ವಿದೇಶಗಳ ಪರ ಭಾರತೀಯ ಕ್ರಿಕೆಟಿಗರ ಮೆರೆದಾಟ

ಪ್ರಸ್ತುತ ಆಡುತ್ತಿರುವ ಆಟಗಾರರು

Team Udayavani, Dec 11, 2021, 7:10 AM IST

ವಿದೇಶಗಳ ಪರ ಭಾರತೀಯ ಕ್ರಿಕೆಟಿಗರ ಮೆರೆದಾಟ

1983ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ಗೆದ್ದ ನಂತರ ದೇಶದಲ್ಲಿ ಇದ್ದಕ್ಕಿದ್ದಂತೆ ಕ್ರಿಕೆಟ್‌ ಪ್ರೀತಿ ತೀವ್ರವಾಯಿತು. ಭಾರತದಲ್ಲಿ ತಾನೇತಾನಾಗಿ ಕ್ರಿಕೆಟ್‌ ಪ್ರೀತಿ ಅಧಿಕವಿದೆಯೋ ಭಾರತೀಯರ ರಕ್ತದಲ್ಲೇ ಅದು ಸೇರಿಕೊಂಡಿದೆಯೋ ಗೊತ್ತಿಲ್ಲ. ಆದರೆ ವಿಶ್ವದ ಬಹುತೇಕ ದೇಶಗಳಲ್ಲಿ ಭಾರತೀಯ ಮೂಲದವರು ಆಡಿ ವಿಶ್ವವಿಖ್ಯಾತರೆನಿಸಿಕೊಂಡಿದ್ದಾರೆ. ಈಗಲೂ ಆಡುತ್ತಿದ್ದಾರೆ. ಆ ಕುರಿತ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ರಚಿನ್‌ ರವೀಂದ್ರ: ನ್ಯೂಜಿಲ್ಯಾಂಡ್‌
ನ್ಯೂಜಿಲ್ಯಾಂಡ್‌ ಆಲ್‌ರೌಂಡರ್‌ ರಚಿನ್‌ ರವೀಂದ್ರ ಈಗ ಭಾರತದಲ್ಲೂ ಬಹಳ ಜನಪ್ರಿಯ. ಕೇವಲ 21 ವರ್ಷದ ಈ ಆಟಗಾರ ಬೆಂಗಳೂರು ಮೂಲದವರು. ಮಾತ್ರವಲ್ಲ ಐದು ವರ್ಷ ಆಂಧ್ರಪ್ರದೇಶದಲ್ಲಿ ಸತತವಾಗಿ ತರಬೇತಿ ಪಡೆದಿದ್ದಾರೆ. ಇವರ ತಂದೆ ರವಿ ಕೃಷ್ಣಮೂರ್ತಿ ಸಾಫ್ಟ್ವೇರ್‌ ಎಂಜಿನಿಯರ್‌, 90ರ ದಶಕದಲ್ಲಿ ನ್ಯೂಜಿಲ್ಯಾಂಡ್‌ಗೆ ತೆರಳಿದರು. ಅಲ್ಲವರು ಹಟ್‌ ಹಾಕ್ಸ್‌ ಕ್ಲಬ್‌ ಆರಂಭಿಸಿದರು. ತಾಯಿ ದೀಪಾ ಕೃಷ್ಣಮೂರ್ತಿ. ರಚಿನ್‌ ತಂದೆ ಸಚಿನ್‌ ತೆಂಡುಲ್ಕರ್‌ ಮತ್ತು ರಾಹುಲ್‌ ದ್ರಾವಿಡ್‌ ಅಭಿಮಾನಿ. ಹಾಗಾಗಿ ಮಗನಿಗೆ ರಚಿನ್‌ ಎಂದೇ ಹೆಸರಿಟ್ಟರು. ಇದೇ ಆಟಗಾರ ಕಾನ್ಪುರದಲ್ಲಿ ಭಾರತ ವಿರುದ್ಧ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕಡೆಯವರೆಗೂ ಬ್ಯಾಟ್‌ ಮಾಡಿ ನ್ಯೂಜಿಲ್ಯಾಂಡ್‌ ಸೋಲನ್ನು ತಪ್ಪಿಸಿದರು.

