ತೊಗರಿ ಕಟಾವು ಯಂತ್ರಕ್ಕೆ ಭಾರಿ ಡಿಮ್ಯಾಂಡ್
Team Udayavani, Dec 9, 2021, 3:01 PM IST
ಮುದಗಲ್ಲ: ಸತತ ಮಳೆಯಿಂದ ಹಾಳಾದ ತೊಗರಿ ಕಟಾವು ಮಾಡುವ ರೈತರು ಯಂತ್ರದ ಮೊರೆ ಹೋಗಿದ್ದರಿಂದ ತೊಗರಿ ಕಟಾವು ಯಂತ್ರಕ್ಕೆ ಭಾರಿ ಡಿಮ್ಯಾಂಡ್ ಬಂದಿದೆ.
ಮುದಗಲ್ಲ ಹೊಬಳಿ ವ್ಯಾಪ್ತಿಯಲ್ಲಿ ಸುಮಾರು ಏಳು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು. ಆರಂಭದಲ್ಲಿ ಚೆನ್ನಾಗಿಯೇ ಬಂದ ತೊಗರಿಗೆ ಹೂವು, ಕಾಯಿ ಸಂದರ್ಭದಲ್ಲಿ ಫಂಗಸ್ ಮತ್ತು ಸಿಡಿ ರೋಗಕ್ಕೆ ತುತ್ತಾಗಿತ್ತು. ಅಳಿದುಳಿದ ತೊಗರಿ ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಬೆಂಬಿಡದ ಮಳೆ ಮತ್ತು ಮುಸುಕಿನ ವಾತಾವರಣದಿಂದ ತೊಗರಿ ಕಾಯಿಯೊಳಗೆ ಮೊಳಕೆಯೂಡೆದು ರೈತರು ನಷ್ಟ ಅನುಭವಿಸುವಂತಾಗಿತ್ತು. ಒಂದು ವಾರದಿಂದ ಬಿಸಿಲು ಕಾಣಿಸಿಕೊಂಡಿದ್ದರಿಂದ ತೊಗರಿ ಕಟಾವಿಗೆ ಕೂಲಿಕಾರರ ಕೊರತೆ ಕಾಡಿದ ಕಾರಣ ರೈತರು ಅನಿವಾರ್ಯವಾಗಿ ತೊಗರಿ ಕಟಾವು ಯಂತ್ರಗಳ ದುಂಬಾಲು ಬಿದ್ದಿದ್ದಾರೆ.
ಹೊರ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ರಾಜ್ಯದಲ್ಲಿನ ಸುಮಾರು 80ಕ್ಕೂ ಹೆಚ್ಚು ತೊಗರಿ ಕಟಾವು ಯಂತ್ರಗಳು ಬೀಡು ಬಿಟ್ಟಿವೆ. ಎಕರೆಗೆ 1200ರೂ.ದಿಂದ 1300ರೂ ವರೆಗೆ ಕಟಾವು ಮಾಡಲಾಗುತ್ತಿದೆ ಎಂದು ತೊಗರಿ ಬೆಳೆದ ಶಂಕ್ರಪ್ಪ, ಶಂಭುಲಿಂಗಪ್ಪ, ಹನುಮಂತಪ್ಪ, ಶರಣಪ್ಪ ಪತ್ರಿಕೆಗೆ ತಿಳಿಸಿದ್ದಾರೆ.
ನಾಗಲಾಪೂರ, ಆಮದಿಹಾಳ, ಪಿಕಳಿಹಾಳ, ಹೂನೂರ, ಬನ್ನಿಗೋಳ, ಕಾಚಾಪೂರ, ಕನಸಾವಿ, ಮೆದಕಿನಾಳ, ತಿರ್ಥಭಾವಿ, ಬೈಲಗುಡ್ಡ, ಮೂಡಲದಿನ್ನಿ, ಸುಲ್ತಾನಪೂರ, ಮಟ್ಟೂರ, ತೆರೆಭಾವಿ, ಬುದ್ದಿನ್ನಿ, ಹಡಗಲಿ, ಕನ್ನಾಳ, ಜಕ್ಕರಮಡು ಸೇರಿದಂತೆ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ 2-3ಯಂತ್ರಗಳು ಟಿಕಾಣಿ ಹೂಡಿವೆ.
ಇದನ್ನೂ ಓದಿ:ರೈತರ ಬೇಡಿಕೆ ಈಡೇರಿಕೆಗೆ ಕೇಂದ್ರ ಅಸ್ತು; 13 ತಿಂಗಳ ರೈತರ ಹೋರಾಟ ಕೊನೆಗೂ ಅಂತ್ಯ
ಇಳುವರಿ ಕುಂಠಿತ
ಸತತ ಮಳೆಯಿಂದ ತೊಗರಿ ಇಳುವರಿ ಕುಂಠಿತವಾಗಿದೆ. ಕಾಯಿಯೊಳಗೆ ಮೊಳಕೆಯೊಡೆದು ನಷ್ಟವಾಗಿದ್ದು ಒಂದೆಡೆಯಾದರೆ, ತಿಂಗಳ ಹಿಂದೆಯೇ ಕಟಾವು ಮಾಡಬೇಕಾದ ತೊಗರಿ ತಿಂಗಳ ನಂತರ ಕಟಾವು ಮಾಡಿದ್ದರಿಂದ ಕಾಯಿಯೊಳಗಿನ ಕಾಳಿಗೆ ಹಾನಿಯಾಗಿದೆ ಎಂದು ರೈತರು ನೋವು ತೋಡಿಕೊಂಡಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತೊಗರಿ ಹೆಚ್ಚು ನಷ್ಟವಾಗಿದೆ. ಸುಮಾರು 2600 ಹೆಕ್ಟೇರ್ ಪ್ರದೇಶ ತೊಗರಿ ನಷ್ಟವಾಗಿದೆ. ಸರಕಾರಕ್ಕೆ ತೊಗರಿ ವರದಿ ಸಲ್ಲಿಸಲಾಗಿದೆ. –ಆಕಾಶ ದಾನಿ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಮುದಗಲ್ಲ
1ಎಕರೆಗೆ 6 ರಿಂದ 7ಕ್ವಿಂಟಲ್ ತೊಗರಿ ಇಳುವರಿ ಬರಬೇಕಿತ್ತು. ಆದರೆ 3ರಿಂದ 4 ಕ್ವಿಂಟಲ್ ಬರುತ್ತಿದೆ. ಸರಕಾರ ಎಕರೆಗೆ 10 ಸಾವಿರ ರೂ.ಬೆಳೆ ಪರಿಹಾರ ನೀಡಬೇಕು. –ಶಂಕ್ರಪ್ಪ ನಾಯ್ಕ, ನಷ್ಟ ಅನುಭವಿಸಿದ ರೈತ
ಸುಮಾರು 7 ಸಾವಿರ ಎಕರೆ ತೊಗರಿ ಕಟಾವು ಮಾಡಿದ್ದೇನೆ. ರೈತರಿಗೆ ಇಳುವರಿ ಕಡಿಮೆಯಾಗಿದೆ. –ಪರಶುರಾಮ, ಯಂತ್ರದ ಮಧ್ಯವರ್ತಿ
-ದೇವಪ್ಪ ರಾಠೊಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.