ಬಿತ್ತನೆ ಆಲೂಗಡ್ಡೆ ದುಬಾರಿ: ರೈತ ಕಂಗಾಲು
Team Udayavani, Dec 13, 2021, 2:06 PM IST
ಬಂಗಾರಪೇಟೆ: ಪಶ್ಚಿಮ ಬಂಗಾಳ, ಪಂಜಾಬ್‌ನ ಜಲಂಧರ್‌ನಿಂದ ಬರಬೇಕಾದ ಬಿತ್ತನೆ ಆಲೂಗಡ್ಡೆ ಸ್ಥಗಿತಗೊಂಡಿರುವುದರಿಂದ ವ್ಯಾಪಾರಸ್ಥರು ದಿಢೀರ್ ಬೆಲೆ ಏರಿಕೆ ಮಾಡಿದ್ದು, ಈಗಾಗಲೇ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಬೆಳೆಗಾರರು ಕಂಗಾಲಾಗಿದ್ದಾರೆ.
ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಮಳೆಗೆ ರೈತರು ಬೆಳೆದ ರಾಗಿ, ಭತ್ತ, ತರಕಾರಿ ಸೇರಿ ವಾಣಿಜ್ಯ ಬೆಳೆ ಶೇ.60 ನಾಶವಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಗೋಳಾಡುತ್ತಿದ್ದಾರೆ. ಇದರ ಜೊತೆಗೆ ಆಲೂಗಡ್ಡೆ ಬೆಳೆಗೆ ನಿರಂತರ ಮಳೆಯಿಂದ ತೇವಾಂಶ ಹೆಚ್ಚಾಗಿ, ಅಂಗಮಾರಿ ವಕ್ಕರಿಸಿದೆ. ಲಕ್ಷಾಂತರ ರೂ. ಬಂಡವಾಳ ಹಾಕಿ ಬೆಳೆದ ಬೆಳೆ ನಾಶವಾಗಿದೆ.
ಭೂಮಿ ಹದ ಮಾಡುತ್ತಿರುವ ರೈತರು: ಅಲ್ಪ ಸ್ವಲ್ಪ ಬೆಳೆ ಕಂಡ ರೈತರ ಆಲೂಗಡ್ಡೆಗೆ ಸೂಕ್ತ ಬೆಲೆ ಇಲ್ಲದೆ ಹಾಕಿದ ಬಂಡವಾಳ ಸಹ ಹಿಂಪಡೆಯಲು ಸಾಧ್ಯ ವಾಗದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈಗ ಆಲೂಗಡ್ಡೆ ಬಿತ್ತನೆಗೆ ಸೂಕ್ತ ಸಮಯವಾಗಿದ್ದು, ಮಳೆ ಸ್ವಲ್ಪ ಬಿಡುವು ಕೊಟ್ಟಿರುವ ಕಾರಣ ರೈತರು ಆಲೂಗಡ್ಡೆ ಬಿತ್ತನೆಗೆ ಭೂಮಿಯನ್ನು ಹದ ಮಾಡಿಕೊಂಡಿದ್ದಾರೆ.
ಬಿತ್ತನೆ ಬೀಜ ದುಬಾರಿ: ಇಂತಹ ಸಂದರ್ಭದಲ್ಲಿ ಬಿತ್ತನೆ ಆಲೂಗಡ್ಡೆ ಸಾಕಷ್ಟು ಪೂರೈಕೆ ಆಗದ ಕಾರಣ, ಬೆಳೆಗಾರರು ದುಬಾರಿ ಬೆಲೆ ಕೊಟ್ಟು ಇರುವುದರಲ್ಲೇ ಖರೀದಿ ಮಾಡಬೇಕಾದ ಅನಿವಾರ್ಯತೆ ಇದೆ. ಈ ಹಿಂದೆ 1500 ರೂ.ನಿಂದ 2000 ರೂ.ಗೆ ಮಾರಾಟವಾಗುತ್ತಿದ್ದ 50 ಕೇಜಿ ತೂಕದ ಬಿತ್ತನೆ ಬೀಜ ಈಗ 2000 ದಿಂದ 5000 ರೂ.ವರೆಗೂ ಮಾರಾಟವಾಗುತ್ತಿದೆ.
ಇದರ ಜೊತೆಗೆ ರಸಗೊಬ್ಬರ ಸಹ ದುಬಾರಿಯಾಗಿದ್ದು, ದುಪ್ಪಟ್ಟು ಹಣ ನೀಡಿ ಬಿತ್ತನೆ ಬೀಜ ಖರೀದಿಸಲು ರೈತರು ಹಿಂದೇಟು ಹಾಕುವಂತಾಗಿದೆ. ಆಲೂಗಡ್ಡೆ ಬಿತ್ತನೆ ಮಾಡಲು ಸೀಸನ್ ಸಹ ಮುಗಿದಿರುವುದರಿಂದ ಅನ್‌ಸಿàಸನ್‌ನಲ್ಲಿ ಆಲೂಗಡ್ಡೆ ಬೆಳೆಯಲು ಕಷ್ಟಕರವಾಗಿದೆ.
