ರಾಷ್ಟ್ರೀಯ ಶಿಕ್ಷಣ ನೀತಿ ಹೇರಿಕೆಗೆ ವಿರೋಧ
Team Udayavani, Dec 9, 2021, 2:13 PM IST
ಬಳ್ಳಾರಿ: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ದಿಢೀರ್ ಹೇರಿಕೆಯನ್ನು ವಿರೋಧಿಸಿ ಕೂಡಲೇವಾಪಸ್ ಪಡೆಯುವಂತೆ ಆಗ್ರಹಿಸಿ ನಗರದ ಡಿಸಿಕಚೇರಿ ಆವರಣದಲ್ಲಿ ಎಐಎಸ್‌ಇಸಿ, ಎಐಡಿಎಸ್‌ಒಸಂಘಟನೆಗಳಿಂದ ಬುಧವಾರ ಪ್ರತಿಭಟನೆನಡೆಸಲಾಯಿತು.
ಯಾವುದೇ ನೂತನ ಶಿಕ್ಷಣ ನೀತಿ ಜಾರಿಯಾದಾಗಅದರ ಆಧಾರದ ಮೇಲೆ ಶಿಕ್ಷಣ ತಜ್ಞರು,ಉಪನ್ಯಾಸಕರೊಂದಿಗೆ ಸಮಾಲೋಚನೆ ನಡೆಸಿ,ಪಠ್ಯಕ್ರಮ ತಯಾರಿಸುವ ಪ್ರಕ್ರಿಯೆಗೆ ಕನಿಷ್ಟ ಒಂದೆರಡುವರ್ಷಗಳು ಬೇಕಾಗುತ್ತದೆ. ಆದರೆ, ಎನ್‌ಇಪಿ-2020ಜಾರಿ ಮಾಡಬೇಕು ಎನ್ನುವ ಕೇಂದ್ರ ಸರ್ಕಾರದನಿರ್ದೇಶನವನ್ನು ತಾನೇ ಮೊದಲು ಅನುಷ್ಠಾನಕ್ಕೆತಂದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ರಾಜ್ಯಸರ್ಕಾರವು, ಕೇವಲ 15-20 ದಿನಗಳ ತಯಾರಿಯಲ್ಲಿನೀತಿಯನ್ನು ಜಾರಿ ಮಾಡಿತು.
ಯಾವುದೇ ಪೂರ್ವತಯಾರಿ, ಸಮಾಲೋಚನೆ ಇಲ್ಲದ ಸರ್ಕಾರದಇಂತಹ ಅಡ್ಡಾದಿಡ್ಡಿ ಕ್ರಮವು ವಿದ್ಯಾರ್ಥಿಗಳ ಭವಿಷ್ಯಕ್ಕೆಮತ್ತು ಶಿಕ್ಷಣದ ಗುಣಮಟ್ಟಕ್ಕೆ ಹಾನಿಯಾಗುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಪ್ರತಿಯೊಂದು ವಿಭಾಗದಲ್ಲಿ 3 ಪ್ರಮುಖವಿಷಯಗಳು ಅಥವಾ ಕಲೆ, ವಾಣಿಜ್ಯ ಇತರೆಕೋರ್ಸಿನ 3 ವಿಷಯಗಳು ಕಾಲದ ಪರೀಕ್ಷೆಯಲ್ಲಿಸಾಬೀತಾಗಿದ್ದು, ಒಂದು ಇನ್ನೊಂದಕ್ಕೆ ಬೆರೆತುಅಂತರ್ ಸಂಬಂ ಧ ಆಗಿದ್ದವು. ಇದು ವಿದ್ಯಾರ್ಥಿಗಳಸಮಗ್ರ ಜ್ಞಾನಕ್ಕೆ ಸಹಾಯಕವಾಗಿ ಇದ್ದವು.
ಆದರೆ,ಎನ್‌ಇಪಿ-2020 ಉನ್ನತ ಶಿಕ್ಷಣದಲ್ಲಿ ಪದವಿಯಲ್ಲಿಭೌತಶಾಸ್ತ್ರದ ಜೊತೆಗೆ ಸಂಬಂಧವೇ ಇಲ್ಲದ ನೃತ್ಯ/ಸಂಗೀತ/ಕಲೆ/ಕ್ರೀಡೆ ಮುಂತಾದವನ್ನು ಓದಬೇಕು.ಇಂಥ ನೀತಿಯಿಂದ ಯಾವುದೇ ವಿಷಯದ ಬಗ್ಗೆಸಮಗ್ರ, ಆಳವಾದ ಜ್ಞಾನವನ್ನು ಬೆಳೆಸಿಕೊಳ್ಳಲು ಹೇಗೆಸಾಧ್ಯ? ಎಂದು ಪ್ರಶ್ನಿಸಿರುವ ಪ್ರತಿಭಟನಾಕಾರರುವಿದ್ಯಾರ್ಥಿಗಳಿಗೆ- ಉಪನ್ಯಾಸಕರಿಗೆ ಪಠ್ಯಪಸ್ತಕಗಳಿಲ್ಲ.ಬೋಧಕರ ಕೊರತೆ, ಪಾಠ ಮಾಡಲು ಸಾಮಗ್ರಿಗಳಕೊರತೆ, ತರಗತಿಗಳ ಕೊರತೆಯಿಂದಾಗಿ, ತರಗತಿಸಮಯ ಆರಂಭವಾದರೂ ಏನು ಮಾಡಬೇಕುತಿಳಿಯದೇ ಈವರೆಗೂ ಯಾವುದೇ ಸಮಗ್ರ ರೀತಿಯಅಧ್ಯಾಯಗಳು ಯಾವ ವಿಭಾಗದಲ್ಲೂ ನಡೆದಿಲ್ಲ.
ಇದರಿಂದಾಗಿ ಕಲಿಸುವ ಉಪನ್ಯಾಸಕರು ಹಾಗೂಕಲಿಯುವ ವಿದ್ಯಾರ್ಥಿಗಳು ಇಬ್ಬರು ಅತ್ಯಂತಗೊಂದಲದ ಮನಸ್ಥಿತಿಯಲ್ಲಿ ಇದ್ದಾರೆ. ಹಾಗಾಗಿ ಎನ್‌ಇಪಿ-2020ನ್ನು ಈ ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಬಳಿಕಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಎಐಎಸ್‌ಇಸಿ ಜಿಲ್ಲಾಧ್ಯಕ್ಷ ಆರ್. ಸೋಮಶೇಖರಗೌಡ, ಜಿಲ್ಲಾ ಕಾರ್ಯದರ್ಶಿಎಸ್.ಜಿ. ನಾಗರತ್ನ, ಎಐಡಿಎಸ್‌ಒ ಜಿಲ್ಲಾ ಉಪಾಧ್ಯಕ್ಷೆಸೌಮ್ಯಾ, ಜೆ.ಪಿ. ರವಿಕಿರಣ್, ಮಂಜು, ಶಾಂತಿ,ಅನುಪಮಾ, ವಿವಿಧ ಕಾಲೇಜುಗಳ ಉಪನ್ಯಾಸಕರು,ವಿದ್ಯಾರ್ಥಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.