ಸುಧಾರಿತ ಪಿನಾಕ ರಾಕೆಟ್ ಲಾಂಚರ್ ಯಶಸ್ವಿ ಪರೀಕ್ಷೆ
ಡಿಆರ್‌ಡಿಒದಿಂದ ಅಭಿವೃದ್ಧಿಗೊಳಿಸಲ್ಪಟ್ಟಿರುವ ಈ ಸಾಧನದಿಂದ ಭಾರತೀಯ ಸೇನೆಗೆ ಬಲ
Team Udayavani, Dec 11, 2021, 9:30 PM IST
ನವದೆಹಲಿ: ಡಿಆರ್‌ಡಿಒದಿಂದ ಅಭಿವೃದ್ಧಿಪಡಿಸಲ್ಪಟ್ಟಿರುವ ವಿಸ್ತೃತ ದೂರದ ಪಿನಾಕ ಮಲ್ಟಿ ಬ್ಯಾರೆಲ್ ರಾಕೆಟ್ ಲಾಂಚರ್ ಸಿಸ್ಟಮ್ ಅನ್ನು ಶನಿವಾರ ಯಶಸ್ವಿಯಾಗಿ ಪರೀಕ್ಷಿಸಲಾಯಿತು.
ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಪೋಖ್ರಾನ್ ಪ್ರದೇಶದಲ್ಲಿ ಹಲವು ಭಿನ್ನ ದೂರಗಳನ್ನು ಯಶಸ್ವಿಯಾಗಿ ತಲುಪಬಲ್ಲ ರಾಕೆಟ್‌ಗಳನ್ನು ಪರೀಕ್ಷಿಸಲಾಯಿತು. ಈ ವೇಳೆ ರಾಕೆಟ್‌ಗಳಿಗೆ ವಿವಿಧ ಸಾಮರ್ಥ್ಯದ ಸಿಡಿತಲೆಗಳನ್ನು ಅಳವಡಿಸಲಾಗಿತ್ತು. ವಿವಿಧ ದೂರದ ಗುರಿಗಳನ್ನೂ ನಿಗದಿಪಡಿಸಲಾಗಿತ್ತು. ನಿಖರವಾಗಿ ಎಷ್ಟು ಸಾಮರ್ಥ್ಯ, ಎಷ್ಟು ದೂರದ ರಾಕೆಟ್‌ಗಳಿವು ಎಂಬ ಮಾಹಿತಿ ಲಭ್ಯವಾಗಿಲ್ಲ.
ಪ್ರಸ್ತುತ ಪರೀಕ್ಷೆಗೊಳಪಟ್ಟಿರುವ ವ್ಯವಸ್ಥೆ, ಈ ಹಿಂದೆ ಪಿನಾಕ (ಶಿವನ ಧನುಸ್ಸಿನ ಹೆಸರು) ರಾಕೆಟ್ಸ್ ಎಂದು ಕರೆಸಿಕೊಳ್ಳುತ್ತಿದ್ದ ವ್ಯವಸ್ಥೆಯ ಸುಧಾರಿತ ರೂಪ. ಡಿಆರ್‌ಡಿಒ ಇದನ್ನು ವಿನ್ಯಾಸ ಮಾಡಿದೆ. ಪುಣೆಯ ಹೈ ಎನರ್ಜಿ ಮೆಟೀರಿಯಲ್ಸ್ ರೀಸರ್ಚ್ ಪ್ರಯೋಗಾಲಯದಲ್ಲಿ ರೂಪಿಸಲಾಗಿದೆ.
ಇದನ್ನೂ ಓದಿ:ಅನಾರೋಗ್ಯದಿಂದ ಬಳಲುತ್ತಿರುವ ಬಾಲಕನ ಚಿಕಿತ್ಸೆಗಾಗಿ ಯಕ್ಷ ವೇಷ ಧರಿಸಿ ಸಂತೆಯಲ್ಲಿ ಧನ ಸಂಗ್ರಹ
ಮೂರು ದಿನಗಳಿಂದ ಪರೀಕ್ಷೆ:
ಸತತ ಮೂರು ದಿನಗಳ ಪೋಖ್ರಾನ್ ರೇಂಜ್‌ನಲ್ಲಿ ರಾಕೆಟ್‌ಗಳನ್ನು ಪರೀಕ್ಷೆ ಮಾಡಲಾಗಿದೆ. ಹಾಗೆಯೇ ದೇಶೀಯವಾಗಿ ನಿರ್ಮಿಸಲಾಗಿರುವ ಪ್ರಾಕ್ಸಿಮಿಟಿ ಫ್ಯೂಝ್ಗಳ (ಗುರಿ ಸನಿಹವಾದಾಗ ಸ್ಫೋಟಕಗಳನ್ನು ಸ್ಫೋಟಿಸುವ ಸಾಧನ) ಪರೀಕ್ಷೆಯನ್ನೂ ಯಶಸ್ವಿಯಾಗಿ ಮುಗಿಸಲಾಗಿದೆ. ಈ ಸಾಧನಗಳನ್ನು ಭಾರತೀಯ ಸೇನೆ ಬಳಸುತ್ತದೆ. ಇದೇ ವರ್ಷ ಜೂನ್‌ನಲ್ಲಿ, ಇದೇ ತಿಂಗಳಲ್ಲಿ ಹಿಂದೊಮ್ಮೆ ಇವುಗಳನ್ನು ಪರೀಕ್ಷಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.