ತ್ಯಾಜ್ಯ ವಿಲೇವಾರಿಗೆ ಸಮಗ್ರ ಟೆಂಡರ್‌


Team Udayavani, Dec 13, 2021, 11:17 AM IST

garbej

ಬೆಂಗಳೂರು: ತ್ಯಾಜ್ಯ ಸಮಸ್ಯೆಗೆ ಈ ಬಾರಿ ತುಸು ಭಿನ್ನವಾಗಿ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿ ಎಂಪಿ), ಇಡೀ ನಗರದ ವಿವಿಧ ಪ್ರಕಾರದ ತ್ಯಾಜ್ಯವನ್ನು ಒಂದೇ ವೇದಿಕೆ ಅಡಿ ದಿನದ 24 ಗಂಟೆ ವಿಲೇವಾರಿ ಮಾಡುವ ವ್ಯವಸ್ಥೆ ಪರಿಚಯಿಸಲು ಉದ್ದೇಶಿಸಿದೆ.

ಈ ನಿಟ್ಟಿನಲ್ಲಿ “ಸಮಗ್ರ ಟೆಂಡರ್‌’ಗೆ ಚಿಂತನೆ ನಡೆಸಿದೆ. ನಗರದಲ್ಲಿ ನಿತ್ಯ ಬೆಳಗ್ಗೆ 10 ಗಂಟೆ ಹೊತ್ತಿಗೆ ಬಹುತೇಕ ಪ್ರದೇಶಗಳಲ್ಲಿ ಕಸ ವಿಲೇವಾರಿ ಆಗಿರುತ್ತದೆ. ಆದರೂ ಮಧ್ಯಾಹ್ನ 2 ಗಂಟೆ ವೇಳೆಗೆ ಅಲ್ಲಲ್ಲಿ ಮತ್ತೆ ಕಸದ ಗುಡ್ಡೆಗಳು ಉತ್ಪತ್ತಿಯಾಗಿರುತ್ತವೆ. ಈ ಮಧ್ಯೆ ಕಟ್ಟಡ ನಿರ್ಮಾಣ, ರಸ್ತೆಯಲ್ಲಿ ಸತ್ತುಬಿದ್ದ ಪ್ರಾಣಿಗಳು, ಇ-ತ್ಯಾಜ್ಯ, ಮರದ ರೆಂಬೆಗಳು, ಬೆಸ್ಕಾಂ ಮತ್ತು ಜಲಮಂಡಳಿ ರಸ್ತೆ ಅಗೆತ ಸೇರಿದಂತೆ ಹತ್ತಾರು ಪ್ರಕಾರದ ತ್ಯಾಜ್ಯ ಉತ್ಪತ್ತಿ ಆಗುತ್ತದೆ.

ಆದರೆ, ಅದರ ವಿಲೇವಾರಿ ಯಾವ ವಿಭಾಗ ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಹಾಗೊಂದು ವೇಳೆ ಇದ್ದರೂ ಅದು ಸಮರ್ಪಕವಾಗಿ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇದೆಲ್ಲವನ್ನೂ ಒಳಗೊಂಡ ಸಮಗ್ರ ಟೆಂಡರ್‌ ಆಹ್ವಾನಿಸಲು ಬಿಬಿಎಂಪಿ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಗಂಭೀರ ಯೋಚನೆ ನಡೆದಿದೆ. ಪ್ರಸ್ತುತ ಕೇವಲ ಎರಡು ಪ್ರಕಾರದ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಒಂದು- ಮನೆ ಮನೆಗೆ ತೆರಳಿ ಹಸಿತ್ಯಾಜ್ಯ ಸಂಗ್ರಹಿಸುವುದು.

ಇದನ್ನು ಟೆಂಡರ್‌ ಮೂಲಕ ಗುತ್ತಿಗೆದಾರರಿಗೆ ನೀಡಲಾಗಿದೆ. ಒಂದು ವರ್ಷದ ಈ ಗುತ್ತಿಗೆ ಅವಧಿ ಪೂರ್ಣಗೊಳ್ಳುತ್ತಿದ್ದು, ಈಗ ನಿಗದಿಪಡಿಸಿರುವ ಮೊತ್ತದಲ್ಲಿ ಕಸ ವಿಲೇವಾರಿ ಅಸಾಧ್ಯ ಎಂದು ಗುತ್ತಿಗೆದಾರರು ಬಿಬಿಎಂಪಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮತ್ತೂಂದು ಸ್ವಯಂ ಸೇವಾ ಸಂಸ್ಥೆಗಳು ಮನೆ ಮನೆಯಿಂದ ಒಣಕಸ ಸಂಗ್ರಹಿಸುತ್ತಿದ್ದಾರೆ. ಆದರೆ, ಇದು ಬಹುತೇಕ ಕಡೆ ಸಮರ್ಪಕವಾಗಿ ಆಗುತ್ತಿಲ್ಲ.

