ಹೆರಾಯಿನ್ ವಶ ಪ್ರಮಾಣ ಶೇ. 37 ಸಾವಿರ ಏರಿಕೆ
ಡಿಆರ್‌ಐ, ಎನ್‌ಸಿಬಿ ಅಧಿಕಾರಿಗಳಿಂದ ಮಾಹಿತಿ; ರಾಜ್ಯಗಳ ವ್ಯಾಪ್ತಿಯಲ್ಲಿ ಕೂಡ ಮಾದಕ ವಸ್ತುಗಳ ಜಾಲ ಹೆಚ್ಚಳ
Team Udayavani, Dec 12, 2021, 6:40 AM IST
ನವದೆಹಲಿ: ದೇಶದಲ್ಲಿ ನಾಲ್ಕು ವರ್ಷಗಳ ಅವಧಿಯಲ್ಲಿ ಹೆರಾಯಿನ್ ವಶಪಡಿಸಿಕೊಳ್ಳುವ ಪ್ರಮಾಣ ಶೇ.37,000ಕ್ಕೆ ಏರಿಕೆಯಾಗಿದೆ.
ವಶಪಡಿಸಿಕೊಳ್ಳುವ ಪ್ರಮಾಣ 2018ರಲ್ಲಿ 8 ಕೆಜಿ ಇದ್ದದ್ದು, ಪ್ರಸಕ್ತ ವರ್ಷಕ್ಕೆ 3 ಸಾವಿರ ಕೆಜಿಗೆ ಏರಿಕೆಯಾಗಿದೆ.
ಕಂದಾಯ ಗುಪ್ತಚರ ಇಲಾಖೆ (ಡಿಆರ್‌ಐ) ಮತ್ತು ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಮಂಡಳಿ (ಎನ್‌ಸಿಬಿ)ಯ ಅಧಿಕಾರಿಗಳ ಪ್ರಕಾರ ತಾಲಿಬಾನ್ ಉಗ್ರರ ನಿಯಂತ್ರಣದಲ್ಲಿರುವ ಅಫ್ಘಾನಿಸ್ತಾನದಿಂದ ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತುಗಳು ದೇಶಕ್ಕೆ ಬರುತ್ತವೆ. ಇಲ್ಲಿಂದ ಜಗತ್ತಿನ ಇತರ ಭಾಗಗಳಿಗೆ ವ್ಯವಸ್ಥಿತವಾಗಿ ಪೂರೈಕೆಯಾಗುತ್ತಿದೆ. ಹೀಗಾಗಿ, ದೇಶ ಮಾದಕ ವಸ್ತುಗಳ ಪೂರೈಕೆಯ ರಹದಾರಿಯಾಗುವಂತಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ “ನ್ಯೂಸ್ 18′ ವರದಿ ಮಾಡಿದೆ.
ರಾಜ್ಯಗಳ ಮಟ್ಟದಲ್ಲಿನ ತನಿಖಾ ಸಂಸ್ಥೆಗಳೂ ಕೂಡ ಸ್ಥಳೀಯ ಮಟ್ಟದಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ಹೆಚ್ಚಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ ಎಂದು ಡಿಆರ್‌ಐ ಮತ್ತು ಎನ್‌ಸಿಬಿಯ ಹಿರಿಯ ಅಧಿಕಾರಿಗಳೇ ಹೇಳಿಕೊಂಡಿದ್ದಾರೆ ಎಂದು ಚಾನೆಲ್ ತನ್ನ ವರದಿಯಲ್ಲಿ ಹೇಳಿಕೊಂಡಿದೆ.
