ಇಂಗ್ಲಿಷ್‌ನ ಪ್ರಸಿದ್ಧ ಪುಸ್ತಕವಾಗಿರುವ ಹ್ಯಾರಿ ಪಾಟರ್ ಪುಸ್ತಕಕ್ಕೆ 3.5 ಕೋಟಿ ರೂ!
Team Udayavani, Dec 12, 2021, 8:45 PM IST
ವಾಷಿಂಗ್ಟನ್: ಇಂಗ್ಲಿಷ್‌ನ ಪ್ರಸಿದ್ಧ ಪುಸ್ತಕವಾಗಿರುವ “ಹ್ಯಾರಿ ಪಾಟರ್’ ಪುಸ್ತಕದ ಮೊದಲ ಮುದ್ರಣವನ್ನು ಇತ್ತೀಚೆಗೆ ಹರಾಜು ಕರೆಯಲಾಗಿತ್ತು. ಬರೋಬ್ಬರಿ 471000 ಡಾಲರ್ ಅಂದರೆ 3.56 ಕೋಟಿ ರೂಪಾಯಿಗೆ ಈ ಪುಸ್ತಕ ಹರಾಜಾಗಿದೆ.
ಜೆ.ಕೆ.ರೋಲಿಂಗ್ ಅವರು ಬರೆದಿರುವ ಈ ಪುಸ್ತಕದ ಮೊದಲನೇ ಮುದ್ರಣದಲ್ಲಿ ಕೇವಲ 500 ಪುಸ್ತಕಗಳನ್ನು ಮುದ್ರಿಸಲಾಗಿತ್ತು. ಅದರಲ್ಲಿ ಒಂದು ಅಮೆರಿಕದ ಕಲೆಕ್ಟರ್ ಒಬ್ಬರ ಬಳಿಯಿದ್ದು, ಅದನ್ನು ದಲ್ಲಾಸ್ ಮೂಲದ ಹರಾಜು ಸಂಸ್ಥೆಯೊಂದು ಹರಾಜು ಮಾಡಿದೆ.
ಇದನ್ನೂ ಓದಿ:ನಾಳೆಯಿಂದ ಚಳಿಗಾಲದ ಅಧಿವೇಶನ:ಬಿಲ್ ಬಗ್ಗೆ ಸ್ಪೀಕರ್ ಕಾಗೇರಿ ಹೇಳಿದ್ದೇನು?
70,000 ಡಾಲರ್(53 ಲಕ್ಷ ರೂ)ನಿಂದ ಆರಂಭವಾದ ಹರಾಜು ಮೌಲ್ಯ ಕೊನೆಯಲ್ಲಿ 4,71,000 ಡಾಲರ್‌ಗೆ ತಲುಪಿದೆ. ಈ ಹಿಂದೆ ಹ್ಯಾರಿ ಪಾಟರ್‌ನ ಮೊದಲನೇ ಮುದ್ರಣ ಪುಸ್ತಕಗಳು 1,10,000 ಡಾಲರ್(8 ಲಕ್ಷ ರೂ.)ನಿಂದ 1,38,000 ಡಾಲರ್(10.44 ಲಕ್ಷ ರೂ)ಗೆ ಹರಾಜಾಗಿದ್ದವು ಎಂದು ತಿಳಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.