ನಾಯಕತ್ವ ವಿವಾದ ತಂಡದ ಮೇಲೆ ಪರಿಣಾಮ ಬೀರದಿರಲಿ
Team Udayavani, Dec 11, 2021, 6:00 AM IST
ಏಕದಿನ ಮತ್ತು ಟಿ20 ನಾಯಕರಾಗಿ ಆರಂಭಿಕ ಆಟಗಾರ ರೋಹಿತ್ ಶರ್ಮ ಅವರ ನೇಮಕ ಹಾಗೂ ಟೆಸ್ಟ್ ತಂಡಕ್ಕೆ ವಿರಾಟ್ ಕೊಹ್ಲಿ ಅವರನ್ನೇ ನಾಯಕರನ್ನಾಗಿ ಮುಂದುವರಿಸುವ ಬಗ್ಗೆ ಬಿಸಿಸಿಐ ನಿರ್ಧಾರ ತೆಗೆದುಕೊಂಡಿದ್ದು, ಈ ತೀರ್ಮಾನದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪಗಳು ಕೇಳಿಬಂದಿವೆ.
ಐಸಿಸಿ ಪ್ರಮುಖ ಟೂರ್ನಿಗಳನ್ನು ಗೆಲ್ಲದ ಒಂದು ಕೊರತೆಯನ್ನು ಬಿಟ್ಟರೆ ಏಕದಿನದಲ್ಲಿ ವಿರಾಟ್ ಕೊಹ್ಲಿ ಅವರ ಸಾಧನೆಯನ್ನು ಅಲ್ಲಗಳೆಯುವಂತಿರಲಿಲ್ಲ. ಅವರು 95 ಪಂದ್ಯಗಳಲ್ಲಿ 65ರಲ್ಲಿ ಗೆಲುವು ಸಾಧಿಸಿದ್ದಾರೆ. ಹಾಗೆಯೇ 19 ಸರಣಿಗಳಲ್ಲಿ 15ರಲ್ಲಿ ಗೆದ್ದು ಇಲ್ಲೂ ಉತ್ತಮವಾದ ಟ್ರ್ಯಾಕ್ ರೆಕಾರ್ಡ್ ಅನ್ನೇ ಹೊಂದಿದ್ದಾರೆ.
ಇನ್ನು ಟಿ20 ತಂಡದ ನಾಯಕತ್ವವನ್ನು ಕೊಹ್ಲಿ ಅವರೇ ತ್ಯಜಿಸುವುದಾಗಿ ಹೇಳಿದ್ದರು. ಅದರಂತೆ ಟಿ20 ವಿಶ್ವಕಪ್ ಮುಗಿದ ಬಳಿಕ ಆ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ. ಇವೆಲ್ಲ ಬೆಳವಣಿಗೆಗಳ
ನಡುವೆ ದಿಢೀರನೇ ಕೊಹ್ಲಿ ಅವರನ್ನು ಕೈಬಿಟ್ಟು, ರೋಹಿತ್ ಶರ್ಮ ಅವರಿಗೆ ನಾಯಕತ್ವ ವಹಿಸಿರುವುದು ಉತ್ತಮ ಬೆಳವಣಿಗೆಯಲ್ಲ. ಏಕೆಂದರೆ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮವಾದ ಸರಾಸರಿ ಹೊಂದಿರುವ ನಾಯಕನೊಬ್ಬನನ್ನು ಹೇಳದೇ ಕೇಳದೇ ತೆಗೆದುಹಾಕಿರುವ ಕುರಿತಂತೆ ಕ್ರಿಕೆಟ್ ಪ್ರೇಮಿಗಳು ಮತ್ತು ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೂ ಕಾರಣವಾಗಿದೆ. ಒಂದೋ ಕೊಹ್ಲಿ ಅವರೇ ಗೌರವಯುತವಾಗಿ ನಾಯಕತ್ವದಿಂದ ಕೆಳಗಿಳಿಯುವಂತೆ ಮನವೊಲಿಕೆ ಯನ್ನಾದರೂ ಮಾಡಬಹುದಿತ್ತು. ಇಲ್ಲವೇ ಇದಕ್ಕೆ ಕೊಂಚ ಸಮಯವನ್ನಾದರೂ ನೀಡಬಹುದಿತ್ತು.