ಅಫ್ಘಾನಿಸ್ತಾನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಫೀಮು ಬೆಳೆಯಲಾಗುತ್ತಿರುವುದೇ ಕಳ್ಳಸಾಗಣೆ ಹೆಚ್ಚಾಗಿರುವುದಕ್ಕೆ ಕಾರಣ. ವಿಶ್ವಸಂಸ್ಥೆಯ ಮಾದಕ ವಸ್ತುಗಳ ಮತ್ತು ಅಪರಾಧಗಳ ಮೇಲೆ ನಿಗಾ ಇರಿಸುವ ವಿಭಾಗ ನಡೆಸಿದ ಅಧ್ಯಯನದ ಪ್ರಕಾರ ಒಂದು ವರ್ಷದ ಅವಧಿಯಲ್ಲಿ ಅಫಿಮು ಬೆಳೆಯುವ ಪ್ರಮಾಣ ಅಫ್ಘಾನಿಸ್ತಾನದಲ್ಲಿ ಹೆಚ್ಚಾಗಿದೆ.
ಇದನ್ನೂ ಓದಿ:ಮತಾಂತರ ನಿಷೇಧ ಕಾಯ್ದೆ ಜಾರಿ ಖಚಿತ: ಈಶ್ವರಪ್ಪ
ಕಂದಾಯ ಗುಪ್ತಚರ ನಿರ್ದೇಶನಾಲಯ ನೀಡಿದ ಮಾಹಿತಿ ಪ್ರಕಾರ 2018-19ನೇ ಸಾಲಿನಲ್ಲಿ 7.98 ಕೆಜಿ ಹೆರಾಯ್ನ ವಶಪಡಿಸಿಕೊಳ್ಳಲಾಗಿತ್ತು. 2019-20ನೇ ಸಾಲಿನಲ್ಲಿ ಅದರ ಪ್ರಮಾಣ ಶೇ.27ಕ್ಕೆ ಹೆಚ್ಚಾಯಿತು. 2020-21ನೇ ಸಾಲಿನಲ್ಲಿ ಶೇ.2000 ಪ್ರಮಾಣಕ್ಕೆ ಏರಿಕೆಯಾಗಿದೆ-ಅಂದರೆ 202 ಕೆಜಿ ವಶ ಪಡಿಸಲಾಗಿದೆ.
ಭಾರತವೇ ಏಕೆ?
ಪಂಜಾಬ್‌ನ ನಿವೃತ್ತ ಡಿಜಿಪಿ ಶಶಿಕಾಂತ್ ಶರ್ಮಾ ಅವರ ಪ್ರಕಾರ ಇರಾನ್ ಮತ್ತು ಇರಾನ್‌ಗಳು ಹಿಂದಿನ ಸಂದರ್ಭಗಳಲ್ಲಿ ಮಾದಕ ವಸ್ತುಗಳ ಸಾಗಣೆಗೆ ಅತ್ಯುತ್ತಮ ರಹದಾರಿಯಾಗಿತ್ತು. ಈ ದಾರಿಗಳಲ್ಲಿ ಲೂಟಿ ಹೆಚ್ಚಾಯಿತು ಮತ್ತು ಆ ಎರಡು ದೇಶಗಳ ಮೇಲೆ ದಿಗ್ಬಂಧನ ವಿಧಿಸಿದ ಬಳಿಕ ಕಡಿಮೆಯಾಯಿತು. ಮತ್ತೊಂದು ಅಂಶವೆಂದರೆ ಪಾಕಿಸ್ತಾನ ಆ ದೇಶಗಳ ಜತೆಗೆ ಹೊಂದಿರುವ ಉತ್ತಮ ಬಾಂಧವ್ಯ ಕಳೆದುಕೊಳ್ಳಲು ತಯಾರಿಲ್ಲ. ಹೀಗಾಗಿ, ಅದರ ಮೂಲಕವೂ ದೇಶಕ್ಕೆ ಮಾದಕ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತವೆ. ಭಾರತದ ಮೂಲಕ ರವಾನೆಯಾಗುವ ಮಾದಕ ವಸ್ತುಗಳು ಐರೋಪ್ಯ ಒಕ್ಕೂಟಕ್ಕೆ ಕೊನೆಯದಾಗಿ ತಲುಪುತ್ತದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.