2030ಕ್ಕೆ ಭಾರತದ್ದೇ ಬಾಹ್ಯಾಕಾಶ ಕೇಂದ್ರ


Team Udayavani, Dec 13, 2021, 10:12 AM IST

ಖಗೋಳ

ನವದೆಹಲಿ: ಬಾಹ್ಯಾಕಾಶ ಮತ್ತು ಉಪಗ್ರಹ ಕ್ಷೇತ್ರಗಳಲ್ಲಿ ಇಸ್ರೋ ಇದುವರೆಗೆ ಸಾಧಿಸಿದ ಸಾಧನೆ ಅಪಾರ. ಅಂಥ ಹೆಗ್ಗಳಿಕೆಯನ್ನು ಹೊಂದಿರುವ ಸಂಸ್ಥೆ 2030ರ ಒಳಗಾಗಿ ಬಾಹ್ಯಾಕಾಶ ಕೇಂದ್ರ ಸ್ಥಾಪನೆ ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಅದಕ್ಕಾಗಿ ದೇಶಿಯವಾಗಿಯೇ ಅಭಿವೃದ್ಧಿಗೊಳಿಸಲಾಗಿ ರುವ ತಂತ್ರಜ್ಞಾನ ಬಳಕೆ ಮಾಡಲೂ ಇಚ್ಛೆ ವ್ಯಕ್ತ ಪಡಿಸಿದೆ.

ಈ ಬಗ್ಗೆ ಪ್ರಧಾನಮಂತ್ರಿಗಳ ಕಚೇರಿಯಲ್ಲಿ ಸಹಾಯಕ ಸಚಿವ ಡಾ.ಜಿತೇಂದ್ರ ಸಿಂಗ್‌ ಅವರು ಇತ್ತೀಚೆಗೆ ರಾಜ್ಯಸಭೆಗೆ ನೀಡಿದ್ದ ಮಾಹಿತಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯ ಅಧ್ಯಕ್ಷ ಕೆ.ಶಿವನ್‌ ಕೂಡ 2019ರಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದುಂಟು. ಅವರು ಹೇಳಿದ್ದಂತೆ ನಮ್ಮ ವಿಜ್ಞಾನಿಗಳು ನಿರ್ಮಿಸಲಿರುವ ಬಾಹ್ಯಾಕಾಶ ಕೇಂದ್ರ 20 ಟನ್‌ ತೂಕ ಹೊಂದಿರಲಿದೆ.

ಭೂಮಿಯಿಂದ 400 ಕಿಮೀ ಎತ್ತರದಲ್ಲಿ ಇರುವ ಕಕ್ಷೆಯಲ್ಲಿ ಇರಲಿದೆ. ಗಗ ನ ಯಾ ತ್ರಿ ಗಳು 15-20 ದಿನಗಳ ಕಾಲ ಬಾಹ್ಯಾಕಾಶ ಕೇಂದ್ರಗಳಲ್ಲಿ ಇರಲಿದ್ದಾರೆ ಎಂದು ತಿಳಿಸಿದ್ದರು. 2023ರಲ್ಲಿ ಗಗನಯಾನ ಕೈಗೊಂಡ ಬಳಿಕ ಐದರಿಂದ- ಏಳು ವರ್ಷಗಳ ಒಳಗಾಗಿ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದರು. 2023ಕ್ಕೆ ಗಗನಯಾನ: ಕೇಂದ್ರ ಸರ್ಕಾರ ಮತ್ತು ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಮಾನವ ಸಹಿತ ಗಗನಯಾನವನ್ನು 2023ರಲ್ಲಿ ಕೈಗೆತ್ತಿಕೊಳ್ಳಲು ಈಗಾಗಲೇ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

ಇದನ್ನೂ ಓದಿ;- ರಸ್ಸೆಲ್ ವೈಫರ್ – ಹಾವಿನ ಮರಿಗಳ ರಕ್ಷಣೆ

ಅದೇ ವರ್ಷ ಶುಕ್ರ ಗ್ರಹದ ಅಧ್ಯಯನಕ್ಕೆ ಸಂಬಂಧಿಸಿದ ಯೋಜನೆಯನ್ನೂ ಜಾರಿಗೊಳಿಸಲು ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ. ಎಲ್‌-1 ಆದಿತ್ಯ ಸೋಲಾರ್‌ ಮತ್ತು ಚಂದ್ರ ಯಾನ-3ನ್ನು 2022-23ನೇ ಸಾಲಿನಲ್ಲಿ ಕೈಗೆತ್ತಿಕೊಳ್ಳುವ ಬಗ್ಗೆಯೂ ಇಸ್ರೋ ಈಗಾಗಲೇ ಹಲವು ಸಿದ್ಧತೆಗಳನ್ನು ಮಾಡಿಕೊಂಡಿದೆ. ಐಎಸ್‌ಎಸ್‌ ಎಂದರೇನು?: ಅಂತಾರಾಷ್ಟ್ರೀಯ ಬಾಹ್ಯಾ ಕಾಶ ನಿಲ್ದಾಣ (ಐಎಸ್‌ಎಸ್‌)ವೆನ್ನುವುದು ಬಹುರಾಷ್ಟ್ರಗಳು ಒಟ್ಟಾಗಿ ಬಾಹ್ಯಾಕಾಶದಲ್ಲಿ ನಿರ್ಮಿಸುವ ಪ್ರಯೋಗಾಲಯ.