ಸಾಮಾಜಿಕ ಜಾಲತಾಣಗಳು ಮತ್ತು ಸಾರ್ವಜನಿಕರ ಕಡೆಯಿಂದ ಅಸಮಾಧಾನ ವ್ಯಕ್ತವಾದ ಬಳಿಕ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟನೆಯನ್ನೂ ನೀಡಿದ್ದಾರೆ. ನಾವು ಟಿ20 ನಾಯಕತ್ವವನ್ನೇ ಬಿಡಬೇಡಿ ಎಂದು ಕೊಹ್ಲಿ ಅವರ ಮನವೊಲಿಕೆ ಮಾಡಿದ್ದೆವು. ಆದರೆ ಅವರು ಒಪ್ಪಲಿಲ್ಲ. ಈಗ ವೈಟ್‌ಬಾಲ್ ಕ್ರಿಕೆಟ್‌ನ ತಂಡಗಳಿಗೆ ಬೇರೆ ಬೇರೆ
ನಾಯಕರಿರುವುದು ಸರಿಯಲ್ಲ ಎಂಬ ಕಾರಣದಿಂದಾಗಿ ಟಿ20 ಜತೆಗೆ ಏಕದಿನ ತಂಡಕ್ಕೂ ರೋಹಿತ್ ಅವರನ್ನೇ ನಾಯಕರನ್ನಾಗಿ ನೇಮಿಸಲಾಗಿದೆ ಎಂದಿದ್ದಾರೆ.
ಇದು ಏನೇ ಇರಲಿ ಮುಂದಿನ ವಿಶ್ವಕಪ್ ದೃಷ್ಟಿಯಿಂದ ಅಥವಾ ತಂಡವನ್ನು ಇನ್ನಷ್ಟು ಬಲವಾಗಿ ಕಟ್ಟುವ ನಿಟ್ಟಿನಲ್ಲಿ ನಾಯಕತ್ವ ಬದಲಾವಣೆ ಮಾಡಿರಬಹುದು. ಜತೆಗೆ ರೋಹಿತ್ ಶರ್ಮ ಅವರು ಐಪಿಎಲ್‌ನಲ್ಲಿ ಮುಂಬಯಿ ತಂಡವನ್ನು ಮುನ್ನಡೆಸಿ ಉತ್ತಮವಾದ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಹೀಗಾಗಿ ಇವರ ನಾಯಕತ್ವದ ಬಗ್ಗೆ ಸಂಶಯವೂ ಇಲ್ಲ. ಆದರೆ ಎಲ್ಲೋ ಒಂದು ಕಡೆ, ತಂಡದಲ್ಲಿ ಕೊಹ್ಲಿ ಮತ್ತು ರೋಹಿತ್ ಬಣಗಳಾಗಿ ಫಲಿತಾಂಶದ ಮೇಲೆ ಪರಿಣಾಮ ಬೀರಬಾರದು ಎಂಬುದು ಕ್ರಿಕೆಟ್ ಪ್ರೇಮಿಗಳ ಆತಂಕ.
ಕ್ರಿಕೆಟ್‌ನಂಥ ಕ್ರೀಡೆಯಲ್ಲಿ ಒಬ್ಬರ ಪ್ರದರ್ಶನದ ಮೇಲೆ ಫಲಿತಾಂಶ ನಿಂತಿರುವುದಿಲ್ಲ. ಇಲ್ಲಿ ಇಡೀ ತಂಡವೇ ಸಾಂ ಕವಾಗಿ ಆಟವಾಡಬೇಕಾಗುತ್ತದೆ. ಕೊಹ್ಲಿ ಏಕೆ ಐಸಿಸಿ ಟ್ರೋಫಿ ಗೆಲ್ಲಲಿಲ್ಲ ಎಂಬುದಕ್ಕೆ ಈ ಸಾಂ ಕ ಆಟದ ಕೊರತೆಯೂ ಕಾರಣವಿರಬಹುದು. ಹೀಗಾಗಿ ತಂಡ ಸಮನ್ವಯತೆಯಿಂದ ಆಡಿದಾಗ ಮಾತ್ರ ಉತ್ತಮ ಫಲಿತಾಂಶ ಬರಲು ಸಾಧ್ಯ. ಇದನ್ನು ಬಿಸಿಸಿಐ ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.