ಮತಾಂತರ ನಿಷೇಧ ಕಾಯ್ದೆ ಜಾರಿ ಖಚಿತ: ಈಶ್ವರಪ್ಪ
Team Udayavani, Dec 11, 2021, 7:43 PM IST
ಶಿವಮೊಗ್ಗ: ಮತಾಂತರ ನಿಷೇಧ ಕಾಯ್ದೆ ಜಾರಿಗೆತರಲಿಕ್ಕಾದರೂ ವಿಧಾನ ಪರಿಷತ್‌ನಲ್ಲಿ ಬಿಜೆಪಿಗೆ ಬಹುಮತ ಬೇಕು ಎಂದು ಸಚಿವಕೆ.ಎಸ್. ಈಶ್ವರಪ್ಪ ಹೇಳಿದರು.ವಿಧಾನ ಪರಿಷತ್ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪಧಿ ìಸಿರುವ ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ಗೆಲುವಿಗೆಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆಅದ್ಯಾವ ಬುದ್ಧಿ ಇದೆಯೋ ಗೊತ್ತಿಲ್ಲ. ಹಿಂದೂಧರ್ಮದ ಅವನತಿ ನಡೆಯುತ್ತಿದ್ದರೂ ಕೇವಲವೋಟಿನ ರಾಜಕಾರಣಕ್ಕಾಗಿಯೇ ಧರ್ಮ ವಿರೋಧ ಮಾಡುತ್ತಿದ್ದಾರೆ.
ಇಂತಹವರಿಗೆ ಯಾವುದೇಕಾರಣಕ್ಕೂ ಬೆಂಬಲ ನೀಡಬಾರದು. ಬಿಜೆಪಿಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿಯೇಮಾಡುತ್ತದೆ. ಆ ಮೂಲಕ ಹಿಂದೂ ಧರ್ಮವನ್ನುರಕ್ಷಣೆ ಮಾಡುವ ಬಿಜೆಪಿಗೆ ವಿಧಾನ ಪರಿಷತ್‌ನಲ್ಲೂಬಹುಮತ ಬೇಕಾಗಿದ್ದು, ಇದಕ್ಕಾಗಿಯಾದರೂ ಬಿಜೆಪಿಬೆಂಬಲಿಸಬೇಕು ಎಂದರು.ಮತಾಂತರ ನಿಷೇಧದ ಜತೆಗೆ ಇನ್ನಿತರ ಉತ್ತಮಕಾಯ್ದೆಗಳನ್ನು ಕೂಡ ಜಾರಿಗೆ ತರಬೇಕಾಗಿದೆ.ಇದಕ್ಕೆ ಪರಿಷತ್ ಸಹಕಾರ ಬೇಕೇ ಬೇಕು.ಈಗ 26 ಬಿಜೆಪಿ ಸದಸ್ಯರಿದ್ದು, ಇನ್ನೂ 12ಸದಸ್ಯರ ಬೆಂಬಲವಿದ್ದರೆ ನಾವು ಪೂರ್ಣಬಹುಮತ ಪಡೆಯುತ್ತೇವೆ.
