ಹೊಸ ವರ್ಷಕ್ಕೆ ಅಮೇಜಾನ್ ಪ್ರೈಮ್ ನಲ್ಲಿ ವಿಕ್ಕಿ-ಕತ್ರಿನಾ ಮದುವೆ ವಿಡಿಯೋ?
Team Udayavani, Dec 10, 2021, 11:26 AM IST
ಬಾಲಿವುಡ್ ಸ್ಟಾರ್ ಗಳಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ವಿವಾಹ ಸಮಾರಂಭವು ಗುರುವಾರ ರಾಜಸ್ಥಾನದಲ್ಲಿ ನಡೆದಿದೆ.
ರಾಜಸ್ಥಾನದ ಸಿಕ್ಸ್ ಸೆನ್ಸಸ್ ಕೋಟೆಯಲ್ಲಿ ಅದ್ಧೂರಿ ಮದುವೆ ಕಾರ್ಯಕ್ರಮ ಜರುಗಿದೆ. ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ನೆರವೇರಿದೆ. ಸಂಗೀತ ಕಾರ್ಯಕ್ರಮ, ಮೆಹಂದಿ ಕಾರ್ಯಕ್ರಮ ಎಲ್ಲ ಸೇರಿ ಒಟ್ಟು ಮೂರು ದಿನಗಳ ಕಾಲ ಕೋಟೆಯಲ್ಲಿ ವಿಜೃಂಭಣೆ ಯಾಗಿ ಮದುವೆಯನ್ನು ನೆರವೇರಿಸಲಾಗಿದೆ.
ಮದುವೆ ಮುಹೂರ್ತಕ್ಕೆ ಕತ್ರಿನಾ ಕೈಫ್ ಕಡು ಕೆಂಪು ಬಣ್ಣದ ಲೆಹಂಗಾ ಧರಿಸಿ ಕಂಗೊಳಿಸಿದ್ದರೆ, ವಿಕ್ಕಿ ಕೌಶಲ್ ಪಂಜಾಬಿ ಶೈಲಿಯ ಶೆರ್ವಾನಿ ತೊಟ್ಟಿದ್ದರು.
ಇದನ್ನೂ ಓದಿ:‘ಆತ ತಲೆಕೆಡಿಸಿಕೊಳ್ಳಲ್ಲ..’ ರೋಹಿತ್ ನಾಯಕತ್ವದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಶಾಸ್ತ್ರಿ
ಈ ಮದುವೆಯಲ್ಲಿ ಕುತೂಹಲಕ್ಕೆ ಕಾರಣವಾದ ಮತ್ತೊಂದು ಅಂಶವೆಂದರೆ ಮದುವೆ ವಿಡಿಯೋ ಒಟಿಟಿ ವೇದಿಕೆಯಾದ ಅಮೇಜಾನ್ ಪ್ರೈಮ್ ಗೆ ಮಾರಾಟವಾಗಿದೆ ಎಂಬ ಸುದ್ದಿ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ವಿವಾಹ ಸಮಾರಂಭದ ವಿಡಿಯೋವನ್ನು ಅಮೇಜಾನ್ ಪ್ರೈಮ್ ಸುಮಾರು 80 ಕೋಟಿ ರೂ. ಬೆಲೆಗೆ ಖರೀದಿಸಿದೆ ಎಂದು ವರದಿಯಾಗಿದೆ. ಅಂದಹಾಗೆ ಹೊಸ ವರ್ಷದ ಸಮಯದಲ್ಲಿ ಈ ವಿಡಿಯೋ ಅಮೇಜಾನ್ ಪ್ರೈಮ್ ನಲ್ಲಿ ಪ್ರಸಾರವಾಗುತ್ತದೆ ಎನ್ನಲಾಗಿದೆ.
OMAGGSGS AND JUST LIKE THAT, ALMOST 3 YEARS LATER, WE HAVE THEIR FIRST OFFICIAL PICTURE TOGETHER ❤♾?✨
#KatrinaVickyKiShaadi pic.twitter.com/9g7kQZHnlw
— ? (@Aesthet1callyFM) December 9, 2021
ದೊಡ್ಡ ಸ್ಟಾರ್ ಗಳ ವಿವಾದ ವಿಡಿಯೋಗಳು ಓಟಿಟಿಯಲ್ಲಿ ಪ್ರಸಾರವಾಗುವುದು ಭಾರತದಲ್ಲಿ ಇದೇ ಮೊದಲು. ಆದರೆ ಇದು ಪಾಶ್ಚಿಮಾತ್ಯ ದೇಶಗಳಲ್ಲಿ ಈಗಾಗಲೇ ಇಂತಹ ಸಂಸ್ಕೃತಿ ಬೆಳೆದಿದೆ.
ಕುತೂಹಲಕಾರಿ ವಿಚಾರವೆಂದರೆ ಪ್ರಿಯಾಂಕಾ ಚೋಪ್ರಾ- ನಿಕ್ ಜೋನಸ್ ಮತ್ತು ದೀಪಿಕಾ ಪಡುಕೋಣೆ – ರಣವೀರ್ ಸಿಂಗ್ ಅವರ ವಿವಾಹದ ವಿಡಿಯೋಗಳನ್ನು ಕೂಡಾ ಒಟಿಟಿ ಪ್ಲಾಟ್‌ಫಾರ್ಮ್‌ಗಳು ದೈತ್ಯ ಮೊತ್ತಕ್ಕೆ ಬಯಸಿದ್ದವು. ಆದರೆ ದೀಪಿಕಾ-ರಣವೀರ್ ಈ ಆಫರ್ ನ್ನು ನಿರಾಕರಿಸಿದ್ದರು. ಆದರೆ, ಪ್ರಿಯಾಂಕಾ-ನಿಕ್ ಒಪ್ಪಂದಕ್ಕೆ ಸಹಿ ಹಾಕಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.