ಈ ಮಧ್ಯೆ ಬೆಳಗ್ಗೆ 10 ಗಂಟೆಗಾಗಲೇ ನಗರದಲ್ಲಿ ಕಸ ವಿಲೇವಾರಿ ಪ್ರಕ್ರಿಯೆ ಮುಗಿದಿರುತ್ತದೆ. ಆದರೆ, ಕೆಲವು ಪ್ರದೇಶಗಳಲ್ಲಿ ಜನ ತಡವಾಗಿ ಏಳುತ್ತಾರೆ. ಅಷ್ಟೊತ್ತಿಗೆ ಕಸದ ವಾಹನ ಬಂದುಹೋಗಿರುತ್ತದೆ. ಹಾಗಾಗಿ, ಅಲ್ಲಲ್ಲಿ ಬಿಸಾಕುವುದು ಕಂಡುಬರುತ್ತಿದೆ. ಇದರಿಂದ ನಗರದ ಅಂದ ಕೆಲವೇ ಗಂಟೆಗಳಲ್ಲಿ ಹಾಳಾಗಿರುತ್ತದೆ. “ಗಾರ್ಬೆಜ್‌ ಸಿಟಿ’ಯಂತೆ ಕಾಣುತ್ತದೆ. ಇದರಿಂದ ಬಿಬಿಎಂಪಿಯು ಜನರ ಮತ್ತು ಕೆಲ ಸಂಘ-ಸಂಸ್ಥೆಗಳ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಇದೆಲ್ಲದರಿಂದ ಪಾರಾಗಲು ಸಮಗ್ರ ಟೆಂಡರ್‌ ಮೊರೆಹೋಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

ನಗರದಲ್ಲಿ ಎಷ್ಟು ಮನೆಗಳಿವೆ? ಎಷ್ಟು ಕಸದ ವಾಹನಗಳಿವೆ? ಲಭ್ಯವಿರುವ ವಾಹನಗಳು ಮತ್ತು ಪ್ರಸ್ತುತ ವೆಚ್ಚದಲ್ಲಿ ಹಲವು ಬಾರಿ ಕಸ ವಿಲೇವಾರಿ ಸಾಧ್ಯವೇ? ಹಾಗೊಂದು ವೇಳೆ ಹೆಚ್ಚಳವಾಗುತ್ತಿದ್ದರೆ, ಅದಕ್ಕೆ ತಗಲುವ ವೆಚ್ಚ ಎಷ್ಟು? ಇಡೀ 198 ವಾಡ್‌ ìಗಳಿಗೆ ಒಂದು ಟೆಂಡರ್‌ ಕರೆಯುವುದಾ ಅಥವಾ ವಾರ್ಡ್‌ಗೊಂದು ಸಮಗ್ರ ಕಸ ವಿಲೇವಾರಿ ಟೆಂಡರ್‌ ಕರೆಯುವುದು ಸೂಕ್ತವೇ? ಈ ಎಲ್ಲ ಗೊಂದಲಗಳ ನಿವಾರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರಸ್ತಾವನೆ ತಯಾರಿಸಿ, ಸಾರ್ವಜನಿಕರು ಮತ್ತು ತಜ್ಞರ ಸಲಹೆಗಳನ್ನು ಪಡೆಯಲಾಗುವುದು. ನಂತರ ಸರ್ಕಾರಕ್ಕೆ ಕಳುಹಿಸ ಲಾಗುವುದು. ಅಲ್ಲಿಂದ ಸೂಕ್ತ ತೀರ್ಮಾನ ಆಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು

ಇನ್ನೂ ಚಿಂತನೆ ಹಂತ; ವಿಶೇಷ ಆಯುಕ್ತರು

“ಸಮಗ್ರ ಟೆಂಡರ್‌ ಇನ್ನೂ ಚಿಂತನೆ ಹಂತದಲ್ಲಿದೆ. ಇದರ ಉದ್ದೇಶ ದಿನದ 24 ಗಂಟೆ ನಗರವನ್ನು ಸ್ವತ್ಛವಾಗಿಡುವುದಾಗಿದೆ. ಈಗಿರುವ ವ್ಯವಸ್ಥೆಯಲ್ಲಿ ಕೆಲವು ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಇಲ್ಲ. ಉದಾಹರಣೆಗೆ ರಸ್ತೆಯಲ್ಲಿ ಒಂದು ನಾಯಿ ಸಾವನ್ನಪ್ಪಿದೆ ಅಂದುಕೊಳ್ಳೋಣ. ಬಿಬಿಎಂಪಿಗೆ ಕರೆ ಮಾಡಿದ ತಕ್ಷಣ, ಅವರಿಂದ ಸಂಬಂಧಪಟ್ಟವರಿಗೆ ಫೋನ್‌ ಹೋಗುತ್ತದೆ.

