ಮಾನವ ಹಕ್ಕುಗಳ ರಕ್ಷಣೆ ಎಲ್ಲರ ಜವಾಬ್ದಾರಿ
Team Udayavani, Dec 13, 2021, 12:16 PM IST
ಹಾವೇರಿ: ಮಾನವ ಹಕ್ಕುಗಳು ಪ್ರತಿ ವ್ಯಕ್ತಿಯ ಹುಟ್ಟಿನಿಂದಲೇ ಬರುತ್ತವೆ. ನಮ್ಮ ಹಕ್ಕುಗಳ ರಕ್ಷಣೆಜೊತೆಗೆ ಬೇರೆಯವರ ಹಕ್ಕುಗಳಿಗೆ ಧಕ್ಕೆ ಬಾರದಂತೆನಡೆದುಕೊಳ್ಳುವುದು ಪ್ರತಿಯೊಬ್ಬರ ಗುರುತರ ಜವಾಬ್ದಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಯಾದವ ವನಮಾಲಾ ಆನಂದರಾವ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ನ್ಯಾಯವಾದಿಗಳಸಂಘ, ಅಭಿಯೋಜನ ಇಲಾಖೆ ಹಾಗೂ ಜಿಲ್ಲಾವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.
ಮನುಷ್ಯನ ಘನತೆ, ಭದ್ರತೆ, ಸಮಾನತೆ ಮತ್ತು ಸ್ವಾತಂತ್ರ್ಯಕ್ಕೆ ಕುಂದು ಬಾರದಂತೆ ರಕ್ಷಿಸುವುದೇಮೂಲಭೂತ ಹಕ್ಕುಗಳ ಉದ್ದೇಶವಾಗಿದೆ. ಮಾನವಹಕ್ಕುಗಳು ನೈಸರ್ಗಿಕ ಹಕ್ಕುಗಳಾಗಿವೆ. ಎರಡುಮಹಾಯುದ್ಧಗಳಿಂದ ಉಂಟಾದ ಸಾವು-ನೋವುಗಳುಮುಂದೆಂದೂ ಮರುಕಳಿಸಬಾರದು ಎಂಬ ಹಿನ್ನೆಲೆಯಲ್ಲಿ1948ರಲ್ಲಿ ಮಾನವ ಹಕ್ಕುಗಳನ್ನು ವಿಶ್ವಸಂಸ್ಥೆ ಘೋಷಿಸಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾತನಾಡಿ, ಒಬ್ಬ ಮನುಷ್ಯನ ಸಂಪೂರ್ಣ ಬೆಳವಣಿಗೆಗೆ ಮೂಲಭೂತ ಹಕ್ಕುಗಳುಅಗತ್ಯವಾಗಿವೆ. ಒಂದೊಂದು ಹಕ್ಕಿಗಾಗಿ ಎರಡು ಸಾವಿರ ನಿರಂತರ ಹೋರಾಟದಿಂದ ಮಾನವ ಹಕ್ಕುಗಳಪರಿಕಲ್ಪನೆ ಮೂಡಿಬಂದಿದೆ. ಅಲ್ಲದೇ, ಮೂಲಭೂತ ಹಕ್ಕುಗಳ ಸ್ಥಾಪನೆ ಮಾಡಲಾಗಿದೆ. ಭಾರತ ಸೇರಿದಂತೆಪ್ರಜಾಪ್ರಭುತ್ವ ಹಿನ್ನೆಲೆಯಿಂದ ಬಂದ 48 ರಾಷ್ಟ್ರಗಳು1948ರಲ್ಲಿ ಯುನೈಟೆಡ್‌ನಲ್ಲಿ ವೋಟ್ ಮಾಡುವಮೂಲಕ ಮಾನವ ಹಕ್ಕುಗಳನ್ನು ಅಂಗೀಕರಿಸಲಾಯಿತು.ಭಾರತದ ಸಂವಿಧಾನದಲ್ಲೂ ಸಹ ಮಾನವ ಹಕ್ಕುಗಳಿಗೆ ವಿಶೇಷ ಸ್ಥಾನ ನೀಡಲಾಗಿದೆ ಎಂದರು.
ಭಾರತದಲ್ಲಿ 1950ರಲ್ಲಿ ಸಂವಿಧಾನ ರಚಿಸಿ ಮೂಲಭೂತ ಹಕ್ಕುಗಳನ್ನು ನೀಡಲಾಯಿತು. ಈಮೊದಲು ಎಲ್ಲರಿಗೂ ಮತದಾನದ ಹಕ್ಕು ಇರಲಿಲ್ಲ.1950ರ ನಂತರ ಎಲ್ಲರಿಗೂ ಮತದಾನ ಮಾಡುವ ಹಕ್ಕುನೀಡಲಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಹಕ್ಕುಗಳಬಗ್ಗೆ ಅರಿವು ಅಗತ್ಯ. ಜೊತೆಗೆ ಮಾನವ ಹಕ್ಕುಗಳ ರಕ್ಷಣೆಮಾಡುವುದು ಎಲ್ಲರ ಹೊಣೆಯಾಗಿದೆ. ಈ ಕುರಿತಂತೆಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪೆನಲ್ ವಕೀಲರಾದ ಕೆ.ಎಲ್.ಅಂಗರಗಟ್ಟಿ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧಿಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದಸದಸ್ಯ ಕಾರ್ಯದರ್ಶಿಗಳಾದ ಪುಟ್ಟರಾಜು, ಜಿಪಂ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಮಹಮ್ಮದರೋಷನ್, ಅಪರ ಡಿಸಿ ಡಾ| ಎನ್.ತಿಪ್ಪೇಸ್ವಾಮಿ,ಡಿವೈಎಸ್‌ಪಿ ಶಂಕರ ಮಾರಿಹಾಳ, ಸರ್ಕಾರಿ ಹಿರಿಯ ಸಹಾಯಕ ಅಭಿಯೋಜಕರಾದ ಪ್ರಕಾಶ ಸುಂಕದ, ಜಿಲ್ಲಾ ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಐ.ಎಸ್.ನಂದಿ ಇದ್ದರು.ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ ಸ್ವಾಗತಿಸಿ, ಶಿಕ್ಷಕ ನಾಗರಾಜ ನಡುವಿನಮಠ ನಿರೂಪಿಸಿದರು.
ಮನುಷ್ಯನ ಘನತೆ, ಭದ್ರತೆ, ಸಮಾನತೆ ಮತ್ತು ಸ್ವಾತಂತ್ರ್ಯಕ್ಕೆ ಕುಂದು ಬಾರದಂತೆರಕ್ಷಿಸುವುದೇ ಮೂಲಭೂತ ಹಕ್ಕುಗಳಉದ್ದೇಶವಾಗಿದೆ. ಮಾನವ ಹಕ್ಕುಗಳು ನೈಸರ್ಗಿಕಹಕ್ಕುಗಳಾಗಿವೆ. ಎರಡು ಮಹಾಯುದ್ಧಗಳಿಂದಉಂಟಾದ ಸಾವು-ನೋವುಗಳು ಮುಂದೆಂದೂಮರುಕಳಿಸಬಾರದು ಎಂಬ ಹಿನ್ನೆಲೆಯಲ್ಲಿ1948ರಲ್ಲಿ ಮಾನವ ಹಕ್ಕುಗಳನ್ನು ವಿಶ್ವ ಸಂಸ್ಥೆಘೋಷಿಸಿದೆ. -ಯಾದವ ವನಮಾಲಾ ಆನಂದರಾವ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.