ಐಶ್‌ ಸೋಧಿ: ನ್ಯೂಜಿಲ್ಯಾಂಡ್‌
29 ವರ್ಷದ ಲೆಗ್‌ಸ್ಪಿನ್ನರ್‌ ಐಶ್‌ ಸೋಧಿಯ ಪೂರ್ಣ ಹೆಸರು ಇಂದರ್‌ಬೀರ್‌ ಸಿಂಗ್‌ ಸೋಧಿ. ಹುಟ್ಟಿದ್ದು ಪಂಜಾಬ್‌ನ ಲೂಧಿಯಾನದಲ್ಲಿ. ಕೇವಲ 4 ವರ್ಷದ ವರಿದ್ದಾಗ ಅವರ ಕುಟುಂಬ ನ್ಯೂಜಿಲ್ಯಾಂಡ್‌ಗೆ ಸ್ಥಳಾಂತ ರ ವಾ ಯಿತು. ಅಲ್ಲಿಯೇ ಕ್ರಿಕೆಟ್‌ ಆಡಲು ಆರಂಭಿಸಿದರು. 2013ರಲ್ಲಿ ಬಾಂಗ್ಲಾದೇಶದ ವಿರುದ್ಧ ಟೆಸ್ಟ್‌ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ ಪ್ರವೇಶಿಸಿದರು. ಇವರು ನ್ಯೂಜಿಲ್ಯಾಂಡ್‌ನ‌ ಪಪಾಟೊಟೊ ಎಂಬ ಪ್ರೌಢ ಶಾಲೆಯಲ್ಲಿ ಅಭ್ಯಾಸ ಮಾಡಿದರು. ಇಲ್ಲಿ ಕ್ರಿಕೆಟ್‌ಗೆ ಪ್ರೋತ್ಸಾಹ ವಿರಲಿಲ್ಲ, ಹಾಗೆಯೇ ಆಕ್ಲೆಂಡ್‌ನ‌ಲ್ಲಿ ಸ್ಪಿನ್‌ ಸ್ನೇಹಿ ಪಿಚ್‌ಗಳೇ ಕಡಿಮೆ. ಇವೆಲ್ಲ ಅವರ ಕ್ರಿಕೆಟ್‌ ಬೆಳವಣಿಗೆಗೆ ಅಡ್ಡಿಯಾದವು. ಇಷ್ಟಾದರೂ ಅವರು ನ್ಯೂಜಿಲ್ಯಾಂಡ್‌ನ‌ ಪ್ರಮುಖ ಸ್ಪಿನ್ನರ್‌ಗಳಲ್ಲೊಬ್ಬರೆಂದು ಹೆಸರು ಮಾಡಿದ್ದಾರೆ.

