ಮತದಾನ ಬಹಿರಂಗ: ದೂರು ದಾಖಲು
Team Udayavani, Dec 11, 2021, 2:45 PM IST
ಕನಕಪುರ: ಶುಕ್ರವಾರ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ನಿಯಮ ಉಲ್ಲಂ ಸಿ ಮಾಡಿರುವ ಮತಗಳನ್ನು ಅಸಿಂಧು ಮಾಡಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಪ್ರತ್ಯೇಕ ಮೂರು ದೂರುಗಳು ದಾಖಲಾಗಿವೆ. ತಾಲೂಕಿನ ಕಸಬಾ ಹೋಬಳಿ ನಾರಾಯಣಪುರ ಮತ್ತು ಸಾತನೂರು ಹೋಬಳಿಯ ಅಚ್ಚಲು ಮತ್ತು ಉಯ್ಯಂಬಳ್ಳಿ ಹೋಬಳಿಯ ಮುಳ್ಳಹಳ್ಳಿ ಗ್ರಾಪಂಗಳಲ್ಲಿ ಮತದಾನ ಬಹಿರಂಗಪಡಿಸಿರುವುದು ಮತ್ತು ಏಜೆಂಟರುಗಳೇ ಮತಚಲಾವಣೆ ಮಾಡಿರುವ ಆರೋಪ ಕೇಳಿಬಂದಿದೆ.
ಶಿಸ್ತು ಕ್ರಮಕ್ಕೆ ಆಗ್ರಹ: ತಾಲೂಕಿನ ಕಸಬಾ ಹೋಬಳಿಯ ನಾರಾಯಣಪುರ ಗ್ರಾಪಂನಲ್ಲಿ ಶುಕ್ರವಾರ ನಡೆದ ವಿಧಾನಪರಿಷತ್ ಚುನಾ ವಣೆಗೆ ನಾರಾಯಣಪುರ ಗ್ರಾಪಂ ಮತಗಟ್ಟೆ ಸಂಖ್ಯೆ 205ರಲ್ಲಿ ನಡೆದಿರುವ ಮತದಾನವನ್ನು ಬಹಿರಂಗ ಹಾಗೂ ಚುನಾವಣೆ ನಿಯಮ ಉಲ್ಲಂಘಿಸಿ ಚುನಾವಣಾ ಅಭ್ಯರ್ಥಿಗಳ ಪರ ವಾದ ಬೂತ್ ಏಜೆಂಟರುಗಳೇ ಮತ ಚಲಾವಣೆ ಮಾಡಿದ್ದಾರೆ.
ಚಲಾವಣೆ ಆಗಿರುವ ಎಲ್ಲ ಮತಗ ಳನ್ನು ಅಸಿಂಧು ಎಂದು ಘೋಷಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ರಾಮ್ ಕುಮಾರ್ ದೂರು ನೀಡಿದ್ದಾರೆ.
ಏಜೆಂಟ್‌ಗಳಿಂದ ಮತ ಚಲಾವಣೆ: ಶುಕ್ರವಾರ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ನಾರಾಯಣಪುರ ಬೂತ್ ನಂ. 205 ರ ಜೆಡಿಎಸ್ ಅಭ್ಯರ್ಥಿ ಪರ ಮತ್ತು ಕಾಂಗ್ರೆಸ್ ಅಭ್ಯರ್ಥಿ ಪರ ಬೂತ್ ಏಜೆಂಟರು ಇದ್ದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಪರವಾದ ಬೂತ್ ಏಜೆಂಟರುಗಳು ತಾವೇ ಎಲ್ಲರ ಮತಗಳನ್ನು ಚಲಾವಣೆ ಮಾಡಿದ್ದಾರೆ.
ಯಾರಿಗೆ ಮತದಾನ ಮಾಡಲಾಗಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಚುನಾವ ಣೆಯ ನಿಯಮ ಉಲ್ಲಂ ಸಿರುವ ಈ ಎಲ್ಲ ಘಟ ನಾವಳಿಗಳು ವಿಡಿಯೋ ಚಿತ್ರೀಕರಣ ಸಂದರ್ಭದಲ್ಲಿ ಸೆರೆಯಾಗಿದೆ. ಹಾಗಾಗಿ ನಾರಾಯಣಪುರ ಗ್ರಾಪಂ ಮತಗಟ್ಟೆ ಸಂಖ್ಯೆ 205ರಲ್ಲಿ ಚಲಾವಣೆಯಾಗಿರುವ ಎಲ್ಲ ಮತಗಳನ್ನು ಅಸಿಂಧುಗೊಳಿಸಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸಾಮಾಜಿಕ ಹೋರಾಟಗಾರ ರಾಮ್ ಕುಮಾರ್ ಸ್ಥಳೀಯ ಅಧಿಕಾರಿಗಳ ಮೂಲಕ ದೇವನಹಳ್ಳಿ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
2 ಮತ ಅಸಿಂಧು ಮಾಡಿ: ತಾಲೂಕಿನ ಸಾತನೂರು ಹೋಬಳಿ ಅಚ್ಚಲು ಗ್ರಾಮದಲ್ಲಿ 207 ಮತಗಟ್ಟೆ ಸಂಖ್ಯೆಯಲ್ಲಿ ನಡೆದ ಚುನಾವಣೆಯಲ್ಲಿ ಗ್ರಾಪಂ ಸದಸ್ಯ ನಂಜೇಶ್ ಮತ್ತು ಸವಿತಾ ಇಬ್ಬರು ಮತದಾನ ಮಾಡುವಾಗ ಮತದಾನವನ್ನು ಸ್ಥಳೀಯ ಕಾಂಗ್ರೆಸ್ ಅಭ್ಯರ್ಥಿ ಪರವಾದ ಏಜೆಂಟರುಗಳು ಮತ್ತು ಸಾರ್ವಜನಿಕವಾಗಿ ಬಹಿರಂಗಪಡಿಸಿ ಮತದಾನ ಮಾಡಿದ್ದಾರೆ.
ಎರಡು ಮತಗಳನ್ನು ಅಸಿಂಧು ಮಾಡಬೇಕು ಎಂದು ಮತಗಟ್ಟೆ ಚುನಾವಣಾಧಿಕಾರಿ ಗಳಿಗೆ ಅಚ್ಚಲು ಗ್ರಾಪಂ ಸದಸ್ಯ ಕುಮಾರಸ್ವಾಮಿ ದೂರು ನೀಡಿದ್ದಾರೆ. ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಮುಳ್ಳಹಳ್ಳಿ ಗ್ರಾಪಂ ಮತಗಟೆ ಸಂಖ್ಯೆ 219ರಲ್ಲಿ ನಡೆದ ಚುನಾವಣೆಯಲ್ಲಿ ಕೆಲವು ಮತದಾರರು ಮತಗಳನ್ನು ಏಜೆಂಟರುಗಳಿಗೆ ಬಹಿರಂಗ ಪಡಿಸಿ ಮತದಾನ ಮಾಡಿದ್ದಾರೆ.
ಈ ದೃಶ್ಯಾವಳಿಗಳು ವಿಡಿಯೋದಲ್ಲಿ ಸೆರೆಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ವಿಡಿಯೋ ಪರಿಶಿಲಿಸಿ ಬಹಿರಂಗ ಪಡಿಸಿ ಮತದಾನ ಮಾಡಿರುವ ಮತಗಳನ್ನು ಅಸಿಂಧು ಮಾಡಬೇಕು ಎಂದು ಪಿಆರ್‌ಒ ಅವರಿಗೆ ಬೂತ್ ಏಜೆಂಟ್ ಸುಂದರ್ ರಾಜ್ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.