ಕೌಶಲ್ಯ-ಉದ್ಯೋಗಾವಕಾಶ ತರಬೇತಿ
Team Udayavani, Dec 11, 2021, 3:43 PM IST
ಕಾರವಾರ: ಮೌಲ್ಯಯುತ ಗುಣಗಳನ್ನು ಕಲಿತು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ ಎಂದು ಇಲ್ಲಿನಸರಕಾರಿ ಕಲಾ ಮತ್ತು ವಿಜ್ಞಾನ ಪದವಿ ಕಾಲೇಜಿನ ಪ್ರಾಂಶುಪಾಲರಾದ ವಿಜಯಾ ನಾಯ್ಕ ಅಭಿಪ್ರಾಯಪಟ್ಟರು.
ಸರಕಾರಿ ಕಲಾ ಮತ್ತು ವಿಜ್ಞಾನ ಸ್ವಾಯತ್ತ ಪದವಿ ಕಾಲೇಜು ಕಾರವಾರ ಹಾಗೂ ದೇಶಪಾಂಡೆ ಸ್ಪೆಲ್ಲಿಂಗ್ ಹುಬ್ಬಳ್ಳಿ ಸಹಯೋಗದಲ್ಲಿ ಬಿಬಿಎ ಮತ್ತು ಬಿಕಾಂ ವಿದ್ಯಾರ್ಥಿಗಳಿಗೆ ನಡೆದ ಸ್ಕಿಲ್ ಪ್ಲಸ್‌ಜಾಬ್ ನೆಕ್ಸ್ಟ್ ಎಂಬ ವಿಶೇಷ ತರಬೇತಿಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿನನಿರುದ್ಯೋಗ ನಿರ್ಮೂಲನೆಗೆ ದೇಶಪಾಂಡೆ ಸ್ಪೆಲಿಂಗ್ ಹುಬ್ಬಳ್ಳಿ ಮಹತ್ವದ ಕಾರ್ಯಕ್ರಮನಡೆಸುತ್ತಿದೆ. ನಮ್ಮ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವೃತ್ತಿ ಬದುಕಿಗೆ ನೆರವಾಗುವ ಕೌಶಲ್ಯ ತರಬೇತಿ ನೀಡುವಮೂಲಕ ಉದ್ಯೋಗ ಅವಕಾಶದೊರಕಿಸಿಕೊಡುವ ಈ ಕಾರ್ಯಕ್ರಮಅಪರೂಪದ್ದಾಗಿದೆ ಹಾಗೂ ವಿದ್ಯಾರ್ಥಿಗಳುಈ ಕಾರ್ಯಕ್ರಮದ ಪ್ರಯೋಜನ ಪಡೆದು ಮಾದರಿ ನಾಗರಿಕರಾಗಿ ಎಂದು ಸಲಹೆ ನೀಡಿದರು.
ದೇಶಪಾಂಡೆ ಸ್ಕಿಲ್ಲಿಂಗ್‌ನ ಜಿಲ್ಲಾ ಮುಖ್ಯಸ್ಥಶ್ರೀನಿವಾಸ್ ನಾಯ್ಕ ಮಾತನಾಡಿದರು. ಸ್ಕಿಲ್ ಪ್ಲಸ್ ಕಾರ್ಯಕ್ರಮವು ಅಂತಿಮವರ್ಷದ ಪದವಿ ವಿದ್ಯಾರ್ಥಿಗಳಿಗೆ ಪದವಿಪ್ರಮಾಣ ಪತ್ರದ ಜೊತೆಗೆ ಉದ್ಯೋಗವನ್ನುಪಡೆಯುವ ಅವಕಾಶ ನೀಡುತ್ತಿದೆ ಹಾಗೂಇದರ ಸದುಪಯೋಗವನ್ನು ಎಲ್ಲರೂ ಪಡೆಯಬೇಕೆಂದರು.
ದೇಶಪಾಂಡೆ ಸ್ಕಿಲ್ಲಿಂಗ್‌ನ ಅಧಿಕಾರಿಗಳು ಕಾರ್ಯಕ್ರಮದ ರೂಪುರೇಷೆ ಹಾಗೂಪ್ರಯೋಜನಗಳನ್ನು ವಿದ್ಯಾರ್ಥಿಗಳಿಗೆ ಅತ್ಯುತ್ತಮ ರೀತಿಯಲ್ಲಿ ತಿಳಿಸಿದರು.ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿರುವಅವಕಾಶಗಳು ವಂಚನೆಗಳು ಮತ್ತು ಉದ್ಯೋಗ ಪಡೆಯಲು ಅವಶ್ಯವಿರುವಕೌಶಲ್ಯಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆಚರ್ಚಿಸಿದರು. ಕಾರ್ಯಾಗಾರದಲ್ಲಿ ದೇಶಪಾಂಡೆ ಸ್ಪೆಲ್ಲಿಂಗ್ ಅಧಿಕಾರಿಗಳಾದ ಅಫ್ತಾಬ್, ರಾಜಶ್ರೀ, ಶಿವರಾಜ್ ಹಾಗೂ ಗುರುಸಿದ್ದಯ್ಯ ಪ್ರಮುಖ ಪಾತ್ರ ನಿರ್ವಹಿಸಿದರು. ಕಾಲೇಜಿನಪ್ಲೇಸ್ಮೆಂಟ್ ಆಫೀಸರ್ ಪ್ರೊ| ರಾಘವೇಂದ್ರನಿರೂಪಿಸಿದರು. ಕಾರ್ಯಾಗಾರದಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.