ಅಜಾಜ್‌ ಪಟೇಲ್‌: ನ್ಯೂಜಿಲ್ಯಾಂಡ್‌
ಇತ್ತೀಚೆಗೆ ಡಿ.4ರಂದು ಮುಂಬಯಿಯಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಆಫ್ಸ್ಪಿನ್ನರ್‌ ಅಜಾಜ್‌ ಪಟೇಲ್‌ ವಿಶ್ವವಿಖ್ಯಾತರಾದರು. ಕಾರಣ ಸ್ಪಿನ್‌ಗೆ ಅತ್ಯುತ್ತಮವಾಗಿ ಆಡುವ ಭಾರತದ ವಿರುದ್ಧವೇ ಅವರು ಇನಿಂಗ್ಸ್‌ ವೊಂದರಲ್ಲಿ ಎಲ್ಲ 10 ವಿಕೆಟ್‌ ಪಡೆದದ್ದು. ಈ ಹಿಂದೆ ಜಿಮ್‌ ಲೇಕರ್‌, ಅನಿಲ್‌ ಕುಂಬ್ಳೆ ಈ ಸಾಧನೆ ಮಾಡಿದ್ದರು. ಆದರೆ ಭಾರತದ ವಿರುದ್ಧ 10 ವಿಕೆಟ್‌ ಕಿತ್ತ ಅಜಾಜ್‌ರದ್ದು ನಿಜಕ್ಕೂ ಮಹಾನ್‌ ಸಾಧನೆ. ಇವರು ಭಾರತೀಯ ಮೂಲದ ಆಟಗಾರ. 1988ರಲ್ಲಿ ಮುಂಬಯಿಯಲ್ಲಿ ಜನಿಸಿದರು. ಇವರ ತಂದೆ-ತಾಯಿ ಗುಜರಾತ್‌ನ ಭರೂಚ್‌ ಜಿಲ್ಲೆಯ ತಂಕರಿಯ ಎಂಬ ಹಳ್ಳಿಯವರು. 1996ರಲ್ಲಿ ಅವರ ಕುಟುಂಬ ನ್ಯೂಜಿಲ್ಯಾಂಡ್‌ಗೆ ಸ್ಥಳಾಂತರವಾಯಿತು.

ರವಿ ರಾಂಪಾಲ್‌: ವೆಸ್ಟ್‌ ಇಂಡೀಸ್‌
ವೆಸ್ಟ್‌ ಇಂಡೀಸ್‌ ತಂಡದ ಖ್ಯಾತ ವೇಗದ ಬೌಲರ್‌ ರವಿ ರಾಂಪಾಲ್‌. ಇವರ ಪೂರ್ವಜರು ಉದ್ಯೋಗವನ್ನು ಹುಡುಕಿಕೊಂಡು ಕೆರಿಬಿಯನ್‌ ದ್ವೀಪಗಳಿಗೆ ವಲಸೆ ಹೋದರು. ರವಿ ಹುಟ್ಟಿದ್ದು ಟ್ರಿನಿಡಾಡ್‌ ಆ್ಯಂಡ್‌ ಟೊಬ್ಯಾಗೊ ದ್ವೀಪದಲ್ಲಿ. ಅಜ್ಜ ಸೀಚರಣ್‌ ಭಜನ್‌ ಹೆಸರಿನಲ್ಲಿ ರವಿ ಒಂದು ಕ್ರಿಕೆಟ್‌ ಕ್ಲಿನಿಕ್‌ ಕೂಡ ನಡೆಸುತ್ತಿದ್ದಾರೆ. 2011ರ ವಿಶ್ವಕಪ್‌ನಲ್ಲಿ ಇವರು ಭಾರತದ ವಿರುದ್ಧವೇ 5 ವಿಕೆಟ್‌ ಕಿತ್ತು ಮಿಂಚಿದ್ದರು. ಮೊನ್ನೆ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ಗಾಗಿ 6 ವರ್ಷಗಳ ಅನಂತರ ಮತ್ತೆ ವಿಂಡೀಸ್‌ ತಂಡಕ್ಕೆ ಮರಳಿದರು. ಪ್ರತಿಭಾವಂತ ವೇಗಿಯಾಗಿದ್ದರೂ ಗಾಯದ ಕಾರಣ ನಿರೀಕ್ಷೆಗೆ ತಕ್ಕಂತೆ ಆಡಲು ಸಾಧ್ಯವಾಗಿಲ್ಲ.

