ಅರ್ಜಿ ಇಲ್ಲದೆ ಸಾಧಕರನ್ನು ಗುರುತಿಸಲು ಕ್ರಮ: ಸುನಿಲ್‌

ಡಾ| ಯು. ಬಿ. ರಾಜಲಕ್ಷ್ಮೀ, ರೋಹಿತ್‌ ಕುಮಾರ್‌ ಅವರಿಗೆ ಪೌರ ಸಮ್ಮಾನ

Team Udayavani, Dec 12, 2021, 5:40 AM IST

ಅರ್ಜಿ ಇಲ್ಲದೆ ಸಾಧಕರನ್ನು ಗುರುತಿಸಲು ಕ್ರಮ: ಸುನಿಲ್‌

ಕಾರ್ಕಳ: ಮುಂದಿನ ರಾಜ್ಯೋತ್ಸವ ಸಂದರ್ಭ ಅರ್ಜಿಗಳನ್ನು ಸ್ವೀಕರಿಸದೆ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತರಂಗ ವಾರಪತ್ರಿಕೆಯ ಸಂಪಾದಕಿ ಡಾ| ಯು.ಬಿ. ರಾಜಲಕ್ಷ್ಮೀ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್‌ ಕುಮಾರ್‌ ಕಟೀಲು ಅವರಿಗೆ ಕಾರ್ಕಳದಲ್ಲಿ ಶನಿವಾರ ಜರಗಿದ ಹುಟ್ಟೂರ ಪೌರ ಅಭಿನಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್‌ ಉದ್ಘಾಟಿಸಿದರು. ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅಭಿನಂದನ ಭಾಷಣ ಮಾಡಿ, ಡಾ| ರಾಜಲಕ್ಷ್ಮೀ ಸದ್ದುಗದ್ದಲವಿಲ್ಲದೆ ಎಲೆಮರೆಯ ಕಾಯಿಯಂತೆ ಸಾಧನೆಯ ಹಾದಿಯಲ್ಲಿ ನಡೆದು ಬಂದವರು. ದೀರ್ಘಾವಧಿ ತರಂಗ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿರುವುದಲ್ಲದೆ ತರಂಗ ಪತ್ರಿಕೆಯ ವ್ಯವಸ್ಥಾಪಕಿ ಡಾ| ಸಂಧ್ಯಾ ಪೈ ಪ್ರೀತಿಗೆ ಪಾತ್ರರಾದವರು ಎಂದರು.

ಅಂತೆಯೇ ರೋಹಿತ್‌ ಕಟೀಲು ಅವರಲ್ಲಿ ಹಿರಿಯರಲ್ಲಿ ರಕ್ತಗತವಾಗಿದ್ದ ನಾಯಕತ್ವ, ಹೋರಾಟ ಮನೋಭಾವ, ಸೌಂದರ್ಯ ಪ್ರಜ್ಞೆ ಬೆಳೆದು ಬಂದಿದೆ ಎಂದರು.

ಇದನ್ನೂ ಓದಿ:ಒಂಟೆ ಸವಾರಿ ವಿಡಿಯೋ ಹಂಚಿಕೊಂಡ ಸಚಿವ ಕಿರಣ್‌ ರಿಜಿಜು 

ಹಿರಿಯ ಉದ್ಯಮಿ ಬೋಳ ಪ್ರಭಾಕರ ಕಾಮತ್‌, ಭುವನೇಂದ್ರ ಕಾಲೇಜು ಪ್ರಾಂಶುಪಾಲ ಡಾ| ಮಂಜುನಾಥ ಕೋಟ್ಯಾನ್‌, ಬಿಲ್ಲವ ಸಮಾಜ ಅಧ್ಯಕ್ಷ ಡಿ.ಆರ್‌. ರಾಜು, ಉದ್ಯಮಿಗಳಾದ ಮಹೇಶ್‌ ಶೆಟ್ಟಿ, ಕುಡುಪುಲಾಜೆ, ಚಿತ್ರ ನಟಿಯರಾದ ದುನಿಯ ರಶ್ಮಿ, ಭಾವನಾ ಮಾತನಾಡಿ ದರು. ಕರಿಯಣ್ಣ ಶೆಟ್ಟಿ, ಶಿವರಾಮ ಶೆಟ್ಟಿ, ಅಪ್ಸರಾ ರೋಹಿತ್‌ ಕುಮಾರ ಕಟೀಲು, ಸಮಿತಿ ಅಧ್ಯಕ್ಷ ಸುನಿಲ್‌ ಕುಮಾರ್‌ ವೇದಿಕೆಯಲ್ಲಿದ್ದರು.

ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಣಿರಾಜ ಶೆಟ್ಟಿ ಸ್ವಾಗತಿಸಿದರು. ಬಾಲಕೃಷ್ಣ ಶೆಟ್ಟಿ ವಂದಿಸಿದರು. ರಾಜೇಂದ್ರ ಭಟ್‌ ನಿರೂಪಿಸಿದರು. ಪ್ರಶಸ್ತಿ ಪುರಸ್ಕೃತರಿಬ್ಬರಿಗೂ ತುಪ್ಪದ ನಂದಾದೀಪ ಬೆಳಗಿ, ಪನ್ನೀರು ಚಿಮುಕಿಸಿ, ಅವರದೇ ಎತ್ತರದ ಮಾನ ಪತ್ರ, ಸ್ಮರಣಿಕೆ ಫ‌ಲಪುಷ್ಪ ನೀಡಿ ಗೌರವಿಸಲಾಯಿತು. ಡಾ| ರಾಜಲಕ್ಷ್ಮೀ ಸಮ್ಮಾನ ಸ್ವೀಕರಿಸಿದ ವೇಳೆ ತರಂಗ ಪತ್ರಿಕೆಯ ವ್ಯವಸ್ಥಾಪಕಿ ಡಾ| ಸಂಧ್ಯಾ ಎಸ್‌. ಪೈ ವೇದಿಕೆಯಲ್ಲಿದ್ದರು.

ಟಾಪ್ ನ್ಯೂಸ್

Sirsi: ಗದ್ದೆ ಕೆಲಸಕ್ಕೆ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿ ಹೊಳೆಯಲ್ಲಿ ಶವವಾಗಿ‌ ಪತ್ತೆ

Sirsi: ಗದ್ದೆ ಕೆಲಸಕ್ಕೆ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಹೊಳೆಯಲ್ಲಿ ಪತ್ತೆ

Neha Hiremath Case; 483-page charge sheet was submitted by the CID

Neha Hiremath Case; 483 ಪುಟಗಳ ದೋಷಾರೋಪಣ ಪಟ್ಟಿ ಸಲ್ಲಿಸಿದ ಸಿಐಡಿ

Tragedy: ರೈಲು ಹತ್ತುವ ವೇಳೆ ರೈಲಿನಡಿ ಬಿದ್ದು ಎರಡೂ ಕಾಲನ್ನು ಕಳೆದುಕೊಂಡ ಮಹಿಳೆ

Tragedy: ರೈಲು ಹತ್ತುವ ವೇಳೆ ರೈಲಿನಡಿ ಬಿದ್ದು ಎರಡೂ ಕಾಲುಗಳನ್ನು ಕಳೆದುಕೊಂಡ ಮಹಿಳೆ

14

ಪ್ರಭಾಸ್‌ – ಸಂದೀಪ್‌ ವಂಗಾ ʼಸ್ಪಿರಿಟ್‌ʼನಲ್ಲಿ ವಿಲನ್‌ ಪಾತ್ರಕ್ಕೆ ಕೊರಿಯಾದ ಖ್ಯಾತ ನಟ?

Father in Sindh arrested for burying 15-day-old daughter alive

Sindh; 15 ದಿನದ ಮಗಳನ್ನು ಜೀವಂತ ಸಮಾಧಿ ಮಾಡಿದ ತಂದೆ! ಬಂಧನ

Shimoga; ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದ ಶಿವಣ್ಣ; ತಲಾ 1 ಲಕ್ಷ ಪರಿಹಾರ ನೀಡಿದ ದಂಪತಿ

Shimoga; ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದ ಶಿವಣ್ಣ; ತಲಾ 1 ಲಕ್ಷ ಪರಿಹಾರ ನೀಡಿದ ದಂಪತಿ

‌Kollywood: ವಿಜಯ್‌ ಸೇತುಪತಿ 50ನೇ ಚಿತ್ರ ʼಮಹಾರಾಜʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