ಹಾಗಾಗಿ ಈಚುನಾವಣೆಯಲ್ಲಿ ಕನಿಷ್ಠಪಕ್ಷ 15 ಕ್ಕೂ ಹೆಚ್ಚುಸ್ಥಾನಗಳನ್ನು ಗೆದ್ದರೆ ಮತಾಂತರ ನಿಷೇಧ ಕಾಯ್ದೆಸೇರಿದಂತೆ ಎಲ್ಲಾ ಕಾಯ್ದೆಗಳನ್ನು ಸುಲಭವಾಗಿಅನುಷ್ಠಾನಗೊಳಿಸಬಹುದು ಎಂದರು.ಡಿ.ಕೆ. ಶಿವಕುಮಾರ್ ಅವರು ರಾಜಕಾರಣ ಬಿಟ್ಟುಯೋಚಿಸಬೇಕಾಗಿದೆ. ಲವ್ ಜಿಹಾದ್ ಮೂಲಕ ನಮ್ಮಮಕ್ಕಳು ಅದೆಷ್ಟು ಮೋಸಕ್ಕೆ ಒಳಗಾಗಿದ್ದಾರೆ. ಅದೆಷ್ಟುಸಂಕಟಪಟ್ಟಿದ್ದಾರೆ ಎಂಬುದು ಅವರಿಗೆ ಗೊತ್ತಿಲ್ಲವೇ?ನಮ್ಮ ಹೆಣ್ಣು ಮಕ್ಕಳಿಗೆ ಇಲ್ಲದ ಆಸೆ ತೋರಿಸಿ,ನಂಬಿಸಿ ಮದುವೆಯಾಗಿ ನಂತರ ಕೈಬಿಡುತ್ತಾರೆ.ಅಂತಹ ಹೆಣ್ಣುಮಕ್ಕಳ ಗತಿಯೇನು? ಈಗಾಗಲೇಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಹೀಗೆಮುಂದುವರೆದರೆ ಹಿಂದೂ ದೇಶಕ್ಕೆ ಅಪಾಯ ಕಟ್ಟಿಟ್ಟಬುತ್ತಿ. ಒಮ್ಮೆ ಶಾಸಕ ಗೂಳಿಹಟ್ಟಿ ಶೇಖರ್ ಅವರೇಅವರ ತಾಯಿಯ ಬಲವಂತದ ಮತಾಂತರದ ಬಗ್ಗೆ ಹೇಳಿದ್ದರು.
ಆದ್ದರಿಂದ ಡಿಕೆಶಿಯವರು ತಮ್ಮ ವೋಟಿನರಾಜಕಾರಣ ಪಕ್ಕಕ್ಕಿಟ್ಟು ಕಾಂಗ್ರೆಸ್ ಪಕ್ಷ ಮತಾಂತರನಿಷೇಧ ಕಾಯ್ದೆಗೆ ಸಹಕರಿಸಬೇಕಿತ್ತು. ಆದರೆ, ಅವರುವಿರೋಧ ವ್ಯಕ್ತಪಡಿಸುವುದರಿಂದ ಪರಿಷತ್ ನಲ್ಲೂಈ ಕಾಯ್ದೆ ಅನುಮೋದನೆ ಪಡೆಯಲು ಬಹುಮತಬೇಕಾಗಿದೆ ಎಂದರು.ದೇಶ ಭಕ್ತರ ಕುಟುಂಬ: ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ಅವರು ದೇಶಭಕ್ತರ ಕುಟುಂಬದಿಂದ ಬಂದವರು.
ಅವರ ತಂದೆ ಡಿ.ಎಚ್. ಶಂಕರಮೂರ್ತಿಮತ್ತು ಅವರ ಅಜ್ಜ ಕೂಡ ದೇಶಭಕ್ತರಾಗಿದ್ದರು.ಡಿ.ಎಚ್. ಶಂಕರಮೂರ್ತಿ ಸೇರಿದಂತೆ ಅವರಕುಟುಂಬದ ಅನೇಕರು ತುರ್ತು ಪರಿಸ್ಥಿತಿಸಂದರ್ಭದಲ್ಲಿ ಜೈಲಿನಲ್ಲಿರುವಾಗಲೇ ಡಿ.ಎಚ್.ಶಂಕರಮೂರ್ತಿ ತಂದೆಯವರು ತೀರಿಕೊಂಡರೂಸಹ ಅವರನ್ನು ನೋಡಲು ಕೂಡ ಅಂದಿನ ಕಾಂಗ್ರೆಸ್‌ಸರ್ಕಾರ ಬಿಡಲಿಲ್ಲ. ಇಂತಹ ದೇಶಭಕ್ತ ಕುಟುಂಬದಿಂದಬಂದಿರುವ ಅರುಣ್ ಅವರು ಗೆದ್ದೇ ಗೆಲ್ಲುತ್ತಾರೆಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.