ದುರ್ಗಾದೇವಿ-ಮೃತ್ಯುಂಜಯ ಮೂರ್ತಿ ವಿಸರ್ಜನೆ
ಮಹಾಮೃತ್ಯುಂಜಯದಿಂದ 1ಕೋಟಿ ಜಪಗಳನ್ನು ಭಕ್ತರಿಂದ ಮಾಡಿಸಲಾಗಿತ್ತು.
Team Udayavani, Dec 10, 2021, 6:14 PM IST
ರಾಣಿಬೆನ್ನೂರ: ನಗರ ಹೊರವಲಯದ ಲ್ಲಿರುವ ಹಿರೇಮಠದ ಶನೇಶ್ವರ ಸ್ವಾಮಿ ಮಂದಿರದ 9ನೇ ವಾರ್ಷಿಕೋತ್ಸವ, ಲೋಕ ಕಲ್ಯಾಣಾರ್ಥ ಹಾಗೂ ಪ್ರದೇಶಾ ಭಿವೃದ್ಧಿಗಾಗಿ 384 ದಿನಗಳ ಕಾಲ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಪೂಜೆಗೊಂಡ ದುರ್ಗಾದೇವಿ ಮತ್ತು ಮೃತ್ಯುಂಜಯರ ಮಣ್ಣಿನ ಮೂರ್ತಿಗಳನ್ನು ಮೆರವಣಿ ಗೆಯಲ್ಲಿ ಕೊಂಡೊಯ್ದು ಕುದರಿಹಾಳ ಬಳಿಯ ತುಂಗಭದ್ರ ನದಿಯಲ್ಲಿ ವಿಸರ್ಜಿಸಲಾಯಿತು.
ಬುಧವಾರ ರಾತ್ರಿ ಸಕಲ ವಾದ್ಯಮೇಳ, ಭಜನೆಯೊಂದಿಗೆ ಮೆರವಣಿಗೆ ಮೂಲಕ ಕೊಂಡೊಯ್ದು ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು. ಶನೇಶ್ವರ ಮಂದಿರದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ದುರ್ಗಾ ಮೂರ್ತಿ ಯಿಂದ ಒಟ್ಟು 6ಲಕ್ಷ ಜಪ, ಮೃತ್ಯುಂಜಯ ಮೂರ್ತಿಯಿಂದ 16ಲಕ್ಷ ಮಂತ್ರ, ಮಹಾಮೃತ್ಯುಂಜಯದಿಂದ 1ಕೋಟಿ ಜಪಗಳನ್ನು ಭಕ್ತರಿಂದ ಮಾಡಿಸಲಾಗಿತ್ತು.
ಮೂರ್ತಿಗಳ ವಿಸರ್ಜನೆಗೂ ಮೊದಲು ಎರಡೂ ಮೂರ್ತಿಗಳಿಗೆ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಈ ವೇಳೆ ಮಾತನಾಡಿದ ಮಂದಿರದ ಶಿವಯೋಗಿ ಶಿವಚಾರ್ಯ ಮಹಾಸ್ವಾಮಿಗಳು, ಕಳೆದ 393 ದಿನಗಳಿಂದ ಪ್ರತಿದಿನ ನಡೆಯುತ್ತಿದ್ದ ಮೂರ್ತಿಗಳ ಪೂಜೆ ಇಂದಿಗೆ ಕೊನೆಗೊಂಡಿದ್ದು ಮನಸ್ಸಿಗೆ ನೋವಾಗಿದೆ. ಆದರೂ ಪ್ರತಿಷ್ಠಾಪನೆ ಸಂದರ್ಭದಲ್ಲಿ ಈ ಮೂತಿಗಳನ್ನು ಹೇಗೆ ಸ್ವಾಗತಿಸಲಾಗಿತ್ತೋ ಹಾಗೆಯೇ ಇದೀಗ ಅಂತಿಮ ವಿ ವಿಧಾನಗಳನ್ನು ನೆರವೇರಿಸಿ ವಿಸರ್ಜನೆ ಮಾಡುವುದು ಅನಿವಾರ್ಯ ವಾಗಿದೆ ಎಂದು ತಿಳಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ಎಸ್‌ಎಸ್ ರಾಮಲಿಂಗಣ್ಣನವರ, ಬಸವರಾಜ ಸವಣೂರ, ರವೀಂದ್ರಗೌಡ ಪಾಟೀಲ, ಸಿದ್ದಪ್ಪ ಚಿಕ್ಕಬಿದರಿ, ಡಿಳ್ಳೆಪ್ಪ ಸತ್ಯಪ್ಪನವರನ ಸೇರಿದಂತೆ ಸಮಿತಿಯ ಸದಸ್ಯರುಗಳು, ಶಾಸ್ರಿ¤ಗಳು, ಪಾಠಶಾಲೆ ವಟುಗಳು, ಮಹಿಳೆಯರು ಭಕ್ತರು ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
By Polls: ನಾನು ಉಳಿಯಬೇಕಾದರೆ ಶಿಗ್ಗಾವಿಯಲ್ಲಿ ಪಠಾಣ ಗೆಲ್ಲಬೇಕು: ಸಿಎಂ ಸಿದ್ದರಾಮಯ್ಯ
ಗತ್ತಿನೊಂದಿಗೆ ಅಖಾಡಕ್ಕಿಳಿದ ರಾಕ್‌ಸ್ಟಾರ್, ಜನನಾಯಕ, ಘಟಸರ್ಪ; ದಿಕ್ಕೆಟ್ಟು ಓಡಿದ ಹೋರಿ..
Waqf Issue: ವಕ್ಫ್ ಭೀತಿಯಿಂದ ಕಡಕೋಳದಲ್ಲಿ ಕಲ್ಲು ತೂರಾಟ: 32 ಮಂದಿ ವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.