ಮುಂಬಯಿಯಲ್ಲಿ ಒಮಿಕ್ರಾನ್ ಗೆದ್ದು ಖುಷಿಯಿಂದ ಮನೆಯತ್ತ ಹೆಜ್ಜೆಯಿಟ್ಟ ಜನ
17ರಲ್ಲಿ 9 ಜನ ಡಿಸ್ಚಾರ್ಜ್
Team Udayavani, Dec 13, 2021, 6:20 AM IST
ಮುಂಬಯಿ: ಮುಂಬಯಿಯ ನಾನಾ ಆಸ್ಪತ್ರೆಗಳಲ್ಲಿ ಇತ್ತೀಚೆಗೆ ದಾಖಲಾಗಿದ್ದ 17 ಒಮಿಕ್ರಾನ್ ರೋಗಿಗಳಲ್ಲಿ 9 ಮಂದಿ ಚೇತರಿಸಿಕೊಂಡಿದ್ದು, ಅವರೆಲ್ಲರೂ ರವಿವಾರ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಎಲ್ಲ ರೋಗಿಗಳಲ್ಲಿ ಕೆಲವರಿಗೆ ಕೊರೊನಾದ ಯಾವುದೇ ಗುಣಲಕ್ಷಣಗಳು ಕಾಣಿಸಿರಲಿಲ್ಲ. ಕೆಲವರಲ್ಲಿ ಅಲ್ಪ ಪ್ರಮಾಣದ ಗುಣಲಕ್ಷಣಗಳು ಕಾಣಿಸಿದ್ದವು. ಆದರೆ ಎಲ್ಲರಲ್ಲೂ ಒಮಿಕ್ರಾನ್ ರೂಪಾಂತರಿ ಪತ್ತೆಯಾಗಿ ದ್ದರಿಂದ ಅವರನ್ನು ಚಿಕಿತ್ಸೆಗೊಳಪಡಿ ಸಲಾಗಿತ್ತು.
ಇದೇ ವೇಳೆ ಒಮಿಕ್ರಾನ್ ರೂಪಾಂತರಿಯನ್ನು ಹಗುರವಾಗಿ ಪರಿಗಣಿಸದೇ ಇರುವಂತೆ ತಜ್ಞರು ಎಚ್ಚರಿಸಿದ್ದಾರೆ. ಇದೇ ಕಾರಣ ದಿಂದಾಗಿ, ಮುಂಬಯಿಯ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಹೊಸದಾಗಿ 40 ಒಮಿಕ್ರಾನ್ ಶಂಕಿತರು ದಾಖಲಾಗಿದ್ದಾರೆ. ಬಾಂಬೆ ಆಸ್ಪತ್ರೆಯಲ್ಲಿ ಶನಿವಾರ ಮತ್ತಿಬ್ಬರು ದಾಖಲಾಗಿದ್ದಾರೆ. ಇದೆಲ್ಲವೂ ನಿರ್ಲಕ್ಷ್ಯತೆಯಿಂದ ಆಗುತ್ತಿದ್ದು ಜನರು ಎಚ್ಚರಿಕೆಯಿಂದ ಇರಬೇಕೆಂದು ತಜ್ಞರು ಎಚ್ಚರಿಸಿದ್ದಾರೆ.
ಬೂಸ್ಟರ್ ಡೋಸ್ ಬೇಡ: ಇದೇ ವೇಳೆ, ಎರಡು ಲಸಿಕೆ ಪಡೆದ ಭಾರತೀಯರು ಮೂರನೇ ಲಸಿಕೆ ಪಡೆಯುವ ಆವಶ್ಯಕತೆಯೇನಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನ ಕೌನ್ಸಿಲ್ (ಐಸಿಎಂಆರ್) ತಿಳಿಸಿದೆ. ಅಲ್ಲದೆ ಒಮಿಕ್ರಾನ್ ಭೀತಿಯಿಂದ ಮೊದಲ ಹಾಗೂ ಎರಡನೇ ಲಸಿಕೆಗಳ ನಡುವಿನ ಅಂತರವನ್ನು ತಗ್ಗಿಸುವ ಆವಶ್ಯಕತೆ ಯೇನಿಲ್ಲ. ಹಾಗಾಗಿ ಈಗ ಚಾಲ್ತಿಯಲ್ಲಿರುವ ಲಸಿಕಾ ಅಂತರವನ್ನೇ ಪಾಲಿಸಿದರೆ ಸಾಕು, ಜತೆಗೆ ಕೊರೊನಾ ನಿರ್ಬಂಧಗಳನ್ನೂ ಪಾಲಿಸಬೇಕು ಎಂದು ಐಸಿಎಂಆರ್ ತಜ್ಞರು ತಿಳಿಸಿದ್ದಾರೆ.
