ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಿಚ್ಚ ಸುದೀಪ್
Team Udayavani, Dec 12, 2021, 8:12 AM IST
ನಟ ಸುದೀಪ್ ಅವರ “ವಿಕ್ರಾಂತ್ ರೋಣ’ ಚಿತ್ರ ಫೆ.24ರಂದು ತೆರೆಕಾಣಲಿದೆ. ಈ ನಡುವೆಯೇ ಸುದೀಪ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಶನಿವಾರ ಕುಟುಂಬ ಸಮೇತ ದೇವಸ್ಥಾನಕ್ಕೆ ಭೇಟಿ ನೀಡಿದ ಸುದೀಪ್, ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ವಿದ್ಯಾ ಪ್ರಸನ್ನ ತೀರ್ಥ ಶ್ರೀಗಳನ್ನು ಭೇಟಿಯಾದರು.
ಇನ್ನು, ಸುದೀಪ್ ಅವರ “ವಿಕ್ರಾಂತ್ ರೋಣ’ ಆ್ಯಕ್ಷನ್ ಅಡ್ವೆಂಚರ್ ಶೈಲಿಯ ಚಿತ್ರವಾಗಿದ್ದು, 55 ದೇಶಗಳಲ್ಲಿ, 14 ಭಾಷೆಗಳಲ್ಲಿ 3ಡಿ ಬಿಡುಗಡೆಯನ್ನು ಕಾಣಲಿದೆ. ಅನೂಪ್ ಭಂಡಾರಿಯವರ ನಿರ್ದೇಶನ, ಜಾಕ್ ಮಂಜುನಾಥ್ ಹಾಗೂ ಶಾಲಿನಿ ಮಂಜುನಾಥ್‌ರವರ ನಿರ್ಮಾಣ, ಅಲಂಕಾರ್ ಪಾಂಡಿಯನ್ ಅವರ ಸಹ-ನಿರ್ಮಾಣ ಈ ಚಿತ್ರಕ್ಕಿದೆ. ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ಚಿತ್ರಕ್ಕಿದೆ.
ಚಿತ್ರದಲ್ಲಿ ಕಿಚ್ಚ ಸುದೀಪ್ ಜೊತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್ ಹಾಗೂ ಜಾಕ್ವೆಲಿನ್ ಫರ್ನಾಂಡೀಸ್ ನಟಿಸಿದ್ದಾರೆ. ಜಾಕ್ವೆಲಿನ್ ಕೇವಲ ಹಾಡಿನಲ್ಲಷ್ಟೇ ಕಾಣಿಸಿಕೊಂಡಿಲ್ಲ. ಚಿತ್ರದ ಕೆಲವು ಪ್ರಮುಖ ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಜಾಕ್ವೆಲಿನ್ “ವಿಕ್ರಾಂತ್ ರೋಣ’ದಲ್ಲಿ ಒಂದು ಪಾತ್ರವಾಗಿದ್ದಾರೆ ಎನ್ನಬಹುದು.
ಜಾಕ್ವೆಲಿನ್ ಕಾಣಿಸಿಕೊಂಡಿರುವ ಹಾಡಿಗಾಗಿ ಸಖತ್ ಕಲರ್‌ಫುಲ್ ಸೆಟ್ ಹಾಕಿದ್ದು, ಬೆಂಗಳೂರು ಹೊರವಲಯದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಒಂದು ಹಾಡಿಗಾಗಿಯೇ 4 ಕೋಟಿಗೂ ಅಧಿಕ ವೆಚ್ಚ ಮಾಡಿದೆ ಚಿತ್ರತಂಡ. ಇನ್ನು, “ವಿಕ್ರಾಂತ್ ರೋಣ’ ಆ್ಯಕ್ಷನ್ ಅಡ್ವೆಂಚರ್ ಶೈಲಿಯ ಚಿತ್ರವಾಗಿದ್ದು, 55 ದೇಶಗಳಲ್ಲಿ, 14 ಭಾಷೆಗಳಲ್ಲಿ 3ಡಿ ಬಿಡುಗಡೆಯನ್ನು ಕಾಣಲಿದೆ.
ಅನೂಪ್ ಭಂಡಾರಿಯವರ ನಿರ್ದೇಶನ, ಜಾಕ್ ಮಂಜುನಾಥ್ ಹಾಗೂ ಶಾಲಿನಿ ಮಂಜುನಾಥ್‌ರವರ ನಿರ್ಮಾಣ, ಅಲಂಕಾರ್ ಪಾಂಡಿಯನ್ ಅವರ ಸಹ-ನಿರ್ಮಾಣ ಈ ಚಿತ್ರಕ್ಕಿ ದೆ. ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ಚಿತ್ರಕ್ಕಿದೆ. ಚಿತ್ರದಲ್ಲಿ ಕಿಚ್ಚ ಸುದೀಪ್ ಜೊತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್ ಹಾಗೂ ಜಾಕ್ವೆಲಿನ್ ಫರ್ನಾಂಡೀಸ್ ನಟಿಸಿದ್ದಾರೆ. ಜಾಕ್ವೆಲಿನ್ ಕೇವಲ ಹಾಡಿನಲ್ಲಷ್ಟೇ ಕಾಣಿಸಿಕೊಂಡಿಲ್ಲ. ಚಿತ್ರದ ಕೆಲವು ಪ್ರಮುಖ ದೃಶ್ಯಗಳಲ್ಲೂ ಕಾಣಿಸಿಕೊಂಡಿ ದ್ದಾರೆ. ಈ ಮೂಲಕ ಜಾಕ್ವೆಲಿನ್ “ವಿಕ್ರಾಂತ್ ರೋಣ’ದಲ್ಲಿ ಒಂದು ಪಾತ್ರವಾಗಿದ್ದಾರೆ ಎನ್ನಬಹುದು.