ಕೇಶವ ಮಹಾರಾಜ್‌: ದ.ಆಫ್ರಿಕಾ
ಕೇಶವ ಮಹಾರಾಜ್‌ ಸದ್ಯ ದ.ಆಫ್ರಿಕಾ ತಂಡದ ಪ್ರಮುಖ ಸ್ಪಿನ್ನರ್‌. ತಂಡದ ಅವಿಭಾಜ್ಯ ಅಂಗ ಎನ್ನುವ ಮಟ್ಟಿಗೆ ಖ್ಯಾತರಾಗಿದ್ದಾರೆ. ಆರಂಭದಲ್ಲಿ ವೇಗದ ಬೌಲರ್‌ ಆಗಿದ್ದರೂ ದಿಢೀರನೆ ಸ್ಪಿನ್ನರ್‌ ಆಗಿ ಬದಲಾದರು. ತಂದೆ ಆತ್ಮಾನಂದ ಭಾರತೀಯ ಮೂಲದವರು, ವಿಕೆಟ್‌ ಕೀಪರ್‌ ಆಗಿ ದ.ಆಫ್ರಿಕಾದ ನಟಾಲ್‌ ಪ್ರಾಂತ್ಯದ ಪರ ಆಡಿದ್ದಾರೆ. ಆದರೆ ವರ್ಣಭೇದದ ಹಿನ್ನೆಲೆಯಲ್ಲಿ ಅಲ್ಲಿನ ಟೆಸ್ಟ್‌ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಈ ಆಸೆಯನ್ನು ಮಗ ಕೇಶವ ಮಹಾರಾಜ್‌ ಪೂರೈಸಿದರು. ಸದ್ಯ 31 ವರ್ಷದ ಮಹಾರಾಜ್‌ ಡರ್ಬಾನ್‌ನಲ್ಲಿ ಹುಟ್ಟಿದರು. 2016ರಲ್ಲಿ ಆಸ್ಟ್ರೇಲಿಯ ವಿರುದ್ಧ ಟೆಸ್ಟ್‌ ಆಡಿ ಅಂತಾ ರಾಷ್ಟ್ರೀಯ ಕ್ರಿಕೆಟ್‌ ಪ್ರವೇಶಿಸಿದರು. ಬರೀ 36 ಟೆಸ್ಟ್‌ ಪಂದ್ಯ ಗಳಿಂದ 129 ವಿಕೆಟ್‌ ಕಿತ್ತಿದ್ದಾರೆ.

ಹಳೆಯ ತಾರೆಯರು
ಸದ್ಯ ವಿಶ್ವ ಕ್ರಿಕೆಟ್‌ನಿಂದ ವಿರಮಿಸಿದ್ದರೂ, ತಮ್ಮ ಅತ್ಯದ್ಭುತ ಆಟದಿಂದ ಭಾರತೀಯ ಮೂಲದ ಹಲವರು ಈಗಲೂ ಜನರ ನೆನಪಿನಿಂದ ಮಾಸಿಲ್ಲ. ಅಂತಹ ನಾಲ್ಕು ಆಟಗಾರರ ಪರಿಚಯ ಇಲ್ಲಿದೆ.