ಭೂಮಿಯಿಂದ ಸುಮಾರು 370-460 ಕಿ.ಮೀ ದೂರದ ಕಕ್ಷೆಯಲ್ಲಿ ಈ ನಿಲ್ದಾಣ ತಿರುಗುತ್ತಿರುತ್ತದೆ. ಬಹುರಾಷ್ಟ್ರಗಳ ಗಗನಯಾತ್ರಿಗಳು ಹಲವು ಬಾರಿ ಬಾಹ್ಯಾಕಾಶಕ್ಕೆ ತೆರಳಿ, ಅಲ್ಲಿ ನಿಲ್ದಾಣ ನಿರ್ಮಿಸಿದ್ದಾ ರೆ. ಸುಮಾರು ಒಂದು ಫ‌ುಟ್ಬಾಲ್‌ ಕ್ರೀಡಾಂಗಣದಷ್ಟು ದೊಡ್ಡದಾಗಿ ನಿರ್ಮಿಸ ಲಾಗಿರುವ ಈ ನಿಲ್ದಾಣದಲ್ಲಿ ಅನೇಕ ರೀತಿಯ ಪ್ರಯೋಗ ಗಳನ್ನು ನಡೆಸಲಾಗುತ್ತದೆ. ಬಾಹ್ಯಾಕಾಶ ನಿಲ್ದಾಣವು 92.68 ನಿಮಿಷದಲ್ಲಿ ಪೂರ್ತಿ ಭೂಮಿಯನ್ನು ಒಂದು ಸುತ್ತು ಸುತ್ತುತ್ತದೆ. ಇದರ ವೇಗ ಗಂಟೆಗೆ 28 ಸಾವಿರ ಕಿಲೋ ಮೀಟರ್‌. ಅಮೆರಿಕವು ತನ್ನ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ವ್ಯಾವಹಾರಿಕಗೊಳಿಸಿದ್ದು, ಖಾಸಗಿ ಗಗನಯಾತ್ರಿಗಳಿಗೂ ನೀಡಿದೆ.

ಬೆರಳೆಣಿಕೆಯ ರಾಷ್ಟ್ರಗಳು

ಬಾಹ್ಯಾಕಾಶ ಕೇಂದ್ರ ಸ್ಥಾಪನೆ ಮಾಡಿರುವ ರಾಷ್ಟ್ರಗಳ ಸಂಖ್ಯೆ ಜಗತ್ತಿನಲ್ಲಿ ಬೆರಳೆಣಿಕೆಯಲ್ಲಿ ಇವೆ. ಕೆನಡಾ, ಜಪಾನ್‌, ರಷ್ಯಾ, ಅಮೆರಿಕ ಸೇರಿಕೊಂಡು ಒಂದು ಬಾಹ್ಯಾ ಕಾಶ ನಿಲ್ದಾಣ ಸ್ಥಾಪನೆ ಮಾಡಿಕೊಂಡಿವೆ. ಐರೋಪ್ಯ ಒಕ್ಕೂಟದ ಒಕ್ಕೂಟದ ಹನ್ನೊಂದು ರಾಷ್ಟ್ರಗಳಾಗಿರುವ ಬೆಲ್ಜಿಯಂ, ಡೆನ್ಮಾರ್ಕ್‌, ಫ್ರಾನ್ಸ್‌, ಜರ್ಮನಿ, ಇಟೆಲಿ, ನೆದರ್ಲೆಂಡ್‌, ನಾರ್ವೆ, ಸ್ಪೇನ್‌, ಸ್ವೀಡನ್‌, ಸ್ವಿಜರ್ಲೆಂಡ್‌ ಮತ್ತು ಯುನೈಟೆಡ್‌ ಕಿಂಗ್‌ಡಮ್‌ ಈ ನಿಟ್ಟಿನಲ್ಲಿ ಕೈಜೋಡಿಸಿವೆ.

ಟಾಪ್ ನ್ಯೂಸ್

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.