ಮಹಿಳೆಯರು ಆರ್ಥಿಕ ಸಬಲರಾಗಲಿ: ಪಾಟೀಲ
Team Udayavani, Dec 10, 2021, 3:37 PM IST
ನಾಲತವಾಡ: ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಮಹಿಳೆಯರು ಸಬಲರಾಗಬೇಕಾದರೆ ನಾವು ಸಹಕಾರಿ ರಂಗದಲ್ಲಿ ಮೇಲೆ ಬರಬೇಕಾಗುತ್ತದೆ ಎಂದು ಶ್ರೀ ಶಿವಶರಣೆ ಗುರುದೇವಿ ಮಹಿಳಾ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷೆ ದಾಕ್ಷಾಯಿಣಿ ಉಮೇಶ ಪಾಟೀಲ ಹೇಳಿದರು.
ಸ್ಥಳೀಯ ಅಮರೇಶ್ವರ ಶಾಲೆಯಲ್ಲಿ ಇತ್ತಿಚೆಗೆ ನಡೆದ 3ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, 2018ರಲ್ಲಿ ಕೇವಲ 205 ಸದಸ್ಯರು, 6.25 ಶೇರಿನೊಂದಿಗೆ ಪ್ರಾರಂಭವಾದ ಸಂಘ ಇಂದು 463 ಸದಸ್ಯರನ್ನು ಹೊಂದಿ 14.94 ಲಕ್ಷ ಶೇರು ಸಂಗ್ರಹಿಸಿ 200.10 ಲಕ್ಷಗಳು ಠೇವಣಿ ಹಾಗೂ 2.20 ಲಕ್ಷ ನಿಧಿಗಳನ್ನು ಕೂಡಿಸಿ ಬಡ ಮಹಿಳೆಯರಿಗೆ 100.40 ಲಕ್ಷಗಳನ್ನು ಸಾಲ ನೀಡುವುದರೊಂದಿಗೆ ಸಂಘ ಅಭಿವೃದ್ಧಿಪತದಲ್ಲಿ ಸಾಗಿದೆ. ಪ್ರಸ್ತುತ ವರ್ಷದಲ್ಲಿ ಸಂಘ ರೂಪಾಯಿ ಲಾಭಗಳಿಸಿದೆ ಎಂದು ಹೇಳಿದರು.
ಮಹಿಳೆಯರ ಅನುಕೂಲಕ್ಕಾಗಿ ಸಂಘ ಪ್ರಾರಂಭಿಸಿದ್ದೇವೆ. ಮಹಿಳೆಯರಿಗೆ ಆರ್ಥಿಕವಾಗಿ ಸಬಲರಾಗಿಸಲು ನಾವು ಅವರಿಗೆ ನಮ್ಮ ಸಂಘದಿಂದ ಸಾಲ ನೀಡಿ ಸಮಾಜದಲ್ಲಿ ಮಹಿಳೆ ಕೂಡ ತಲೆ ಎತ್ತುವ ರೀತಿ ಪ್ರಯತ್ನ ಮಾಡುತ್ತಿದ್ದೇವೆ. ಸಂಘದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಠೇವು ತೊಡಗಿಸಬೇಕು ಇದರಿಂದ ಮಹಿಳೆಯರಿಗೆ ಆರ್ಥಿಕವಾಗಿ ಅಭಿವೃದ್ಧಿಗೊಳಿಸಲು ಸಾಕಾರವಾಗುತ್ತದೆ ಎಂದರು.
ಸಂಘದ ಉಪಾಧ್ಯಕ್ಷೆ ನಾಗರತ್ನ ಬಾಗೇವಾಡಿ, ನಿರ್ದೇಶಕರಾದ ವೀಣಾ ಹಾವರಗಿ, ಚಿನ್ನಮ್ಮ ಗಂಗನಗೌಡ್ರ, ಭಾಗಿರಥಿ ಗಂಗನಗೌಡ್ರ, ಗುರುದೇವಿ ಗಂಗನಗೌಡ್ರ, ಚನ್ನಮ್ಮ ವಡಗೇರಿ, ಪ್ರಭಾವತಿ ಮಾಲಿಪಾಟೀಲ, ವಾಣಿಶ್ರೀ ಪೇಟಕರ, ಚಂದ್ರಕಲಾ ಬಡಿಗೇರ, ಶಶಿಕಲಾ ಕುಪ್ಪಸ್ತ, ರೇಣುಕಾ ನಾಯ್ಕರ, ರೇಖಾ ಭೋವಿ, ಮ್ಯಾನೇಜರ್ ಮಂಜುಳಾ ಅಂಬೂರೆ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.