ಎಮೋಶನ್‌ ಇಲ್ಲದೆ ನನಗೆ ಸಿನಿಮಾ ಮಾಡಲು ಬರುವುದಿಲ್ಲ: ರಾಜಮೌಳಿ

Team Udayavani, Dec 11, 2021, 12:05 PM IST

ಎಮೋಶನ್‌ ಇಲ್ಲದೆ ನನಗೆ ಸಿನಿಮಾ ಮಾಡಲು ಬರುವುದಿಲ್ಲ: ರಾಜಮೌಳಿ

ರಾಜಮೌಳಿ ನಿರ್ದೇಶನದ “ಆರ್‌ಆರ್‌ಆರ್‌’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ. ಚಿತ್ರ ಜನವರಿ 7 ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಡೀ ಚಿತ್ರತಂಡ ಪ್ರತಿ ರಾಜ್ಯಗಳಿಗೆ ಹೋಗಿ ಪ್ರಚಾರ ಮಾಡುತ್ತಿದೆ. ಶುಕ್ರವಾರ “ಆರ್‌ಆರ್‌ ಆರ್‌’ ತಂಡ ಪ್ರಚಾರದ ಸಲುವಾಗಿ ಬೆಂಗಳೂರಿಗೆ ಆಗಮಿಸಿತ್ತು. ನಿರ್ದೇಶಕ ರಾಜ್‌ಮೌಳಿ, ನಟರಾದ ಜೂ.ಎನ್‌ಟಿಆರ್‌, ರಾಮ್‌ಚರಣ್‌ ತೇಜಾ, ನಟಿ ಆಲಿಯಾ ಭಟ್‌ ಸಿನಿಮಾ ಕುರಿತಾಗಿ ತಮ್ಮ ಅನಿಸಿಕೆ ಹಂಚಿಕೊಂಡರು.

ನಿರ್ದೇಶಕ ರಾಜಮೌಳಿ ಈ ಬಾರಿ “ಆರ್‌ಆರ್‌ಆರ್‌’ ಚಿತ್ರವನ್ನು ಕನ್ನಡಕ್ಕೆ ಡಬ್‌ ಮಾಡಲು ಕಾರಣ, ಕಳೆದ ಬಾರಿ “ಬಾಹುಬಲಿ’ ಸಮಯದಲ್ಲಿ ಎದುರಾದ ಪ್ರಶ್ನೆಯಂತೆ. “ಬಾಹುಬಲಿ’ ಸಿನಿಮಾವನ್ನು ಕನ್ನಡ ಬಿಟ್ಟು ಬೇರೆ ಎಲ್ಲಾ ಭಾಷೆಗಳಿಗೆ ಡಬ್‌ ಮಾಡಿಯೇ ರಿಲೀಸ್‌ ಮಾಡಿದ್ದೆ. ಆಗ ಅನೇಕರು ಕನ್ನಡವನ್ನು ಯಾಕೆ ಕಡೆಗಣಿಸುತ್ತೀರಿ. ಕನ್ನಡಿಗರು ಅಂದ್ರೆ ಅಷ್ಟೊಂದು ತಾತ್ಸಾರನಾ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಈ ಬಾರಿ ಕನ್ನಡದಲ್ಲೇ ಡಬ್‌ ಮಾಡಿ ರಿಲೀಸ್‌ ಮಾಡುತ್ತಿದ್ದೇನೆ. ಯಾವುದೇ ಅಪಭ್ರಂಶವಾಗದಂತೆ ಎಚ್ಚರ ವಹಿಸಿ ಡಬ್‌ ಮಾಡಿದ್ದೇನೆ’ ಎಂದರು.

ಇನ್ನು, ಸಿನಿಮಾದ ಬಗ್ಗೆ ಮಾತನಾಡಿದ ರಾಜ್‌ಮೌಳಿ, “ನಾನು ಭಾವನೆಗಳನ್ನು ನಂಬಿ ಸಿನಿಮಾ ಮಾಡುವವನು. ನನಗೆ ಎಮೋಶನ್‌ ಇಲ್ಲದೇ ಸಿನಿಮಾ ಮಾಡಲು ಬರುವುದಿಲ್ಲ. ಚಿತ್ರದ ಪ್ರತಿ ಸನ್ನಿವೇಶ, ಹಾಡಿನಲ್ಲೂ ಎಮೋಶನ್‌ ಇದೆ. ಸ್ಟಾರ್‌ಕಾಸ್ಟ್‌, ಬಜೆಟ್‌ ಜನರನ್ನು ಚಿತ್ರಮಂದಿರಕ್ಕೆ ಕರೆತರುವವರೆಗೆ ಮಾತ್ರ ಸಹಾಯವಾಗುತ್ತದೆ. ಆ ನಂತರ ಸಿನಿಮಾದ ಓಡೋದು ಅದರಲ್ಲಿನ ಸತ್ವದಿಂದ’ ಎಂದರು ರಾಜ್‌ಮೌಳಿ.

