ಅಭ್ಯರ್ಥಿಗಳ ಹುಡುಕಾಟದಲ್ಲಿ ಸೋತ ಮತದಾರ!
Team Udayavani, Dec 13, 2021, 10:58 AM IST
ನೆಲಮಂಗಲ: ತಾಲೂಕಿನಲ್ಲಿ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯ ಅಬ್ಬರ ಜೋರಾಗಿದ್ದರೂ 141 ಅಭ್ಯರ್ಥಿಗಳು ಕಣದಲ್ಲಿರುವ ಪರಿಣಾಮ ಮತ ದಾರರು ಬೇಸರಗೊಂಡರೂ ಶೇ.80 ಮತದಾನ ಮಾಡಿದ್ದಾರೆ. ತಾಲೂಕಿನಲ್ಲಿ ಒಟ್ಟಾರೆ 2898 ಮತದಾರರಿದ್ದು, ನಗರದ ಸರಕಾರಿ ಪದವಿಪೂರ್ವಕಾಲೇಜು ಆವರಣ ದಲ್ಲಿ 6ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿತ್ತು.
ಒಬ್ಬ ಮತದಾರನಿಗೆ 15 ಅಭ್ಯರ್ಥಿಗಳಿಗೆ ಮತದಾನ ಮಾಡುವ ಅವಕಾಶ ಇತ್ತು. ತಾಲೂಕಿನ ಎಲ್ಲಾ ಮತ ದಾರರು ನಗರದಲ್ಲಿನ ಮತಕೇಂದ್ರದಲ್ಲಿಯೇ ಮತ ದಾನ ಮಾಡಲು ಅವಕಾಶವಿದ್ದ ಪರಿಣಾಮ ಜನಸಾಂದ್ರತೆ ಹೆಚ್ಚಾಗಿತ್ತು. ಚುನಾವಣೆಯ ಸ್ಥಳದಲ್ಲಿ 10ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿತ್ತು.
ಇದನ್ನೂ ಓದಿ:- ಭಾರತದಲ್ಲಿ 24 ಗಂಟೆಗಳಲ್ಲಿ 7,350 ಕೋವಿಡ್ ಪ್ರಕರಣ ಪತ್ತೆ, 7,973 ಮಂದಿ ಗುಣಮುಖ
ಬೆಳಗ್ಗೆ 7ರಿಂದ ಆರಂಭವಾದ ಚುನಾವಣೆ ಸಂಜೆ 5ಗಂಟೆಗೆ ಮುಕ್ತಾ ಯವಾಗಿದ್ದು ಬೆಳಗ್ಗೆ 11ಗಂಟೆ ಸುಮಾರಿಗೆ 350 ಜನ ಮತದಾನ ಮಾಡಿದರೇ 4ಗಂಟೆ ಸುಮಾರಿಗೆ 2260 ಜನ ಮತದಾನ ಮಾಡುವ ಮೂಲಕ ನಿರ್ದೇಶಕರ ಆಯ್ಕೆಗೆ ಮುಂದಾದರು. ಮತಗಟ್ಟೆಗಳನ್ನು ಬೆಂಗಳೂರಿನ ಪೂರ್ಣಪ್ರಜ್ಞಾ ಪಿಯು ಕಾಲೇಜಿಗೆ ಸ್ಥಳಾಂತರಿಸಲಾಗುತ್ತದೆ ಎಂದು ಕ್ಲಸ್ಟರ್ ಅಧಿಕಾರಿ ಆರ್.ರಾಮಾಂಜನೇಯ ತಿಳಿಸಿದರು.
ನಿಯಮಕ್ಕೆ ಎಳ್ಳುನೀರು: ಕೊರೊನಾ ಆತಂಕದಲ್ಲಿ ಎಚ್ಚರಿಕೆ ವಹಿಸಲು ಸರ್ಕಾರ ಆದೇಶ ನೀಡಿದ್ದರೂ ಒಕ್ಕಲಿಗರ ಚುನಾವಣೆಯಲ್ಲಿ ಮತದಾರರು ಹಾಗೂ ಪ್ರಚಾರ ಮಾಡುತ್ತಿದ್ದವರು ಮಾಸ್ಕ್, ಸಾಮಾಜಿಕ ಅಂತರ, ಕೊರೊನಾ ನಿಯಮ ಸಂಪೂರ್ಣವಾಗಿ ಮರೆತಿದ್ದರು.