ಆತ ಅದರ ಫೋಟೋ ಮತ್ತು ತೆರವುಗೊಳಿಸಿದ ಫೋಟೋ ತೆಗೆದು, ಅಪ್‌ಲೋಡ್‌ ಮಾಡುತ್ತಾನೆ. ಆತನಿಗೆ ಹಣ ಕೂಡ ಪಾವತಿ ಆಗುತ್ತದೆ. ಇದೇ ರೀತಿ, ನಿರ್ಮಾಣ ಮತ್ತಿತರ ತ್ಯಾಜ್ಯವೂ ಇರುತ್ತದೆ. ಅದಕ್ಕೆ ಬೇರೆ ಬೇರೆ ವಿಂಗ್‌ಗಳೂ ಇವೆ. ಇದೆಲ್ಲವನ್ನೂ ಒಂದೇ ಟೆಂಡರ್‌ನಲ್ಲಿ ತಂದರೆ ಉತ್ತಮ ಎಂಬ ಯೋಚನೆ ಇದೆ’ ಎಂದು ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಡಾ.ಕೆ. ಹರೀಶ್‌ ಕುಮಾರ್‌ ತಿಳಿಸಿದರು.

ತಿಂಗಳಿಗೆ 40 ಕೋಟಿ ಖರ್ಚು

ನಗರದಲ್ಲಿ ಪ್ರಸ್ತುತ ನಿತ್ಯ 4,500 ಟನ್‌ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದರ ವಿಲೇವಾರಿಗೆ ಪ್ರತಿ ತಿಂಗಳು 40 ಕೋಟಿ ರೂ. ಖರ್ಚು ಆಗುತ್ತಿದೆ! ಉತ್ಪತ್ತಿಯಾಗುವ ಕಸದಲ್ಲಿ ಶೇ. 60ರಷ್ಟು ಹಸಿ ಮತ್ತು 40ರಷ್ಟು ಒಣತ್ಯಾಜ್ಯ ಆಗಿದೆ. ಇದರಲ್ಲಿ ಶೇ. 5ರಷ್ಟು ಸ್ಯಾನಿಟರಿ ತ್ಯಾಜ್ಯವೂ ಇರುತ್ತದೆ. ಗುತ್ತಿಗೆ ಪಡೆದ ಏಜೆನ್ಸಿಗೆ ವಿಲೇವಾರಿಗೆ 40 ಕೋಟಿ ರೂ. ಪಾವತಿಸಲಾಗುತ್ತಿದೆ. ಇದರೊಂದಿಗೆ 122 ಒಣತ್ಯಾಜ್ಯ ಸಂಗ್ರಹ ಘಟಕಗಳಿದ್ದು, ಹಸಿರುದಳ, ಸಮರ್ಥನಂ, ಕೆಲವು ಸ್ವಸಹಾಯ ಸಂಘಗಳು ಸೇವೆ ರೂಪದಲ್ಲಿ ಇದನ್ನು ನಿರ್ವಹಣೆ ಮಾಡುತ್ತಿವೆ

800 ಬ್ಲಾಕ್‌ ಸ್ಪಾಟ್ ಗಳು

ನಗರಾದ್ಯಂತ ಸುಮಾರು 800 ಬ್ಲಾಕ್‌ ಸ್ಪಾಟ್‌ಗಳಿವೆ ಎಂದು ಗುರುತಿಸಲಾಗಿದೆ. 2015-16ರಲ್ಲಿ 2,500 ಬ್ಲಾಕ್‌ ಸ್ಪಾಟ್‌ಗಳಿದ್ದವು. ಹಂತ-ಹಂತವಾಗಿ ಅವುಗಳನ್ನು ಕಡಿತಗೊಳಿಸಿದ್ದು, ಪ್ರಸ್ತುತ 800ಕ್ಕೆ ಇಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • – ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

1

Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

CT RAVI 2

C T Ravi; ಸನಾತನ ಧರ್ಮ ಉಳಿದರೆ ದೇಶದ ಉಳಿವು

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.