾಗವತ ತುಳಗೇರಿ, ಮದ್ದಳೆಯಲ್ಲಿ ಶ್ರೀಪಾದ ಭಟ್ಟ, ಚಂಡೆಯಲ್ಲಿ ಗಜಾನನ ಹೆಗಡೆ, ಮುಮ್ಮೇಳದಲ್ಲಿ ಮಯೂರಿ ಉಪಾಧ್ಯಾಯ, ಸೌಮ್ಯ ಹೆಗಡೆ, ನಿರ್ಮಲಾ ಹೆಗಡೆ, ಆಶಾ ಹೆಗಡೆ, ವಿಜಯಶ್ರೀ ಹೆಗಡೆ, ಲತಾ ಗಿರಿಧರ, ಜ್ಯೋತಿ ಭಟ್ಟ, ಸ್ನೇಹಶ್ರೀ ಹೆಗಡೆ, ಭೂಮಿಕಾ ಹೆಗಡೆ, ಅಭಿಜ್ಞಾ ಹೆಗಡೆ, ರಕ್ಷಿತಾ, ಗೌತಮಿ, ರಶ್ಮಿ, ಮೈತ್ರಿ, ಗ್ರೀಷ್ಮಾ, ಮೌಲ್ಯಾ, ಸ್ವರ್ಣ, ಶ್ರಾವ್ಯ, ಸಮನ್ವಿತಾ, ರಚನಾ, ಮಹಾಲಕ್ಷ್ಮಿ, ಮಹಿಮಾ, ಮೋಹಿತ, ಪ್ರತೀಕ್ಷಾ, ಆರಾಧ್ಯ, ಮಾನಸ, ಮಂದಾರ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಈ ವೇಳೆ ಸಂಸ್ಥೆಯ ಎಂ.ಕೆ.ಹೆಗಡೆ ಗೋಳಿಕೊಪ್ಪ, ಸತೀಶ ಹೆಗಡೆ ಸಾಮ್ರಾಟ, ವಿಘ್ನೇಶ್ವರ ಹೆಗಡೆ, ಜ್ಯೋತಿ ಶೇಖರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.