‌Kollywood: ವಿಜಯ್‌ ಸೇತುಪತಿ 50ನೇ ಚಿತ್ರ ʼಮಹಾರಾಜʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ವ್ಯಾಪಕ ಮಳೆಗೆ ಗುಂಡಿಬೈಲು ಪ್ರದೇಶ ಜಲಾವೃತ.. ವಿದ್ಯಾರ್ಥಿಗಳು ಸೇರಿ ಸ್ಥಳೀಯರ ರಕ್ಷಣೆ

Udupi: ಭಾರಿ ಮಳೆಗೆ ಗುಂಡಿಬೈಲು ಪ್ರದೇಶ ಜಲಾವೃತ… ವಿದ್ಯಾರ್ಥಿಗಳ ರಕ್ಷಣೆ

Heavy Rain: ಉಡುಪಿಯಲ್ಲಿ ಮಳೆಯ ಅಬ್ಬರ; ಹಲವೆಡೆ ಮನೆಗಳು ಜಲಾವೃತ

Heavy Rain: ಉಡುಪಿಯಲ್ಲಿ ಮಳೆಯ ಅಬ್ಬರ; ಹಲವೆಡೆ ಮನೆಗಳು ಜಲಾವೃತ

Heavy Rain: ನಿರಂತರ ಮಳೆಯ ಹಿನ್ನೆಲೆ; ಬೈಂದೂರು ತಾಲೂಕಿನ 44 ಶಾಲೆಗಳಿಗೆ ರಜೆ ಘೋಷಣೆ

Heavy Rain: ನಿರಂತರ ಮಳೆಯ ಹಿನ್ನೆಲೆ; ಬೈಂದೂರು ತಾಲೂಕಿನ 44 ಶಾಲೆಗಳಿಗೆ ರಜೆ ಘೋಷಣೆ

Udupi ಆನೆಕಾಲು ಮುಕ್ತ ಅನುಮೋದನೆಯಷ್ಟೇ ಬಾಕಿ

Udupi ಆನೆಕಾಲು ಮುಕ್ತ ಅನುಮೋದನೆಯಷ್ಟೇ ಬಾಕಿ

Central Government ಕೃಷಿ ಸಿಂಚಾಯಿ ಯೋಜನೆ: ರಾಜ್ಯದಿಂದ ಹೆಚ್ಚುವರಿ ಸಬ್ಸಿಡಿ ಖೋತಾ

Central Government ಕೃಷಿ ಸಿಂಚಾಯಿ ಯೋಜನೆ: ರಾಜ್ಯದಿಂದ ಹೆಚ್ಚುವರಿ ಸಬ್ಸಿಡಿ ಖೋತಾ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Sirsi: ಗದ್ದೆ ಕೆಲಸಕ್ಕೆ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿ ಹೊಳೆಯಲ್ಲಿ ಶವವಾಗಿ‌ ಪತ್ತೆ

Sirsi: ಗದ್ದೆ ಕೆಲಸಕ್ಕೆ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಹೊಳೆಯಲ್ಲಿ ಪತ್ತೆ

Neha Hiremath Case; 483-page charge sheet was submitted by the CID

Neha Hiremath Case; 483 ಪುಟಗಳ ದೋಷಾರೋಪಣ ಪಟ್ಟಿ ಸಲ್ಲಿಸಿದ ಸಿಐಡಿ

Tragedy: ರೈಲು ಹತ್ತುವ ವೇಳೆ ರೈಲಿನಡಿ ಬಿದ್ದು ಎರಡೂ ಕಾಲನ್ನು ಕಳೆದುಕೊಂಡ ಮಹಿಳೆ

Tragedy: ರೈಲು ಹತ್ತುವ ವೇಳೆ ರೈಲಿನಡಿ ಬಿದ್ದು ಎರಡೂ ಕಾಲುಗಳನ್ನು ಕಳೆದುಕೊಂಡ ಮಹಿಳೆ

14

ಪ್ರಭಾಸ್‌ – ಸಂದೀಪ್‌ ವಂಗಾ ʼಸ್ಪಿರಿಟ್‌ʼನಲ್ಲಿ ವಿಲನ್‌ ಪಾತ್ರಕ್ಕೆ ಕೊರಿಯಾದ ಖ್ಯಾತ ನಟ?

forest

Forest; ಕಾಡಿನಲ್ಲಿ ಹಾಡಿನ ಸದ್ದು; ಫಾರೆಸ್ಟ್‌ ಒಳಗೆ ಚಿಕ್ಕಣ್ಣ- ಟೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.