ಮೆಣಸಿನಕಾಯಿ ಬೆಳೆಗೆ ಮುರುಟು ರೋಗ ಬಾಧೆ


Team Udayavani, Dec 13, 2021, 12:24 PM IST

ಮೆಣಸಿನಕಾಯಿ ಬೆಳೆಗೆ ಮುರುಟು ರೋಗ ಬಾಧೆ

ರಾಣಿಬೆನ್ನೂರ: ತಾಲೂಕಿನ ಹನುಮನಮಟ್ಟಿಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಜಿಲ್ಲೆಯ ಕೋಣನತಂಬಗಿ ಗ್ರಾಮದ ಪ್ರಗತಿಪರ ರೈತ ಬೀರಪ್ಪಭರಮಪ್ಪ ರಿತ್ತಿಕುರಬರ ಅವರ ಮೆಣಸಿನಕಾಯಿ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ| ಅಶೋಕ ಪಿ. ಮಾತನಾಡಿ,ಇತ್ತೀಚಿನ ದಿನಗಳಲ್ಲಿ ಮೆಣಸಿನಕಾಯಿ ಬೆಳೆಗೆ ರೋಗ ಬಾಧೆಗಳು ಹೆಚ್ಚಾಗಿವೆ. ಈ ರೋಗಗಳಲ್ಲಿ ಮುರುಟುರೋಗ ಪ್ರಮುಖವಾಗಿದ್ದು, ಇದರಿಂದ ಇಳುವರಿಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಲಿದೆ.ರೈತರು ಈ ರೋಗಕ್ಕೆ ಪರಿಹಾರ ಕಾಣದ ಮೆಣಸಿನಕಾಯಿ ಬೆಳೆಯುವುದನ್ನು ತ್ಯಜಿಸಿ ಇತರ ಬೆಳೆಗಳನ್ನು ಬೆಳೆಯಲು ಆಸಕ್ತಿ ವಹಿಸುತ್ತಿದ್ದಾರೆ ಎಂದರು.

ಈ ರೋಗ ರಸ ಹೀರುವ ಕೀಟಗಳಾದ ಥ್ರಿಪ್ಸ್‌ ಕೀಟ ಹಾಗೂ ಮೈಟ್‌ ನುಸಿಯಿಂದ ಹರಡುತ್ತದೆ.ಥ್ರಿಪ್ಸ್‌ ರಸ ಹೀರುವ ಕೀಟ ನೋಡಲು ತಿಳಿ ಹಸಿರು ಬಣ್ಣದಾಗಿದ್ದು, ಅತೀ ಚಿಕ್ಕದಾಗಿರುತ್ತದೆ. ಈ ಕೀಟದರಸ ಹೀರುವಿಕೆಯಿಂದ ಎಲೆಗಳ ಅಂಚಿನಿಂದ ಒಳಮುದುರಿಕೊಳ್ಳುತ್ತವೆ. ಇದಕ್ಕೆ ಒಳಮುಟುರುರೋಗವೆಂದು ಕರೆಯುತ್ತಾರೆ. ಈ ಥ್ರಿಪ್ಸ್‌ ಕೀಟರಸ ಹೀರುವುದಲ್ಲದೆ ಹಲವಾರು ವಿವಿಧ ಬಗೆಯವೈರಸ್‌ (ನಂಜಾಣು)ಗಳನ್ನು ಎಲೆಗಳಲ್ಲಿ ಹರಡುತ್ತದೆ. ಹಲವಾರು ಬಗೆಯ ವೈರಸ್‌ಗಳಲ್ಲಿ ಟಾನ್ಪೊವೈರಸ್‌ ಪ್ರಮುಖವಾಗಿದೆ. ಇದರಿಂದಾಗಿ ಎಲೆಗಳಮಧ್ಯಭಾಗಗಳಲ್ಲಿ ತಗ್ಗುಗಳು ಕಾಣಿಸಿಕೊಳ್ಳುತ್ತವೆ. ಈಕೀಟದ ಹಾವಳಿ ಹಾಗೂ ವೈರಸ್‌ ಬಾಧೆ ತೀವ್ರವಾದಾಗಎಲೆಗಳು ಗಾತ್ರದಲ್ಲಿ ಅತೀ ಚಿಕ್ಕದಾಗಿ ಹಳದಿ ಬಣ್ಣಕ್ಕೆ ತಿರುಗಿ ಹೂ ಹಾಗೂ ಹಣ್ಣುಗಳನ್ನು ಬಿಡದೆ ಕುಬ್ಜವಾಗುತ್ತವೆ ಎಂದರು.

