ಆರ್ ಆರ್ ಆರ್ ಟ್ರೈಲರ್ ನಲ್ಲಿ ಅಬ್ಬರಿಸಿದ ಜ್ಯೂ.ಎನ್ ಟಿಆರ್, ರಾಮ್ ಚರಣ್: ಇಲ್ಲಿದೆ ವಿಡಿಯೋ
Team Udayavani, Dec 9, 2021, 12:42 PM IST
ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶನದ ಬಹುತಾರಾಗಣದ ಬಹು ನಿರೀಕ್ಷಿತ ‘ಆರ್ ಆರ್ ಆರ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಹವಾ ಎಬ್ಬಿಸಿದೆ.
ಜೂ.ಎನ್ ಟಿಆರ್ ಮತ್ತು ರಾಮ್ ಚರಣ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ಬಾಲಿವುಡ್ ನಟರಾದ ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ಹಲವು ಪ್ರಮುಖ ನಟರು ಆರ್ ಆರ್ ಆರ್ ಚಿತ್ರದಲ್ಲಿ ನಟಿಸಿದ್ದಾರೆ.
ಡಿವಿವಿ ಎಂಟರ್ಟೈನ್ ಮೆಂಟ್ಸ್ ಬ್ಯಾನರ್ ನಡಿಯಲ್ಲಿ ಚಿತ್ರದ ನಿರ್ಮಾಣ ನಡೆದಿದ್ದು, ಕೆ.ವಿ.ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಸಂಗೀತ ಮಾಂತ್ರುಕ ಎಂ.ಎಂ.ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಇದನ್ನೂ ಓದಿ:ವಿಡಿಯೋ: ಜನರಲ್ ಬಿಪಿನ್ ರಾವತ್ ಹೆಲಿಕಾಪ್ಟರ್ ಪತನದ ಕೊನೆಯ ಕ್ಷಣದ ದೃಶ್ಯ
ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಕಾಲಘಟದಲ್ಲಿ ನಡೆದ ಕಥೆಯಾಗಿದ್ದು, ನ್ಯೂ.ಎನ್ ಟಿಆರ್ ಅವರು ಸ್ವಾತಂತ್ರ್ಯ ಹೋರಾಟಗಾರನಾಗಿ ಮತ್ತು ರಾಮ್ ಚರಣ್ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಅವತರಣಿಕೆಯಲ್ಲಿ ಅವರೇ ಧ್ವನಿ ನೀಡಿದ್ದು, ಕನ್ನಡ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
#RRRTrailer Out Now!!
Telugu – https://t.co/tQlooQSFJ4
Hindi – https://t.co/pxWJujzupv
Tamil – https://t.co/E7a4UX0Quj
Kannada – https://t.co/UVBsxJVY9X
Malayalam – https://t.co/HlHwULBxxU
— DVV Entertainment (@DVVMovies) December 9, 2021
ಚಿತ್ರ 2022ರ ಜನವರಿ 7ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್ ಶೇಕ್ ಗ್ಯಾರೆಂಟಿ
Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್ ನಾಮಿನೇಷನ್ ವೋಟಿಂಗ್ ವಿಸ್ತರಣೆ
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.