‘ಶತಭಿಷ’ ಜನವರಿಯಲ್ಲಿ ತೆರೆಗೆ
Team Udayavani, Dec 10, 2021, 3:58 PM IST
ಹೊಸಬರೇ ಸೇರಿ ಮಾಡಿರುವ “ಶತಭಿಷ’ ಚಿತ್ರ ಈಗ ಸದ್ದಿಲ್ಲದೇ ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಚಿತ್ರದ ಟೀಸರ್ ಹಾಗೂ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಚಿತ್ರವನ್ನು ವೆಂಕಟೇಶ್ ನಿರ್ದೇಶಿಸಿದ್ದಾರೆ.
ಈಗಾಗಲೇ ತಮಿಳಿನ ಕೆಲವು ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿರುವ ವೆಂಕಟೇಶ್ ಈಗ “ಶತಭಿಷ’ ಮೂಲಕ ನಿರ್ದೇಶರಾಗಿದ್ದಾರೆ. ದೀಪು ಅರ್ಜುನ್ ಮತ್ತು ಶೋಭಿತಾ ಶಿವಣ್ಣ ಚಿತ್ರದಲ್ಲಿ ನಾಯಕ- ನಾಯಕಿಯರಾಗಿ ನಟಿಸಿದ್ದಾರೆ. ಕಾಣಿಸಿಕೊಂಡಿದ್ದಾರೆ. ಅಂದುಕೊಂಡಂತೆ ಆದರೆ ಹೊಸ ವರ್ಷದ ಆರಂಭದಲ್ಲಿ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ವೆಂಕಟೇಶ್, ನಾಲ್ವರು ಪೋಲಿ ಹುಡುಗರ ಕಥೆಯಿದು. ಭಯೋತ್ಪಾದಕರಿಗೆ ಬೆಂಬಲ ನೀಡಲು ಹೋಗಿ ಪೊಲೀಸ್ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾರೆ, ನಂತರ ಅವರು ಹೊರ ಬರ್ತಾರಾ ಇಲ್ವಾ ಎನ್ನುವುದು ಚಿತ್ರದ ತಿರುಳು. ಚಿತ್ರದಲ್ಲಿ 3 ಹಾಡು ಹಾಗೂ 4 ಫೈಟ್ಗಳಿದ್ದು, ಅಭಿಷೇಕ್ ರಾಯ್ ಸಂಗೀತ, ಸೆಲ್ವರಾಜ್ ಛಾಯಾಗ್ರಹಣ ಚಿತ್ರಕ್ಕಿದೆ ಎಂದರು.
ನಿರ್ಮಾಪಕ ಕಾಶಿ ಶೇಖರ್ ಮಾತನಾಡಿ, ಚಿತ್ರ ಚೆನ್ನಾಗಿ ಮೂಡಿಬಂದಿದೆ, ಕುಟುಂಬ ಸಮೇತ ನೋಡುವಂಥ ಒಳ್ಳೆಯ ಕಥೆ ಸಿನಿಮಾದಲ್ಲಿದೆ ಎಂದು ಹೇಳಿದರು. ಚಿತ್ರದಲ್ಲಿ ಅವರು ಪೊಲೀಸ್ ಅಧಿಕಾರಿಯಾಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಾಯಕ ದೀಪು ಅರ್ಜುನ್ ಕೂಡಾ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಉಳಿದಂತೆ ಚಿತ್ರದಲ್ಲಿ ಟೆನ್ನಿಸ್ ಕೃಷ್ಣ, ಅಪ್ಪಣ್ಣ, ಮೂಗು ಸುರೇಶ್, ಕುರಿ ಸುನೀಲ್ ನಟಿಸಿದ್ದಾರೆ. ವಿರಾಜಪೇಟೆ, ಮೇಲುಕೋಟೆ, ಹುಬ್ಬಳ್ಳಿ, ಮುಂಬೈ,ಗುಲ್ಬರ್ಗಾ, ಬೆಂಗಳೂರು, ಚಿಂತಾಮಣಿ ಅಲ್ಲದೆ ತಮಿಳುನಾಡು ಸೇರಿ ಸಾಕಷ್ಟು ಲೊಕೇಶನ್ ಗಳಲ್ಲಿ ಈ ಚಿತ್ರಕ್ಕೆ ಚಿತ್ರೀಕರಣ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.