ಇದನ್ನೂ ಓದಿ:ದೃಶ್ಯ-2 ಚಿತ್ರ ವಿಮರ್ಶೆ: ಕುತೂಹಲದ ಹಾದಿಯಲ್ಲಿ ಪೊನ್ನಪ್ಪ ಕೇಸ್‌!

ಇನ್ನು, ಜೂ.ಎನ್‌ಟಿಆರ್‌ ಕನ್ನಡ ವರ್ಷನ್‌ಗೆ ಡಬ್‌ ಮಾಡಿದ್ದಾರೆ. ಇದು ಅವರಿಗೆ ಖುಷಿ ಕೊಟ್ಟಿದೆ. ಏಕೆಂದರೆ ಅವರ ತಾಯಿ ಕುಂದಾಪುರದವರು. “ನಾನು ಕನ್ನಡದಲ್ಲಿ ಡಬ್‌ ಮಾಡುತ್ತೇನೆಂದು ಗೊತ್ತಾದಾಗ ನನ್ನಮ್ಮ, ತುಂಬಾ ಎಚ್ಚರಿಕೆಯಿಂದ ಡಬ್‌ ಮಾಡು, ಅಲ್ಲಿ ನಮ್ಮವರು ಇದ್ದಾರೆ, ತಲೆ ತಗ್ಗಿಸುವ ಹಾಗೆ ಮಾಡಬೇಡ ಎಂದರು. ಹಾಗಾಗಿ, ಸಾಕಷ್ಟು ಎಚ್ಚರಿಕೆ ವಹಿಸಿ ಮಾಡಿದ್ದೇನೆ. ನನ್ನ ಕನ್ನಡದಲ್ಲಿ ತಪ್ಪಾಗಿದ್ದರೆ ಕ್ಷಮಿಸಿ’ ಎಂದ ಅವರು, ಪುನೀತ್‌ರಾಜ್‌ಕುಮಾರ್‌ ಅವರನ್ನು ನೆನಪಿಸಿಕೊಂಡು “ಗೆಳೆಯ ಗೆಳೆಯ’ ಹಾಡು ಹೇಳಿದರು.

ಇನ್ನು, ಮತ್ತೂಬ್ಬ ನಟ ರಾಮ್‌ಚರಣ್‌ ತೇಜಾ ಕೂಡಾ ಸಿನಿಮಾದ ಅನುಭವದ ಜೊತೆ, ಕನ್ನಡಿಗರ ಪ್ರೀತಿ ಬಗ್ಗೆ ಮಾತನಾಡಿದರು. ಮುಂದೆ ಕನ್ನಡದಲ್ಲಿ ಒಳ್ಳೆಯ ಆಫ‌ರ್‌ ಬಂದರೆ ನಟಿಸುತ್ತೇನೆ ಎಂದರು. ನಟಿ ಆಲಿಯಾ ಭಟ್‌ ಕೂಡಾ ಸಿನಿಮಾ ಬಗ್ಗೆ ಮಾತನಾಡಿದರು.

ಕರ್ನಾಟಕದಲ್ಲಿ “ಆರ್‌ಆರ್‌ಆರ್‌’ ಚಿತ್ರದ ವಿತರಣೆಯನ್ನು ಕೆವಿಎನ್‌ ಸಂಸ್ಥೆ ಪಡೆದುಕೊಂಡಿದೆ. ಕಾರ್ಯಕ್ರಮದಲ್ಲಿ ಕೆವಿಎನ್‌ ಸಂಸ್ಥೆಯ ವೆಂಕಟ್‌ ಕೋನಂಕಿ ಕೂಡಾ ಹಾಜರಿದ್ದರು

ಟಾಪ್ ನ್ಯೂಸ್

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್‌ ಮಲಿಕ್; ಇಲ್ಲಿದೆ ಫೋಟೋಸ್

Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್‌ ಮಲಿಕ್; ಇಲ್ಲಿದೆ ಫೋಟೋಸ್

ಹಲವು ಬಾರಿ ಸಾಯುವ ಬಗ್ಗೆ ಯೋಚಿಸಿದ್ದೆ.. #MeToo ಆರೋಪದ ಬಗ್ಗೆ ನಿರ್ದೇಶಕ ಸಾಜಿದ್‌ ಮಾತು

ಹಲವು ಬಾರಿ ಸಾಯುವ ಬಗ್ಗೆ ಯೋಚಿಸಿದ್ದೆ.. #MeToo ಆರೋಪದ ಬಗ್ಗೆ ನಿರ್ದೇಶಕ ಸಾಜಿದ್‌ ಮಾತು

1-ram

Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್

1-maika

‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.