![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Dec 13, 2021, 2:43 PM IST
ಕಿಕ್ಕೇರಿ: ಹೋಬಳಿಯ ಗಡಿಯಂಚಿನಲ್ಲಿರುವ ಗೋವಿಂದನಹಳ್ಳಿ ಗ್ರಾಮದಲ್ಲಿ ಪಂಚಲಿಂಗೇಶ್ವರ ದೇಗುಲ ಮಾತ್ರ ತಿಳಿದಿದ್ದು, ಮತ್ತೂಂದು ಸುಂದರ ವೇಣುಗೋಪಾಲಸ್ವಾಮಿ ದೇಗುಲ ಇರುವುದು ಬಹುತೇಕರಿಗೆ ತಿಳಿದಿಲ್ಲದಂತಿದೆ. ಗ್ರಾಮದ ಒಳಗಿರುವ ದೇಗುಲ ಹೊಯ್ಸಳರ ಕಾಲದಲ್ಲಿ ನಿರ್ಮಿತವಾಗಿದ್ದು, ನೋಡಲು ಮೋಹಕವಾಗಿದೆ.
ಸಮರ್ಪಕ ನಿರ್ವಹಣೆ ಇಲ್ಲದೇ ದೇಗುಲ ಕುಸಿಯುವ ಹಂತ ತಲುಪಿದೆ. ಮಳೆಗಾಲದಲ್ಲಿ ದೇಗುಲದೊಳಗೆ ನೀರು ಸೋರಿದರೆ, ಬಿಸಿಲುಗಾಲದಲ್ಲಿ ಪ್ರಖರ ಬೆಳಕು ದೇಗುಲದ ಒಳಗೆ ನುಸುಳುತ್ತಿದೆ.
ತಳಪಾಯಕ್ಕೆ ಅಪಾಯ: ದೇಗುಲದ ಸುತ್ತ, ದೇಗುಲದ ಗೋಪುರ, ಕಲ್ಲಿನ ಸಂಧುಗಳಲ್ಲಿ ಮರದ ಬೇರು ಬಿಟ್ಟಿದೆ. ಪರಿಣಾಮ ದೇಗುಲದ ಬೃಹತ್ ಕಲ್ಲುಗಳು ಒಂದೊಂದಾಗಿ ನೆಲಕ್ಕೆ ಉರುಳುತ್ತಿವೆ. ಕಲ್ಲಿನ ಮೇಲೆ ಕಲ್ಲು ಹೂವು ಬೆಳೆದು ಕಲ್ಲಿನ ಪುಡಿ ಉದುರುವಂತಾಗಿದೆ. ಪರಿಣಾಮ ಇಡೀ ದೇಗುಲ ಅವಸಾನದ ಹಾದಿ ತಲುಪುವಂತಾಗಿದೆ.
ಇದನ್ನೂ ಓದಿ;- ದಿಢೀರ್ ಬೆಳವಣಿಗೆ: ಸಂಸತ್ ಅಧಿವೇಶನ ರದ್ದುಗೊಳಿಸಿ ಸಿಂಗಾಪುರಕ್ಕೆ ತೆರಳಿದ ಅಧ್ಯಕ್ಷ ಗೋಟಬಯಾ
ದೇಗುಲದ ಕಲ್ಲುಗಳು ಒಂದೊಂದಾಗಿ ಬಾಗಿ ಕುಸಿಯುತ್ತ ತಳಪಾಯಕ್ಕೆ ಅಪಾಯ ತಟ್ಟುವಂತಾಗಿದೆ. ಬಿದ್ದ ಕಲ್ಲುಗಳು ಬಹುತೇಕ ಹಲವು ಕಿಡಿಗೇಡಿಗಳ ಪಾಲಾಗುತ್ತಿವೆ. ಮತ್ತೆ ಕೆಲವು ಸುಂದರ ಚಿತ್ತಾರ ಬಿಡಿಸಿರುವ ಕಲ್ಲುಗಳು ಜಾನುವಾರು ಕಟ್ಟಿಹಾಕುವ ಗೂಟವಾಗುತ್ತಿವೆ. ಕಲ್ಲಿನಲ್ಲಿನ ಮೋಹಕ ಶಿಲ್ಪಗಳನ್ನು ಕಿಡಿಗೇಡಿಗಳು ಕೆತ್ತಿ ಹಾಳು ಮಾಡಿರುವುದು ಕಂಡು ಬರುತ್ತಿದೆ. ಅಳಿದುಳಿ ದಿರುವ ವೇಣುಗೋಪಾಲಸ್ವಾಮಿ ಮೂರ್ತಿ ಪೂಜೆಗೆ ಅರ್ಹವಾಗಿರುವುದು ಪುಣ್ಯವೆನಿಸಿದೆ.
