ಪುಣೆ-ಸೊಲ್ಲಾಪುರ ಗುಳೆ ಹೊರಟ ಜನ
Team Udayavani, Dec 9, 2021, 10:47 AM IST
ಹುಣಸಗಿ: ಕೃಷಿ ಕೂಲಿಕಾರ್ಮಿಕರು ಹಿಂಗಾರು ಹಂಗಾಮಿನಲ್ಲಿ ನಿರಂತರ ಕೆಲಸ ದೊರಕದ ಪರಿಣಾಮ ಬಹುತೇಕ ಕಾರ್ಮಿಕರು ಪುಣೆ, ಸೊಲ್ಲಾಪುರ ಸಿಟಿಗಳಿಗೆ ಗುಳೆ ಹೊರಡುತ್ತಿದ್ದಾರೆ. ಹುಣಸಗಿ ತಾಲೂಕಿನ ಗುಂಡಲಗೇರಿ ಗ್ರಾಮದ 15 ಹೆಚ್ಚು ಕುಟುಂಬಗಳು ಹೊಟ್ಟೆಪಾಡಿಗಾಗಿ ಪುಣೆಗೆ ಗುಳೆ ಹೋಗಿವೆ. ಊರಲ್ಲಿ ಕೆಲಸವಿಲ್ಲ. ಇಲ್ಲಿ ಇದ್ರೆ ಜೀವನ ನಡೆಯೋದಿಲ್ಲ ಎಂದು ಗುಳೆ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
ಉದ್ಯೋಗ ಖಾತ್ರಿಯೂ ಇಲ್ಲ
ಕಾರ್ಮಿಕರಿಗೆ ಉದ್ಯೋಗ ಖಾತ್ರಿಯೋಜನೆಯಲ್ಲಿ ಕೆಲಸವೂ ಸಿಗುತ್ತಿಲ್ಲ. ಇದು ಅಲ್ಲದೆ ನರೇಗಾ ಉದ್ಯೋಗ ಚೀಟಿಯೂ ಮಾಡಿಸಿಕೊಂಡಿಲ್ಲ. ಹಾಗೇ ಈ ಬಾರಿ ಎಡದಂಡೆ ಕಾಲುವೆಗೆ ನೀರಿನ ಅಭಾವ ಬೇರೆ. ಹಿಂಗಾರಿನಲ್ಲಿ ನಷ್ಟವೇ ಜಾಸ್ತಿ. ಉದ್ಯೋಗವೂ ಕಡಿಮೆ ಇದರಿಂದಾಗಿ ಕೂಲಿಗಾಗಿ ಪುಣೆಗೆ ಹೊರಟಿದ್ದೇವೆಂದು ಭೀಮಣ್ಣ, ರುದ್ರಪ್ಪ, ಗಂಗಪ್ಪ ಸೇರಿದಂತೆ ಕಾರ್ಮಿಕರು ಹೇಳಿದ್ದಾರೆ.
ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ವ್ಯವಸಾಯದಲ್ಲಿ ನಿರಂತರ ಕೃಷಿ ಚಟುವಟಿಕೆ ನಡೆಯುತ್ತಿದ್ದವು. ಈ ಬಾರಿ ಪ್ರಕೃತಿ ವಿಕೋಪದಿಂದ ನಷ್ಟವಾಗಿದೆ. ಅಲ್ಲದೆ ನೀರಿನ ಕೊರತೆಯಿಂದ ಕೃಷಿ ಚಟುವಟಿಕೆ ವಿರಳ ಆಗಲಿದೆ. ಹೀಗಾಗಿ ಮನೆಯಲ್ಲಿ ಕುಳಿತರೆ ಜೀವನ ಸಾಗಲ್ಲ. ಗುಳೆ ಹೋಗುವುದು ಬಿಟ್ಟರೆ ಬೇರೆ ದಾರಿಯೇ ಇಲ್ಲ ಎನ್ನುತ್ತಾರೆ ಗುಳೆ ಜನ.
ಕಾರಣ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಸುವಂತಹ ದೊಡ್ಡ ಕಂಪೆನಿ ಇಲ್ಲಿಲ್ಲ. ಈಗಾಗಲೇ ನರೇಗಾ ಇದ್ದರೂ ಕಾರ್ಮಿಕರಿಗೆ ವರದಾನವಾಗುತ್ತಿಲ್ಲ. ಕೆಲಸವೂ ಗ್ಯಾರಂಟಿ ಇಲ್ಲ. ಅಧಿಕಾರಿಗಳು ನಿಜವಾದ ಕೂಲಿಕಾರ್ಮಿಕರಿಗೆ ಉದ್ಯೋಗ ಚೀಟಿ ನೀಡಿ ನಿರಂತರ ಕೆಲಸ ಸೃಷ್ಟಿಸುವ ಗೋಜಿಗೆ ಮುಂದಾಗಿಲ್ಲ. ಹೀಗಾಗಿ ಇದೊಂದು ನಿದರ್ಶನ ಎನ್ನಲಾಗುತ್ತಿದೆ.
ಬಡಜನರ ಜೀವನ ಸುಧಾರಿಸಲು ಹಾಗೂ ಗುಳೆ ಹೋಗುವುದು ತಪ್ಪಿಸಲು ಈ ಭಾಗದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೆಚ್ಚು ದುಬಾರಿ ಕೂಲಿ ಮತ್ತು ಉದ್ಯೋಗ ಸೃಷ್ಟಿಗೆ ಮುಂದಾಗಬೇಕಿದೆ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.
ಪಂಚಾಯಿತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿದರೆ ಕೆಲಸ ಕೊಡಲು ಸಿದ್ಧರಿದ್ದೇವೆ. ಈ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಉದ್ಯೋಗ ಖಾತ್ರಿ ಕೆಲಸ ಕುರಿತು ಪ್ರಚಾರ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸುತ್ತೇನೆ. –ಪ್ರಕಾಶ ದೇಸಾಯಿ, ತಾಪಂ ಇಒ ಹುಣಸಗಿ
ಕಾರ್ಮಿಕರಿಗೆ ಉದ್ಯೋಗ ದೊರಕಿಸುವ ಸಲುವಾಗಿ ಉದ್ಯೋಗ ಖಾತ್ರಿ ಯೋಜನೆ ಇದೆ. ಬಡವರಿಗೆ ಕೆಲಸ ಸಿಗದೇ ಇರುವುದು ನೋವಿನ ಸಂಗತಿ. ಕಾರ್ಮಿಕರಿಗೆ ಖಾತ್ರಿಯಲ್ಲಿ ಕೆಲಸ ನೀಡಬೇಕು. ಗುಳೆ ಹೋಗುವುದನ್ನು ತಪ್ಪಿಸಬೇಕು. ಜನರ ಶ್ರೇಯೋಭಿವೃದ್ಧಿಗೆ ತಾಲೂಕಾಡಳಿತ ಮುಂದಾಗಬೇಕು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಾರ್ಮಿಕರ ಬದುಕು ಹದಗೆಟ್ಟಿದೆ. –ರಾಜಾ ವೆಂಕಟಪ್ಪ ನಾಯಕ, ಮಾಜಿ ಶಾಸಕರು ಸುರಪುರ
-ಬಾಲಪ್ಪ.ಎಂ. ಕುಪ್ಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.