ಮುತ್ತಯ್ಯ ಮುರಳೀಧರನ್‌: ಶ್ರೀಲಂಕಾ
ಶ್ರೀಲಂಕಾದ ಬಲಗೈ ಆಫ್ಸ್ಪಿನ್ನರ್‌ ಆಗಿ ಮುತ್ತಯ್ಯ ಮುರಳೀಧರನ್‌ ಮಾಡಿದ ಮೋಡಿ ಅಂತಿಂಥದ್ದಲ್ಲ. ವಿಶ್ವ ಕ್ರಿಕೆಟ್‌ ಸದಾ ನೆನಪಿಟ್ಟುಕೊಳ್ಳಬೇಕಾದ ಆಟಗಾರರಲ್ಲಿ ಮುರಳೀಧರನ್‌ ಕೂಡ ಒಬ್ಬರು. ಮುರಳೀಧರನ್‌ ಅಜ್ಜ ಪೆರಿಯಸಾಮಿ ಸಿನಸಾಮಿ ತಮಿಳುನಾಡಿನಿಂದ ಶ್ರೀಲಂಕಾಕ್ಕೆ 1920ರಲ್ಲಿ ತೆರಳಿದರು. ದೀರ್ಘ‌ಕಾಲ ಅಲ್ಲಿದ್ದು ತಮಿಳುನಾಡಿನ ತಿರುಚಿರಾಪಳ್ಳಿಗೆ ಮರಳಿದರು. ಪುತ್ರ ಮುತ್ತಯ್ಯ ಲಂಕಾದ ಕ್ಯಾಂಡಿಯಲ್ಲೇ ಉಳಿದುಕೊಂಡರು. ಅವರಿಗೆ 1972ರಲ್ಲಿ ಜನಿಸಿದ್ದು ಮುರಳೀಧರನ್‌. ಇವರ ಪತ್ನಿ ಮಧಿಮಲರ್‌ ಕೂಡ ಚೆನ್ನೈಯವರು. ಅಲ್ಲದೇ ಮುರಳೀ ಬಳಿ ಭಾರತದ ಸಾಗರೋತ್ತರ ವೀಸಾ ಕೂಡ ಇದೆ. ಟೆಸ್ಟ್‌ ನಲ್ಲಿ ಪಡೆದ 800 ವಿಕೆಟ್‌ಗಳು ವಿಶ್ವದಾಖಲೆಯಾಗಿದೆ. ಹಾಗೆಯೇ ಏಕದಿನದಲ್ಲಿ 534 ವಿಕೆಟ್‌ ಕಿತ್ತು ಅಲ್ಲೂ ವಿಶ್ವದಾಖಲೆ ಹೊಂದಿದ್ದಾರೆ.

ನಾಸಿರ್‌ ಹುಸೇನ್‌:ಇಂಗ್ಲೆಂಡ್‌
ಇಂಗ್ಲೆಂಡ್‌ ತಂಡದ ನಾಯಕನಾಗಿ ನಾಸಿರ್‌ ಹುಸೇನ್‌ ಭಾರೀ ಗೌರವ ಗಳಿಸಿದರು. ಒಂದು ರೀತಿಯಲ್ಲಿ ನೋಡಿದರೆ ಆ ತಂಡದ ರೂಪ ಬದಲಿಸಿದ್ದೇ ಹುಸೇನ್‌. 1968ರಲ್ಲಿ ಇವರು ತಮಿಳುನಾಡಿನ ಚೆನ್ನೈಯಲ್ಲಿ ಜನಿಸಿದರು. ತಮ್ಮ 7ನೇ ವರ್ಷದಲ್ಲಿ ಕುಟುಂಬದೊಂದಿಗೆ ಇಂಗ್ಲೆಂಡ್‌ಗೆ ತೆರಳಿದರು. 1989ರಲ್ಲಿ ಪಾಕಿಸ್ಥಾನದ ವಿರುದ್ಧ ಏಕದಿನ ಆಡಿ ಅಂತಾರಾಷ್ಟ್ರೀಯ ಪ್ರವೇಶಿಸಿದರು. ರನ್‌ ಲೆಕ್ಕಾಚಾರದಲ್ಲಿ ಹುಸೇನ್‌ ಸಾಧನೆ ಹೇಳಿಕೊಳ್ಳುವಂಥದ್ದಲ್ಲ. ಆದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 9ನೇ ಸ್ಥಾನಕ್ಕೆ ಕುಸಿದಿದ್ದ ಇಂಗ್ಲೆಂಡನ್ನು ಹುಸೇನ್‌ ತಮ್ಮ ಅವಧಿಯಲ್ಲಿ 3ನೇ ಸ್ಥಾನಕ್ಕೇರಿಸಿದರು.

