ಮಾನಸಿಕ ಸದೃಢಳಾಗಿದ್ದೇನೆ, ಅಮಾನತು ತೆರವುಗೊಳಿಸಿ: ಮಂಗಲಾ ಕಾಂಬಳೆ
Team Udayavani, Dec 12, 2021, 1:03 PM IST
ಮಾನಸಿಕ ಸದೃಢಳಾಗಿದ್ದೇನೆ, ಅಮಾನತು ತೆರವುಗೊಳಿಸಿ: ಮಂಗಲಾ ಕಾಂಬಳೆಬೀದರ: ನಾನು ಸ್ವಸ್ಥ ಮತ್ತು ಮಾನಸಿಕ ಸದೃಢಳಾಗಿದ್ದೇನೆ ಎಂದು ಬೆಂಗಳೂರು ನಿಮಾನ್ಸ್ ಆಸ್ಪತ್ರೆ ವೈದ್ಯರೇ ಪ್ರಮಾಣ ಪತ್ರ ನೀಡಿದ್ದಾರೆ. ಹಾಗಾಗಿ ತಮ್ಮ ಅಮಾನತು ಆದೇಶವನ್ನು ರದ್ದುಗೊಳಿಸಿ ಕಿರುಕುಳ ರಹಿತ ಗ್ರಾಪಂ ಪಿಡಿಒ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿ, ಸೂಕ್ತ ರಕ್ಷಣೆ ಕಲ್ಪಿಸಬೇಕು ಎಂದು ಮಂಗಲಾ ಕಾಂಬಳೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ತಾವು ಪಿಡಿಒ ಆಗಿ ಸೇವೆ ಸಲ್ಲಿಸಿದ ಗ್ರಾಪಂಗಳಲ್ಲಿ ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನದ ಜತೆಗೆ ಜನಪರ ಕೆಲಸಗಳನ್ನು ಮಾಡಿದ್ದೇನೆ. ಆದರೆ, ತಮಗೆ ಕಿರುಕುಳ, ಮಾನಸಿಕ ಚಿತ್ರಹಿಂಸೆ ನೀಡಿ ನೆಮ್ಮದಿ ಹಾಳು ಮಾಡಿದ್ದಲ್ಲದೇ ಒತ್ತಾಯ ಪೂರ್ವಕವಾಗಿ ಮಾನಸಿಕ ಅಸ್ವಸ್ಥ ಆಸ್ಪತ್ರೆಯಿಂದ ಪ್ರಮಾಣ ಪತ್ರ ತರುವಂತೆ ಆದೇಶಿಸಿ ನೌಕರಿಯಿಂದ ಮನೆಗೆ ಕಳುಹಿಸುವ ಕುತಂತ್ರ ನಡೆಸಲಾಗಿದೆ. ಇದರ ಹಿಂದೆ ಗ್ರಾಪಂನವರು, ಅಧಿಕಾರಿಗಳು, ರಾಜಕಾರಣಿಗಳ ಕೈವಾಡ ಇದೆ. ಅಷ್ಟೇ ಅಲ್ಲ ಕೊಲೆಗೂ ಸಹ ಸಂಚು ನಡೆಸಲಾಗಿದೆ ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಜಿಪಂ ಸಿಇಒ ಒಬ್ಬ ಮಹಿಳೆಯಾಗಿದ್ದರೂ ಸಹ ತಮಗೆ ನ್ಯಾಯ ಒದಗಿಸದೆ ಹಿಂಸೆ ನೀಡಿರುತ್ತಾರೆ. ಈವರೆಗೆ ಪೊಲೀಸರ ಮೂಲಕ ತಮ್ಮ ವಿರುದ್ಧ ಸುಮಾರು 7 ಪ್ರಕರಣಗಳನ್ನು ದಾಖಲಿಸಿ ಮಾನಸಿಕ ಹಿಂಸೆ ನೀಡಲಾಗಿದೆ. ಸದ್ಯ ತಮ್ಮ ತಾಯಿಯೊಂದಿಗೆ ನಾನು ವಾಸವಾಗಿದ್ದು, ತಮ್ಮ ಹಿಂದೆ ರಕ್ಷಣೆಗಾಗಿ ಯಾರೂ ಇಲ್ಲ. ಕೂಡಲೇ ಅಮಾನತ್ತಿನಿಂದ ತೆರವುಗೊಳಿಸಿ ಪುನಃ ಪಿಡಿಒ ಹುದ್ದೆ ನಿರ್ವಹಿಸುವಂತೆ ಅವಕಾಶ ಕಲ್ಪಿಸಬೇಕು. ಅನ್ಯಾಯ ಮಾಡಿದವ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮಂಗಲಾ ಅವರ ತಾಯಿ ಇಂದಿರಾಬಾಯಿ ಕಾಂಬಳೆ ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.