ಶಿಗ್ಗಾವಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ
ಸಭೆ ನಡೆಸಲು ಅಧ್ಯಕ್ಷರ ಖುರ್ಚಿಯನ್ನೇ ಬಿಟ್ಟು ಕೊಡಲಿಲ್ಲ.
Team Udayavani, Dec 8, 2021, 6:28 PM IST
ಶಿಗ್ಗಾವಿ: ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಪರ 17 ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಕಾಂಗ್ರೆಸ್‌ನ 6 ಜನ ಸದಸ್ಯರು, ಬಿಜೆಪಿಯ 9 ಜನ ಸದಸ್ಯರು ಹಾಗೂ ಪಕ್ಷೇತರ 8 ಜನರ ಪುರಸಭೆಯ ಪ್ರಸಕ್ತ ಆಡಳಿತದಲ್ಲಿ ಬಿಜೆಪಿ ಸದಸ್ಯ ಶ್ರೀಕಾಂತ ಬುಳ್ಳಕ್ಕನವರ ಹಾಗೂ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ ಪಕ್ಷೇತರರ ಬೆಂಬಲದಿಂದ ಕ್ರಮವಾಗಿ ಅಧ್ಯಕ್ಷ-ಉಪಾಧ್ಯಕ್ಷರಾಗಿ ಹತ್ತು ತಿಂಗಳ ಆಡಳಿತ ನಡೆಸಿದ್ದರು.
ಈಗಾಗಲೇ ಕಳೆದ ತಿಂಗಳು ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಎಲ್ಲ ಸದಸ್ಯರ ಸಹಿಯೊಂದಿಗೆ ಅವಿಶ್ವಾಸ ನಿರ್ಣಯ ಪತ್ರದ ಮೂಲಕ ಮುಖ್ಯಾಧಿಕಾರಿಗಳಿಗೆ ಸಾಮಾನ್ಯ ಸಭೆ ಕರೆಯುವಂತೆ ಮನವಿ ಸಲ್ಲಿಸಿದ್ದರು. ಈ ಕುರಿತು ಪುರಸಭೆ ಹಾಲಿ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಸದಸ್ಯರು ಕೈಗೊಂಡ ಅವಿಶ್ವಾಸ ನಿರ್ಣಯ ರದ್ದುಪಡಿಸಲು ಹೈಕೋರ್ಟ್ ಮೊರೆ ಹೋಗಿದ್ದರು.
ಆದರೆ ಧಾರವಾಡ ಹೈಕೋರ್ಟ್ ಜಿಲ್ಲಾಧಿಕಾರಿಗಳ ಮೂಲಕ ಸದಸ್ಯರ ಸಭೆ ನಡೆಸಿ ಅವಿಶ್ವಾಸ ಮಂಡನೆಗೆ ವ್ಯಕ್ತಪಡಿಸಿದ ದಾಖಲೆ ಸಲ್ಲಿಸಲು ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಅದರಂತೆ ಮಂಗಳವಾರದ ಸಭೆಯನ್ನು ನಾನೇ ನಡೆಸುತ್ತೇನೆ. ನಾನೇ ಹಾಲಿ ಅಧ್ಯಕ್ಷ ಎಂದು ಶ್ರೀಕಾಂತ ಬುಳ್ಳಕ್ಕನವರ ವಿವರಣೆ ನೀಡಿದರು.
ಆದರೆ ಅದಕ್ಕೆ ಸರ್ವ ಸದಸ್ಯರು ಒಪ್ಪಲೇ ಇಲ್ಲ. ಸಭೆ ನಡೆಸಲು ಅಧ್ಯಕ್ಷರ ಖುರ್ಚಿಯನ್ನೇ ಬಿಟ್ಟು ಕೊಡಲಿಲ್ಲ. ಯಾರ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕೆನ್ನುವುದರ ಬಗ್ಗೆಯೇ ಒಂದು ತಾಸಿಗೂ ಹೆಚ್ಚು ಕಾಲ ಗೊಂದಲ ಉಂಟಾಯಿತು. ಸಭೆಯಲ್ಲಿ ಪುರಸಭೆ ಮುಖ್ಯಾಧಿ ಕಾರಿ ಕಾನೂನು ಪುಸ್ತಕದ ಮೂಲಕ ವಿವರಣೆ ನೀಡಿದರೂ ಸಭೆಯ ನಿರ್ಣಯಕ್ಕೆ ಹಾಲಿ ಅಧ್ಯಕ್ಷರು ಬೆಲೆ ಕೊಡಲಿಲ್ಲ.
ಪುರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾದ ಕಾರಣ ಸಭಾಧ್ಯಕ್ಷರಾಗಿ ಶ್ರೀಕಾಂತ ಬುಳ್ಳಕ್ಕನವರ ಸಭೆ ನಡೆಸಬಾರದೆಂದು ಒತ್ತಾಯಪಡಿಸಿದರು. ಮುಖ್ಯಾಧಿಕಾರಿ ಪುರಸಭೆ ಕಾನೂನು ಬಗ್ಗೆ ಎಷ್ಟೇ ತಿಳಿವಳಿಕೆ ನೀಡಿದರೂ ಶ್ರೀಕಾಂತ ಬುಳ್ಳಕ್ಕನವರ ಕುರ್ಚಿ ಬಿಟ್ಟು ಏಳಲಿಲ್ಲ. ಅನಿವಾರ್ಯವಾಗಿ ಗೊಂದಲದ ಗೂಡಾದ ಸಭೆಯಲ್ಲಿ ಹಾಜರಿದ್ದ ಸದಸ್ಯರ ಅನುಮತಿ ಪಡೆದು ಹಾಲಿ ಅಧ್ಯಕ್ಷರ ಪಕ್ಕದಲ್ಲಿಯೇ ಹಂಗಾಮಿ ಅಧ್ಯಕ್ಷರನ್ನಾಗಿ ಸುಭಾಸ್ ಚೌವ್ಹಾಣ ಅವರನ್ನು ಕುಳ್ಳರಿಸಿ ಅವಿಶ್ವಾಸ ಸಭೆ ನಡೆಸಿದರು. ಅಧ್ಯಕ್ಷರು-ಉಪಾಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯದ ಪರ 17 ಜನ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.
ಸಭೆಯಲ್ಲಿ ಹಾಜರಿದ್ದ ಯಾವುದೇ ಪಕ್ಷದ ಸದಸ್ಯರು ಹಾಲಿ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಬೆಂಬಲಕ್ಕೆ ನಿಲ್ಲಲೇ ಇಲ್ಲ. ಇಷ್ಟೆಲ್ಲ ಬೆಳವಣಿಗೆಗಳಾದರೂ ಹಾಲಿ ಅಧ್ಯಕ್ಷರು ಪೀಠವನ್ನು ಬಿಟ್ಟೇಳಲಿಲ್ಲ. ಇತ್ತ ಸದಸ್ಯರ ಬೆಂಬಲ ಸಿಗದೇ ಹೋದರೂ ರಾಜೀನಾಮೆ ನೀಡಲಿಲ್ಲ. ಎಲ್ಲ ದಾಖಲಾತಿಯನ್ನು ಧಾರವಾಡ ಉತ್ಛ ನ್ಯಾಯಾಲಯಕ್ಕೆ ಸಲ್ಲಿಸುತ್ತೇನೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಇಷ್ಟೆಲ್ಲಾ ಬೆಳವಣಿಗೆಗಳಾದರೂ ರಾಜೀನಾಮೆ ನೀಡುವ ಪ್ರಸ್ತಾಪ ಒಪ್ಪಿಲ್ಲ. ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಸ್ವಪಕ್ಷ ಬಿಜೆಪಿ ಸದಸ್ಯ ಪರಶುರಾಮ ಸೊನ್ನದ ಸಭೆಯಲ್ಲಿ ಅನುಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ
ಹಾವೇರಿ: ನಿರ್ವಹಣೆ ಇಲ್ಲದೇ ನೀರಿನ ಘಟಕ ಬಂದ್-ಸವಾಲಾದ ಶುದ್ಧ ನೀರು ಪೂರೈಕೆ…
ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್ ರಂಗಮಂದಿರ ನಿರುಪಯುಕ್ತ
Haveri; ಪ್ರೀತಿ ವಿಚಾರಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ
Haveri: ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.