ಇದರಿಂದ ಇಳುವರಿ ಗಣನೀಯವಾಗಿ ಕುಂಠಿತವಾಗುತ್ತದೆ. ಮುಟುರು ರೋಗಕ್ಕೆ ನಾಂದಿಯಾದಇನ್ನೊಂದು ಮುಖ್ಯ ಕೀಟವಂದರೆ ಮೈಟ್‌ ನುಸಿ. ಇದು ತಿಳಿ ಹಸಿರು ಹಾಗೂ ಬಿಳಿ ಬಣ್ಣದಾಗಿದ್ದು, ಎಲೆಗಳಕೆಳಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತದೆ.ಇವುಗಳ ರಸ ಹೀರುವಿಕೆಯಿಂದ ಎಲೆಗಳು ಅಂಚಿನಿಂದ ಹೊರ ಮಗ್ಗುಲಿಗೆ ಮುದುರಿಕೊಳ್ಳುತ್ತವೆ. ಅವುಗಳದೇಟು ಉದ್ದವಾಗಿರುತ್ತವೆ. ಇದಕ್ಕೆ ಹೊರ ಮುಟುರುರೋಗವೆಂದು ಕರೆಯುತ್ತಾರೆ. ಈ ಎರಡು ಬಗೆಯಮುಟುರು ರೋಗಗಳು ಏಕಕಾಲದಲ್ಲಿ ತೀವ್ರತರಕಾಣಿಸಿಕೊಂಡು, ಇವುಗಳ ಹತೋಟಿಗಾಗಿ ವಿವಿಧಬಗೆಯ ಕೀಟನಾಶಕಗಳನ್ನು ಸಿಂಪಡಣೆ ಮಾಡಿದರೂ ಹತೋಟಿಗೆ ಬರುವುದು ಕಷ್ಟ. ಈ ಮುಟುರು ರೋಗದನಿಯಂತ್ರಣಕ್ಕಾಗಿ ಸಮಗ್ರ ಕೀಟ ನಿರ್ವಹಣೆ ಅಂಶ ಅತೀ ಅವಶ್ಯಕವಾಗಿದೆ. ಈ ದಿಸೆಯಲ್ಲಿ ಬ್ಯಾರಿಯರ್‌(ತಡೆ) ಬೆಳೆ ಒಂದು ಅತ್ಯುತ್ತಮ ಮುಟುರು ರೋಗ ನಿರ್ವಹಣಾ ಪದ್ಧತಿಯಾಗಿ ಪರಿಣಮಿಸಿದೆ ಎಂದರು.

