ಶೌಚಾಲಯ ಕಟ್ಟಲು ಇಒ ತಾಕೀತು
Team Udayavani, Dec 9, 2021, 10:29 AM IST
ಅಫಜಲಪುರ: ಅಂಗನವಾಡಿ ಕೇಂದ್ರ ಗಳಲ್ಲಿ ಕಡ್ಡಾಯವಾಗಿ ಶೌಚಾಲಯ ಇರಬೇಕು ಎಂದು ಹೈಕೋರ್ಟ್ ಆದೇಶ ಇರುವುದರಿಂದ ನಿಗದಿತ ಅವಧಿಯೊಳಗೆ ಕಟ್ಟಿಕೊಳ್ಳಬೇಕು ಎಂದು ತಾ.ಪಂ ಇಒ ರಮೇಶ ಸುಲ್ಪಿ ತಾಕೀತು ಮಾಡಿದರು.
ತಾ.ಪಂ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ತಾಲೂಕಿನ 98 ಅಂಗನವಾಡಿಗಳಿಗೆ ಶೌಚಾಲಯ ಮಂಜೂರಾಗಿವೆ. ಡಿ. 12ರ ಒಳಗಾಗಿ ಶೌಚಾಲಯ ಕಟ್ಟಿಸಬೇಕು. ಪ್ರತಿ ಶೌಚಾಲಯಕ್ಕೆ 40 ಸಾವಿರ ರೂ. ಅನುದಾನ ನಿಗದಿ ಪಡಿಸಲಾಗಿದ್ದು, ಗುಣಮಟ್ಟದ ಕಾಮಗಾರಿ ಆಗಬೇಕು ಎಂದು ತಿಳಿಸಿದರು.
ಶಿಶು ಅಭಿವೃದ್ದಿ ಇಲಾಖೆ ಅಧಿಕಾರಿ ಮೀನಾಕ್ಷಿ ಮಾತನಾಡಿ, ತಾಲೂಕಿನಾದ್ಯಂತ 260 ಅಂಗನವಾಡಿ ಕೇಂದ್ರಗಳಿದ್ದು ಸ್ವಂತ ಕಟ್ಟಡ 213 ಇವೆ. 27 ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಸಮುದಾಯ ಭವನ ಅಥವಾ ಶಾಲೆಗಳಲ್ಲಿ 20 ಕಡೆ ನಡೆಯುತ್ತಿವೆ. ಹೊಸ 14 ಕಟ್ಟಡಗಳು ನಡೆಯುತ್ತಿವೆ. ಈ ಪೈಕಿ ಏಳು ಕಟ್ಟಡಗಳು ಮುಗಿದಿದ್ದು, ವಶಕ್ಕೆ ಪಡೆಯಬೇಕಾಗಿದೆ. ಏಳು ಪ್ರಗತಿಯಲ್ಲಿವೆ, ಮಂಜೂರಾದ ಶೌಚಾಲಯಗಳನ್ನು ಗುಣಮಟ್ಟದಲ್ಲಿ ಕಟ್ಟಿಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪಿಆರ್‌ಇ ಎಇಇ ನಬಿ ಮಾತನಾಡಿ, ಶೌಚಾಲಯ ಕಾಮಗಾರಿಗಳನ್ನು ನಿಗ ದಿತ ಸಮಯದಲ್ಲಿ ಮುಗಿಸುತ್ತೇವೆ ಎಂದರು. ಅಧಿಕಾರಿಗಳಾದ ರಮೇಶ ಪಾಟೀಲ, ಮೇಲ್ವಿಚಾರಕಿಯರಾದ ಶಾರದಾ ಅವಟೆ, ನಿಂಗಮ್ಮ, ಗೌರಾ ಬಾಯಿ, ಪಾರ್ವತಿ ಹಾಗೂ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.