ಕೆಲವು ಅಭ್ಯರ್ಥಿಗಳು, ಬೆಂಬಲಿಗರು ಮತಕೇಂದ್ರದ ಸಮೀಪ ಪ್ರಚಾರ ಮಾಡಿದರೂ ಈ ಬಗ್ಗೆ ತಾಲೂಕಿನಲ್ಲಿ ನೇಮಕ ಮಾಡಲಾಗಿದ್ದ ಕ್ಲಸ್ಟರ್ ಅಧಿಕಾರಿಗಳು ಕಂಡರೂ ಕಾಣದಂತೆ ಸುಮ್ಮನಿದ್ದರು.
ಗೊಂದಲದಲ್ಲಿ ಮತದಾರರು: ಬೆಂಗಳೂರು ಗ್ರಾಮಾಂತರ, ಬೆಂಗಳೂರು, ರಾಮನಗರ ಹಾಗೂ ಕೃಷ್ಣಗಿರಿ ಜಿಲ್ಲೆಗಳಲ್ಲಿ ರಾಜ್ಯ ಒಕ್ಕಲಿಗರ ಸಂಘದ 15 ನಿರ್ದೇಶಕರ ಸ್ಥಾನದ ಆಯ್ಕೆಗೆ ಚುನಾವಣೆ ನಡೆ ದಿದ್ದು, 141ಅಭ್ಯರ್ಥಿಗಳು ಸ್ಪರ್ಧೆ ಮಾಡಿರುವ ಪರಿಣಾಮ ಮತದಾರರು ಬ್ಯಾಲೇಟ್ ಪೇಪರ್ ನೋಡು ತ್ತಿದಂತೆ ಗಾಬರಿಯಾಗಿದ್ದರು. ಕೆಲವರು ಗೊಂದಲ ದಲ್ಲಿ ಮತಚಲಾವಣೆ ಮಾಡಿದರೇ, ಕೆಲವರು ಪೇಪರ್‌ಗಳಲ್ಲಿ ನಂಬರ್ ಬರೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಚಾಪೆಯಂತೆ ಇದ್ದ ಬ್ಯಾಲೇಟ್ ಪೇಪರ್‌ನಲ್ಲಿ ಗೊಂದಲದಿಂದ ಜನರು 15ಕ್ಕೂ ಹೆಚ್ಚು ಮತಗಳನ್ನು ಹಾಕಿರುವ ಮಾತುಗಳು ಕೇಳಿಬಂದಿದೆ. ನೆಚ್ಚಿನ ಅಭ್ಯರ್ಥಿಗಳ ಹುಡುಕಾಟದಲ್ಲಿ ಸಮಯ ಸಾಲದೇ ಸಿಕ್ಕವರಿಗೆ ಮತಚಲಾವಣೆ ಮಾಡಿರುವ ಮಾತುಗಳು ಮತದಾರರಿಂದ ಕೇಳಿಬಂತು.
ಎಂಎಲ್‌ಸಿ ಚುನಾವಣೆಗಿಂತ ಭರ್ಜರಿ: ಡಿ.10ರಂದು ನಡೆದ ವಿಧಾನಪರಿಷತ್ ಚುನಾವಣೆಗಿಂತ ಭರ್ಜರಿ ಪ್ರಚಾರ ಹಾಗೂ ಮತದಾನ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ನಡೆದಿದ್ದು, ಒಂದು ಸಂಘದ ಚುನಾವಣೆ ಈ ಮಟ್ಟದಲ್ಲಿ ನಡೆದಿ ರುವುದು ಆಶ್ಚರ್ಯ ಎಂಬುದು ಸಾರ್ವಜನಿಕ ಅಭಿ ಪ್ರಾಯ. ತಾಲೂಕಿನಲ್ಲಿ ಕಡಿಮೆ ಮತದಾರರಿದ್ದರು ಗ್ರಾಮ ಗ್ರಾಮಗಳಲ್ಲಿ ಕೆಲವು ಅಭ್ಯರ್ಥಿಗಳು ಪ್ರಚಾರ ಮಾಡಿರುವುದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಮಾದಕವಸ್ತು ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
Bengaluru: ಸೆಂಟ್ರಿಂಗ್ ಮರ ಬಿದ್ದು ಬಾಲಕಿ ಸಾವು: ಎಂಜಿನಿಯರ್ ವಶಕ್ಕೆ
Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Horoscope: ಈ ರಾಶಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ
Karnataka: ವಿದ್ಯುತ್ ದರದಂತೆ ವರ್ಷವೂ ಬಸ್ ಯಾನ ದರ ಹೆಚ್ಚಳ?
Dispute: ಚಿಕ್ಕಮಗಳೂರಲ್ಲಿ ತಾರಕಕ್ಕೇರಿದ ದರ್ಗಾ ವಿವಾದ: ಬಿಗು ಪರಿಸ್ಥಿತಿ
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.