ಕಾಯಕಲ್ಪ ಬೇಕಿದೆ: ಜಿಲ್ಲೆಯಲ್ಲಿರುವ ಬೆರಳೆಣಿ ಕೆಯ ವೇಣುಗೋಪಾಲಸ್ವಾಮಿ ದೇವಾಲಯ ದಲ್ಲಿ ಇದು ಅಪರೂಪದ ಸುಂದರ ದೇಗುಲವಾಗಿದೆ. ಉಳಿವಿಗಾಗಿ ಸಾಕಷ್ಟು ಮನವಿ ಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ. ದೇಗುಲ ಜೀಣೊìದ್ಧಾರವಾದರೆ ರಾಜ್ಯದಲ್ಲಿಯೇ ಉತ್ತಮ ಪ್ರವಾಸಿ ಕೇಂದ್ರ ನಮ್ಮ ಗ್ರಾಮವಾಗಲಿದೆ ಎನ್ನುವುದು ನ್ಯಾಯಬೆಲೆ ಸೋಮಣ್ಣ ಅವರ ನುಡಿಯಾಗಿದೆ.
ಕನಸಿನ ಮಾತಾದ ಜೀರ್ಣೋದ್ಧಾರ
ದೇಗುಲದ ಒಳಾಂಗಣದಲ್ಲಿನ ಗರ್ಭಗುಡಿ, ನವರಂಗದಲ್ಲಿನ ಚಿತ್ತಾರ ಮೋಹಕವಾಗಿದ್ದು ಹಾಳಾಗದೆ ಉಳಿದಿದೆ. ನೋಡುಗರ ಮನಸ್ಸಿಗೆ ಶಿಲ್ಪಕಲೆಯ ಸಣ್ಣ ಕುಸುರಿ ಕೆಲಸ ಬೆರಗುಗೊಳಿಸುವಂತಿದೆ. ದೇಗುಲ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು ಪೂಜಾ ಕೈಂಕರ್ಯ ಮಾತ್ರ ನಡೆಯುತ್ತಿದ್ದು, ಜೀರ್ಣೋದ್ಧಾರ ಕನಸಿನ ಮಾತಾಗಿದೆ ಎನ್ನುವುದು ಗ್ರಾಮದ ಜನತೆ ನಿವೇದನೆಯಾಗಿದೆ.
ತುರ್ತು ದೇಗುಲ ಉಳಿವಿಗೆ ರಾಜ್ಯ, ಕೇಂದ್ರ ಪುರಾತತ್ವ ಇಲಾಖೆ ಮುಂದಾಗಬೇಕಿದೆ. ಇಲ್ಲವಾದರೆ ದೇಗುಲವನ್ನು ಮುಂದಿನ ದಿನಗಳಲ್ಲಿ ಚಿತ್ರಪಟದಲ್ಲಿ ನೋಡಬೇಕಾದ ಸಂದಿಗ್ಧತೆ ಕಾಣಬೇಕಾಗಬಹುದು ಎಂಬುದು ಸ್ಥಳೀಕರ ಮೌನ ವೇದನೆಯಾಗಿದೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.