ಯಾವ ತೊಂದರೆಯೂ ಇಲ್ಲ: ಡಾ| ಪೂನಂ: “ಇಡೀ ವಿಶ್ವದಲ್ಲಿ ಹೊಸ ಆತಂಕ ಸೃಷ್ಟಿಸಿರುವ ಕೊರೊನಾದ ಹೊಸ ರೂಪಾಂತರಿಯಾದ ಒಮಿಕ್ರಾನ್, ಖಂಡಿತ ವಾಗಿಯೂ ಯಾವುದೇ ಮಾರಣಾಂತಿಕ ತೊಂದರೆ ಉಂಟು ಮಾಡುವುದಿಲ್ಲ. ಆದರೆ ದಕ್ಷಿಣ ಏಷ್ಯಾದಲ್ಲಿ ಇದು ವೇಗವಾಗಿ ಹರಡುವ ಸಾಧ್ಯತೆ ದಟ್ಟವಾಗಿದ್ದು, ಎಲ್ಲರೂ ಹೆಚ್ಚಿನ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಬೇಕು’ ಎಂದು ವಿಶ್ವಸಂಸ್ಥೆಯ ಆಗ್ನೇಯ ಏಷ್ಯಾದ ಪ್ರಾಂತೀಯ ನಿರ್ದೇಶಕಿ ಡಾ| ಪೂನಂ ಖೇತ್ರಪಾಲ್ ತಿಳಿಸಿದ್ದಾರೆ. ಇದೇ ವೇಳೆ, ಭಾರತದಲ್ಲಿ ಕೊರೊನಾ ಮೂರನೇ ಅಲೆ ಬರುವುದು ಬಹುತೇಕ ಅಸಾಧ್ಯ ಎಂದು ಅಭಯ ನೀಡಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಜನರು ಭೀತಿಗೊಳ್ಳುವ ಅಗತ್ಯವಿಲ್ಲ.
ಇದನ್ನೂ ಓದಿ:ಜಮ್ಮು ಸರ್ಕಾರದ ವಿರುದ್ಧ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕಿಡಿ
ಈವರೆಗೆ ಇದರ ಸೋಂಕು ಕಾಣಿಸಿಕೊಂಡಿರುವವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಯಾರ ಪರಿಸ್ಥಿತಿಯೂ ವಿಷಮ ಸ್ಥಿತಿಗೆ ಹೋಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಕೊವಿ ಶೀಲ್ಡ್ ಬೂಸ್ಟರ್ ಡೋಸ್ ಪರಿಣಾಮಕಾರಿ
ಕೋವಿಶೀಲ್ಡ್‌ನ ಮೂರನೇ ಬೂಸ್ಟರ್ ಡೋಸ್, ಒಮಿಕ್ರಾನ್ ವಿರುದ್ಧ ಸೂಕ್ತ ರಕ್ಷಣೆ ನೀಡುತ್ತದೆ ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ ಎಂದು ಯುನೈಟೆಡ್ ಕಿಂಗ್‌ಡಂನ ವಿಜ್ಞಾನಿಗಳು ತಿಳಿಸಿದ್ದಾರೆ. ಅಧ್ಯಯನದಲ್ಲಿ, ಬೂಸ್ಟರ್ ಡೋಸ್‌ನಿಂದಾಗಿ ವ್ಯಕ್ತಿಗಳಲ್ಲಿನ ಕೊರೊನಾ ನಿರೋಧಕ ಶಕ್ತಿ, ಶೇ. 70ರಿಂದ 75ರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕ್ರಿಸ್ಮಸ್ ಹಬ್ಬ ಹಿನ್ನೆಲೆ:
ತಜ್ಞರಿಂದ ಎಚ್ಚರಿಕೆ
ಕ್ರಿಸ್ಮಸ್ ಹಬ್ಬ ಸಮೀಪಿಸುತ್ತಿರುವಂತೆಯೇ ಐರೋಪ್ಯ ರಾಷ್ಟ್ರಗಳಲ್ಲಿ ಒಮಿಕ್ರಾನ್ ವ್ಯಾಪಕವಾಗಿ ಹರಡುವ ಭೀತಿ ಆವರಿಸಿದೆ. ಹಾಗಾಗಿ ಅಲ್ಲಿನ ಹಲವಾರು ರಾಷ್ಟ್ರಗಳಲ್ಲಿ ಕೊರೊನಾ ನಿರ್ಬಂಧಗಳನ್ನು ಜಾರಿಗೊಳಿಸ ಲಾಗಿದ್ದು, ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.
ಐದು ಅನಾರೋಗ್ಯ: ಡಬ್ಲ್ಯುಎಚ್‌ಒ ಸೂಚನೆ
ಸಾಮಾನ್ಯವಾಗಿ ಒಮಿಕ್ರಾನ್ ಸೋಂಕು ಉಂಟಾದಾಗ ಮೊದಲ ಲಕ್ಷಣವಾಗಿ ಜ್ವರ ಕಾಣಿಸಿಕೊಳ್ಳುತ್ತದೆ. ಉಸಿರು ತೆಗೆದು ಕೊಳ್ಳಲೂ ಕಷ್ಟವಾಗುವಷ್ಟರ ಮಟ್ಟಿಗೆ ಸತತ ಕೆಮ್ಮು ಕಾಣಿಸಿಕೊಳ್ಳಬಹುದು. ಇಲ್ಲದಿದ್ದರೆ ಎದೆ ನೋವು, ರಕ್ತದಲ್ಲಿನ ಆಮ್ಲಜನಕದ ಮಟ್ಟ ಇಳಿಕೆಯಾಗು ವುದು ಇತ್ಯಾದಿಗಳು ಕಾಣಿಸಿಕೊಳ್ಳುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಬಿಡುಗಡೆ ಮಾಡಲಾಗಿರುವ ಒಮಿಕ್ರಾನ್ ಗುಣಲಕ್ಷಣಗಳ ಪರಿಷ್ಕೃತ ವರದಿಯಲ್ಲಿ ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…