ತಡೆ ಬೆಳೆ ಬೆಳೆಯುವ ವಿಧಾನವೆಂದರೆ, ಈ ತಡೆಬೆಳೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಮೆಣಸಿನಸಸಿ ನಾಟಿ ಮಾಡುವ 10-15 ದಿನಗಳ ಪೂರ್ವದಲ್ಲಿಕೂರಿಗೆಯಿಂದ ಬಿತ್ತನೆ ಮಾಡಬೇಕು ಹಾಗೂ ತಡೆ ಬೆಳೆಗಳನ್ನು ತುಂಬಾ ಅಡುವಾಗಿ (ಶಿಫಾರಿತ ಬೀಜಪ್ರಮಾಣಕ್ಕಿಂತ ಶೇ. 25 ಜಾಸ್ತಿ) ಬಿತ್ತನೆ ಮಾಡಬೇಕು.ಪ್ರತಿ 40-50 ಸಾಲು (24 ಮೀ. ಅಥವಾ 38 ಮೀ.) ಅಂತರದಲ್ಲಿ ಮೆಣಸಿನ ಕುಣಿಗಳ ಮಧ್ಯದಲ್ಲಿ 6 ಆಥವಾ 9 ಸಾಲುಗಳಂತೆ ಬಿತ್ತನೆ ಮಾಡಬೇಕು. ಬಿತ್ತನೆ ಮಾಡುವಾಗ ಸಾಲುಗಳು ಉತ್ತರ-ದಕ್ಷಿಣವಾಗಿ ಇರುವಂತೆ ಬಿತ್ತನೆ ಮಾಡಬೇಕು. ಈ ರೀತಿ ಬಿತ್ತುವು ದರಿಂದ ಪಶ್ಚಿಮದಿಂದ-ಪೂರ್ವಕ್ಕೆ (ಮುಂಗಾರು ಸಮಯದ ಗಾಳಿ) ಹಾಗೂ ಪೂರ್ವದಿಂದ-ಪಶ್ಚಿಮಕ್ಕೆ (ಮೂಡುಗಾಳಿ)ಬೀಸುವ ಗಾಳಿಗೆ ಈ ಬೆಳೆ ತಡೆಯಾಗಿ ಪರಿಣಮಿಸುತ್ತದೆ. ವೈರಸ್‌ ನಂಜಾಣು ಮುಖ್ಯವಾಗಿ ಬೀಸುವ ಗಾಳಿಯಿಂದ (ಥ್ರಿಪ್ಸ್‌ ಹಾಗೂ ಮೈಟ್‌ ಮೂಲಕ ಮೆಣಸಿನ ಸಸಿಗಳಿಂದ ಸಸಿಗಳಿಗೆ ಪಸರಿಸುತ್ತದೆ. ಈ ತಡೆ ಬೆಳೆ ಮುಖ್ಯವಾಗಿ ಥ್ರಿಪ್ಸ್‌ ಹಾಗೂ ಮೈಟ್ಸ್‌ ಚಲನೆಗೆ ಅಡ್ಡಿಯಾಗಿ ವೈರಸ್‌ ಪಸರಿಸುವುದನ್ನು ಕಡಿಮೆಗೊಳಿಸುತ್ತದೆ. ಗೋವಿನ ಜೋಳವನ್ನು ತಡೆ ಬೆಳೆಯಾಗಿ ಬೆಳೆದಾಗ ಹಲವಾರುನೈಸರ್ಗಿಕ ಪರೋಪಕಾರಿ ಜೀವಿಗಳಾದ ಜೇಡ, ಗುಲ ಗುಂಜಿ ಹುಳಗಳ ಸಂಖ್ಯೆ ಅಧಿಕವಾಗುತ್ತವೆ. ಇದೇ ರೀತಿ,ಜೋಳವನ್ನು ತಡೆ ಬೆಳೆಯಾಗಿ ಬೆಳೆದಾಗ ಜೇಡಗಳ ಸಂಖ್ಯೆ ಅಧಕವಾಗುತ್ತದೆ. ಇದರಿಂದಾಗಿ ಸಹಜವಾಗಿಯೇ ಮುಟುರು ರೋಗ ಕಡಿಮೆಯಾಗುತ್ತದೆ. ಈ ರೀತಿ ತಡೆ ಬೆಳೆ ಬೆಳೆಯುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಮುಟುರು ರೋಗ ನಿಯಂತ್ರಣ ಸಾಧ್ಯವಿದೆ ಎಂದರು.

ಈ ಸಂದರ್ಭದಲ್ಲಿ ಕೇಂದ್ರದ ಮಣ್ಣು ವಿಜ್ಞಾನಿ ಡಾ|ರಾಜಕುಮಾರ ಜಿ.ಆರ್‌., ಗ್ರಾಮದ ಪ್ರಗತಿ ಪರ ರೈತರಾದ ಮಂಜಪ್ಪ ಉಜ್ಜಣ್ಣನವರ, ಶಿವಪ್ಪ ಸಿದ್ಧಪ್ಪ ರಿತ್ತಿಕುರುಬರ ಮತ್ತು ದ್ಯಾಮನಗೌಡ ಹಿರೇಗೌಡ್ರು ಇತರರಿದ್ದರು.

 

ಟಾಪ್ ನ್ಯೂಸ್

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-bbb

Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ

ajjamper-Qadri

Adi Jambava Samavesha: ಅಂಬೇಡ್ಕರ್‌ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ

Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ

CM-Siddu–Hubballi

By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.