ಜಾಕ್ವೆಲಿನ್ ಕಾಣಿಸಿಕೊಂಡಿರುವ ಹಾಡಿಗಾಗಿ ಸಖತ್ ಕಲರ್‌ಫುಲ್ ಸೆಟ್ ಹಾಕಿದ್ದು, ಬೆಂಗಳೂರು ಹೊರವಲಯದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಒಂದು ಹಾಡಿಗಾಗಿಯೇ 4 ಕೋಟಿಗೂ ಅಧಿಕ ವೆಚ್ಚ ಮಾಡಿದೆ ಚಿತ್ರತಂಡ. “ವಿಕ್ರಾಂತ್ ರೋಣ’ ಕನ್ನಡ ಚಿತ್ರರಂಗವನ್ನು ಮತ್ತೂಂದು ಲೆವೆಲ್‌ಗೆ ಕೊಂಡೊಯ್ಯುವ ಸಿನಿಮಾ ಎಂಬ ಮಾತು ಕೇಳಿ ಬರುತ್ತಿದೆ. ನಿರ್ದೇಶಕ ಅನೂಪ್ ಭಂಡಾರಿ ಪ್ರಕಾರ, “ವಿಕ್ರಾಂತ್ ರೋಣ’ದಲ್ಲಿ ನಟ ಸುದೀಪ್ ಅವರ ಸ್ಟಾರ್‌ಡಮ್ ಮತ್ತು ಅವರ ಪರ್ಫರ್ಮೆನ್ಸ್ ಎರಡರ ಸಮಾಗಮವಾಗಿದೆಯಂತೆ.
“ಸುದೀಪ್ ಅವರಿಗೆ ದೇಶದಾದ್ಯಂತ ಅವರದ್ದೇ ಆದ ಫ್ಯಾನ್ಸ್ ಬಳಗವಿದೆ. ಇಲ್ಲಿಯವರೆಗೆ ಅವರು ಮಾಡಿರುವ ಸಿನಿಮಾಗಳಲ್ಲಿ ತಮ್ಮ ಪರ್ಫಾರ್ಮೆನ್ಸ್ ಏನು ಅನ್ನೋದನ್ನ ತೋರಿಸಿದ್ದಾರೆ. ಅವರಿಗೆ ಅವರದ್ದೇ ಆದ ಸ್ಟಾರ್‌ಡಮ್ ಇದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು “ವಿಕ್ರಾಂತ್ ರೋಣ’ ಸಿನಿಮಾ ಮಾಡಿದ್ದೇವೆ.
ಇದರಲ್ಲಿ ಅವರ ಸ್ಟಾರ್‌ಡಮ್ ಮತ್ತು ಪರ್ಫಾರ್ಮೆನ್ಸ್ ಎರಡಕ್ಕೂ ಸಾಕಷ್ಟು ಸ್ಪೇಸ್ ಇದೆ’ ಎನ್ನುವುದು ಅನೂಪ್ ಮಾತು. “ಈ ಸಿನಿಮಾದ ಸಬೆjಕ್ಟ್ ಮತ್ತು ಸ್ಕ್ರಿಪ್ಟ್ ಎರಡೂ ಕೂಡ ಸುದೀಪ್ ಅವರಿಗಾಗಿಯೇ ಹೇಳಿ ಮಾಡಿಸಿದಂತೆ, ಸಹಜವಾಗಿ ಮೂಡಿಬಂದಿದೆ. ಸುದೀಪ್ ಅವರನ್ನು ಹೊರತುಪಡಿಸಿ ಬೇರೆ ಯಾರಿಗೂ ಮಾಡಲಾಗದು ಎನ್ನುವಷ್ಟರ ಮಟ್ಟಿಗೆ ಈ ಸಬ್ಜೆಕ್ಟ್ ಅವರಿಗೆ ಮ್ಯಾಚ್ ಆಗುತ್ತದೆ. ಸಿನಿಮಾದಲ್ಲಿ ಯಾವುದನ್ನೂ ಅತಿಯಾಗಿ ಸೇರಿಸಲು ಹೋಗಿಲ್ಲ. ಎಲ್ಲವೂ ಆರ್ಗಾನಿಕ್ ಆಗಿದೆ’ ಎನ್ನುತ್ತಾರೆ ಅನೂಪ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.