ಮತಾಂತರ ನಿಷೇಧ ಕಾಯಿದೆ ಹಿಂದೆ ದುರುದ್ದೇಶವಿದೆ: ಸಿದ್ದರಾಮಯ್ಯ ವಿರೋಧ
Team Udayavani, Dec 13, 2021, 11:55 AM IST
ಸುವರ್ಣ ಸೌಧ (ಬೆಳಗಾವಿ): ಮತಾಂತರ ನಿಷೇಧ ಕಾಯಿದೆಯನ್ನು ಕೇವಲ ದುರುದ್ದೇಶದಿಂದ ತರಲು ಹೊರಟಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿ ಸುವರ್ಣ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಇಷ್ಟ ಪಟ್ಟ ಧರ್ಮ ಅನುಸರಿಸಲು ಅವಕಾಶ ನೀಡಲಾಗಿದೆ. ಆದರೆ ಯಾರನ್ನೂ ಬಲತ್ಕಾರವಾಗಿ ಮತಾಂತರ ಮಾಡಬಾರದು ಎಂದಿದೆ. ಹೀಗಿದ್ದರೂ ಈ ಕಾಯ್ದೆ ತರುವ ಅಗತ್ಯ ಏನಿದೆ? ಕಾಯ್ದೆ ಮಂಡನೆಯನ್ನ ನಾವು ವಿರೋಧಿಸುತ್ತೇವೆ ಎಂದರು.
ಕೇವಲ ಒಂದು ಸಮುದಾಯ ಪರವಾಗಿ ಕೈ ನಾಯಕರು ಮಾತನ್ನಾಡುತ್ತಿದ್ದಾರೆಂಬ ಬಿಜೆಪಿ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನಾವು ಕೇವಲ ಒಂದು ಸಮುದಾಯ, ಧರ್ಮದ ಪರ ಇದ್ದೇವೆಂಬುದು ಸರಿಯಲ್ಲ. ನಾವು ಎಲ್ಲರ ಪರವಾಗಿಯೂ ಇದ್ದೇವೆ. ಜಾತ್ಯಾತೀತತೆಯಲ್ಲಿ ನಂಬಿಕೆ ಇಟ್ಟವರು. ಎಲ್ಲರ ಪರವಾಗಿಯೂ ಮಾತನ್ನಾಡುತ್ತೇವೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.