ಶಿವನಾರಾಯಣ್‌ ಚಂದರ್‌ಪಾಲ್‌: ವೆಸ್ಟ್‌ ಇಂಡೀಸ್‌
47 ವರ್ಷದ ಶಿವನಾರಾಯಣ್‌ ಚಂದರ್‌ಪಾಲ್‌ ಹುಟ್ಟಿದ್ದು ವೆಸ್ಟ್‌ ಇಂಡೀಸ್‌ನ ಗಯಾನದ ಈಸ್ಟ್‌ ಕೋಸ್ಟ್‌ನಲ್ಲಿ. ಇವರ ಪೂರ್ವಿಕರು 1800ರಲ್ಲಿ ಭಾರತವನ್ನು ತೊರೆದು ವಿಂಡೀಸ್‌ಗೆ ಕೆಲಸ ಹುಡುಕಿಕೊಂಡು ಹೋದರು. ಮುಖ್ಯವಾಗಿ ತಾಯಿ ಉಮಾ ಚಂದ್ರಪಾಲ್‌ ಮೂಲ ಬಿಹಾರ. ತಂದೆ ಕಾಮರಾಜ್‌ ಮಗನ ಕ್ರಿಕೆಟ್‌ ಬೆಳವಣಿಗೆಗೆ ಶ್ರಮಿಸಿದರು. ಚಂದರ್‌ಪಾಲ್‌ ದೀರ್ಘ‌ಕಾಲ ವಿಂಡೀಸ್‌ನ ಬ್ಯಾಟಿಂಗ್‌ ಆಧಾರಸ್ತಂಭವಾಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 19 ವರ್ಷ ಸಕ್ರಿಯರಾಗಿದ್ದರು. ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ಆಡಿ ಮಿಂಚಿದ್ದಾರೆ. ಟೆಸ್ಟ್‌ನಲ್ಲಿ 11,867, ಏಕದಿನದಲ್ಲಿ 8,778 ರನ್‌ ಬಾರಿಸಿದ್ದಾರೆ. ಒಟ್ಟು 41 ಶತಕ ಇವರ ಹೆಸರಿನಲ್ಲಿದೆ. ಕ್ರಿಕೆಟ್‌ನ ಮಾಮೂಲಿ ನಿಯಮಗಳಿಗೆ ಹೊರತಾಗಿ ಆಡಿ, ತಮ್ಮದೇ ಶೈಲಿಯಿಂದ ಮೆರೆದಿದ್ದಾರೆ.

ಹಾಶಿಮ್‌ ಆಮ್ಲ: ದ.ಆಫ್ರಿಕಾ
ದ.ಆಫ್ರಿಕಾದ ಬಲಗೈ ಬ್ಯಾಟ್ಸ್‌ಮ್ಯಾನ್‌ ಆಗಿ ವಿಶ್ವವಿಖ್ಯಾತರಾಗಿರುವ ಹಾಶಿಮ್‌ ಆಮ್ಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ಮೈಲುಗಲ್ಲುಗಳನ್ನು ಸಾಧಿಸಿದ್ದಾರೆ. ಟೆಸ್ಟ್‌ನಲ್ಲಿ 9,282, ಏಕದಿನದಲ್ಲಿ 8,113, ಟಿ20ಯಲ್ಲಿ 1,277 ರನ್‌ ಬಾರಿಸಿದ್ದಾರೆ. ದ.ಆಫ್ರಿಕಾ ಟೆಸ್ಟ್‌ ತಂಡಕ್ಕೆ ಪೂರ್ಣಪ್ರಮಾಣದ ನಾಯಕರಾದ ಮೊದಲ ಬಿಳಿಯೇತರ ಆಟಗಾರ ಇವರೇ! ಇವರ ಪೂರ್ವಜರು ಗುಜರಾತ್‌ನ ಸೂರತ್‌ನವರು. ಈಗಲೂ ಅಲ್ಲಿ ಇವರ ಆಸ್ತಿಯಿದೆ ಎಂದು ವರದಿಗಳಾಗಿವೆ. ಆದರೆ ಆಮ್ಲ ಒಮ್ಮೆಯೂ ಮೂಲನೆಲೆಗೆ ಭೇಟಿ ನೀಡಿಲ್ಲ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.