ಬಿತ್ತನೆ ಬೀಜ ಖರೀದಿ: ಬಂಗಾರಪೇಟೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ನಂ.12 ಗಾತ್ರದ ಬಿತ್ತನೆ ಅಲೂಗಡ್ಡೆ 2000 ರೂ., ನಂ.11 ಗಾತ್ರಕ್ಕೆ 2500 ರೂ., ನಂ.10 ಗಾತ್ರಕ್ಕೆ 3000 ರೂ., ನಂ.8 ಗಾತ್ರದ ಬಿತ್ತನೆ ಆಲೂಗಡ್ಡೆ 4000 ರೂ.ನಿಂದ 5000 ರೂ.ಗೆ ಮಾರಾಟವಾಗುತ್ತಿದೆ. ಇಷ್ಟು ಬೆಲೆಯನ್ನು ನೀಡಿ ಬಿತ್ತನೆ ಬೀಜವನ್ನು ಖರೀದಿ ಮಾಡಿ ಬಿತ್ತನೆ ಮಾಡಬೇಕಾದ ಅನಿವಾರ್ಯ ಬೆಳೆಗಾರರದ್ದಾಗಿದೆ.
ಪ್ರತಿ ವರ್ಷ ಬಿತ್ತನೆ ಬೀಜ ವಿಚಾರದಲ್ಲಿ ಗೊಂದಲ ಸೃಷ್ಟಿ ಆಗುತ್ತಲೇ ಇದೆ. ರೈತರು ಶೋಚನೀಯ ಸ್ಥಿತಿಯಲ್ಲಿದ್ದಾರೆ. ತೋಟಗಾರಿಕೆ ಇಲಾಖೆಯವರು ಈಗಲಾದರೂ ಎಚ್ಚೆತ್ತುಕೊಂಡು ಬೆಲೆ ಏರಿಕೆಗೆ ಕಡಿವಾಣ ಹಾಕಿ ಬಿತ್ತನೆ ಬೀಜಕ್ಕೆ ಬೆಲೆ ನಿಗದಿ ಮಾಡುವಂತೆ ರೈತರು ಒತ್ತಾಯಿಸಿದ್ದಾರೆ.
“ಮಳೆ ಹೆಚ್ಚಾಗಿದ್ದರಿಂದ ಬೆಳೆ ಕಳೆದುಕೊಂಡ ರೈತರು, ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಈಗ ಬಿತ್ತನೆ ಆಲೂಗಡ್ಡೆ ದುಬಾರಿಯಾಗಿ, ಬೆಳೆ ಬೆಳೆಯುವುದು ಹೇಗೆ ಎಂಬ ಆತಂಕದಲ್ಲಿ ಇದ್ದಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬೆಲೆ ಏರಿಕೆಗೆ ಕಡಿವಾಣ ಹಾಕಿ, ಬೆಲೆ ನಿಗದಿ ಮಾಡಲು ಮುಂದಾಗಬೇಕು.” ●ಎಂ.ಸಂಪಂಗಿರೆಡ್ಡಿ, ರೈತರು, ಮಾಗೊಂದಿ
“ಇತ್ತೀಚೆಗೆ ಸುರಿದ ಮಳೆಯಿಂದಾಗಿ ಆಲೂಗಡ್ಡೆ ಬೆಳೆ ನಾಶವಾದ ಕಾರಣ, ಬಿತ್ತನೆ ಬೀಜ ಆಮದು ಆಗುತ್ತಿಲ್ಲ. ಜಿಲ್ಲೆಗೆ ಪಂಜಾಬ್ ರಾಜ್ಯದ ಜಲಾಂಧರ್‌ನಿಂದ ಬಿತ್ತನೆ ಬೀಜ ಬರುತ್ತಿದ್ದು, ಅಲ್ಲಿ ಬೆಲೆ ಏರಿಕೆ ಮಾಡಿರುವುದರಿಂದ ಇಲ್ಲಿನ ವ್ಯಾಪಾರಸ್ಥರು ಸಹ ಬೆಲೆಯನ್ನು ಹೆಚ್ಚು ಮಾಡಿದ್ದಾರೆ. ಬಿತ್ತನೆ ಆಲೂಗಡ್ಡೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಅಲ್ಲಿ ಒಂದು ತಿಂಗಳಿನಿಂದ ಬಿದ್ದ ಭಾರೀ ಮಳೆಯಿಂದಾಗಿ ಬೆಳೆ ನಾಶವಾಗಿರುವುದ ರಿಂದ ಬಿತ್ತನೆ ಆಲೂ ಗಡ್ಡೆ ಬೆಲೆ ಹೆಚ್ಚಾಗಲು ಕಾರಣವಾಗಿದೆ.” ●ಆರ್.ರವಿ, ಬಿತ್ತನೆ ಆಲೂಗಡ್ಡೆ ಮಾರಾಟಗಾರರು, ಕಾರಹಳ್ಳಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.