ಜನವರಿ ಎರಡನೇ ವಾರದಲ್ಲಿ ಐಪಿಎಲ್ ಮೆಗಾ ಹರಾಜು?
Team Udayavani, Dec 13, 2021, 5:30 AM IST
ಮುಂಬಯಿ: ಮುಂಬರುವ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೆ ಎಲ್ಲ ತಂಡಗಳು ಸಿದ್ದಗೊಂಡಿವೆ.
ಈಗಾಗಲೇ ಹಳೆಯ 8 ಫ್ರಾಂಚೈಸಿಗಳು ಒಟ್ಟು 27 ಆಟಗಾರರನ್ನು ಉಳಿಸಿಕೊಂಡಿವೆ. ನೂತನ ಎರಡು ಫ್ರಾಂಚೈಸಿಗಳು ತಲಾ 3 ಆಟಗಾರರನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಬಹುದು. ಇದಾದ ಬಳಿಕ ಮೆಗಾ ಹರಾಜು ನಡೆಸುವುದು ಬಿಸಿಸಿಐ ಯೋಜನೆ.
ಆದರೆ ಇದೀಗ ಹೊಸ ಫ್ರಾಂಚೈಸಿಗಳಿಗೆ ನೀಡಲಾದ ವಿಶೇಷ ಆಯ್ಕೆಯ ಅಂತಿಮ ದಿನಾಂಕವನ್ನು ಮುಂದೂಡುವ ಸಾಧ್ಯತೆಯೊಂದು ಗೋಚರಿಸಿದೆ. ಆಗ ಮೆಗಾ ಹರಾಜು ಕೂಡ ಮುಂದೂಡಲ್ಪಡುವುದು ಅನಿವಾರ್ಯವಾಗುತ್ತದೆ.
ಈ ಹಿಂದೆ ಬಿಸಿಸಿಐ ಹೊಸ ಫ್ರಾಂಚೈಸಿಗಳಿಗೆ ಮೂವರು ಆಟಗಾರರನ್ನು ಆಯ್ಕೆ ಮಾಡಲು ಡಿ. 25ರ ಗಡುವು ನೀಡಿತ್ತು. ಆದರೀಗ ಈ ಅವಕಾಶವನ್ನು ತಿಂಗಳ ಅಂತ್ಯದ ವರೆಗೆ ಮುಂದೂಡಿದೆ ಎಂದು ವರದಿಯಾಗಿದೆ. ಅದರಂತೆ ಜನವರಿ ಮೊದಲ ವಾರದಲ್ಲಿ ನಡೆಯಬೇಕಿದ್ದ ಮೆಗಾ ಹರಾಜನ್ನು ಕೂಡ ಒಂದು ವಾರ ಮುಂದೂಡಬೇಕಾಗುತ್ತದೆ. ಆಗ ಜನವರಿ 2ನೇ ವಾರದಲ್ಲಿ ಹರಾಜು ಏರ್ಪಡುವ ಸಾಧ್ಯತೆ ಇದೆ.
ಇದನ್ನೂ ಓದಿ:ಮಧ್ಯಪ್ರದೇಶದ 5 ಕಡೆ ಡ್ರೋನ್ ತಂತ್ರಜ್ಞಾನ ಶಾಲೆ: ಜ್ಯೋತಿರಾಧಿತ್ಯ ಸಿಂಧಿಯಾ
34 ಕೋಟಿ ರೂ. ಮೊತ್ತ
ನೂತನ ಎರಡು ಫ್ರಾಂಚೈಸಿಗಳು ತಲಾ ಮೂವರು ಆಟಗಾರರನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಲು ಬಿಸಿಸಿಐ ಕೆಲವು ಷರತ್ತುಗಳನ್ನು ವಿಧಿಸಿದೆ. ಅಂದರೆ 34 ಕೋಟಿ ರೋ. ಮೊತ್ತದ ಒಳಗೆ ಈ ಆಟಗಾರರನ್ನು ಆಯ್ಕೆ ಮಾಡಬೇಕಾಗುತ್ತದೆ. ಅದರಂತೆ ಮೊದಲ ಆಟಗಾರನಿಗೆ 15 ಕೋಟಿ ರೂ., 2ನೇ ಆಟಗಾರನಿಗೆ 11 ಕೋಟಿ ರೂ. ಹಾಗೂ 3ನೇ ಆಟಗಾರನಿಗೆ 8 ಕೋಟಿ ರೂ. ವ್ಯಯಿಸಬೇಕಾಗುತ್ತದೆ.
ಈ ಮೂಲಕ ಈಗಾಗಲೇ ಹಳೆಯ ಫ್ರಾಂಚೈಸಿಗಳು ರಿಲೀಸ್ ಮಾಡಿರುವ ಇಬ್ಬರು ಭಾರತೀಯ ಆಟಗಾರರು ಪ್ಲಸ್ ಒಬ್ಬ ವಿದೇಶಿ ಆಟಗಾರನನ್ನು ನೂತನ ತಂಡಕ್ಕೆ ಆಯ್ಕೆ ಮಾಡಿಕೊಳ್ಳಬಹುದು. ಈ ಆಯ್ಕೆ ಪ್ರಕ್ರಿಯೆಗೆ ಹೊಸ ಫ್ರಾಂಚೈಸಿಗಳು ಹೆಚ್ಚಿನ ಸಮಯಾವಕಾಶ ಕೇಳಿವೆ. ಹೀಗಾಗಿ ಮೆಗಾ ಹರಾಜು ಪ್ರಕ್ರಿಯೆ ಸಹಜವಾಗಿಯೇ ಮುಂದೂಡಲ್ಪಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.